Sagara city : police take out route march on august 26 ಸಾಗರದಲ್ಲಿ ಪೊಲೀಸರಿಂದ ಪಥ ಸಂಚಲನ!

sagara | ಸಾಗರದಲ್ಲಿ ಪೊಲೀಸರಿಂದ ಪಥ ಸಂಚಲನ!

ಸಾಗರ (sagara), ಆಗಸ್ಟ್ 26: ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ, ಆಗಸ್ಟ್ 26 ರಂದು ಸಾಗರ ನಗರದಲ್ಲಿ ವಿವಿಧ ಪಡೆಗಳ ಪೊಲೀಸರು ಪಥ ಸಂಚಲನ ನಡೆಸಿದರು.

ವಿಶೇಷ ಕಾರ್ಯಪಡೆ, ಕ್ಷಿಪ್ರ ಕಾರ್ಯಪಡೆ ಹಾಗೂ ಸ್ಥಳೀಯ ಠಾಣೆಗಳ ಪೊಲೀಸರು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು ಎಂದು ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಗರದ ಎಸ್ ಎನ್  ನಗರದಿಂದ  ಪ್ರಾರಂಭವಾದ ಪಥ ಸಂಚಲನವು ಆವಿನಹಳ್ಳಿ ರಸ್ತೆ, ಮಹಾಲಕ್ಷ್ಮಿ ರೈಸ್ ಮಿಲ್, ಜನ್ನತ್ ನಗರ ಕಬರಸ್ಥಾನ, ಉಪ್ಪಾರ ಕೇರಿ ಸರ್ಕಲ್, ನೆಹರು ನಗರ ಅರಳಿ ಕಟ್ಟೆ,

ಫಿಶ್ ಮಾರ್ಕೆಟ್, ಆಜಾದ್ ಮಸೀದಿ, ಅಶೋಕ ರಸ್ತೆ, ಸಾಗರ್ ಸರ್ಕಲ್, ಮಾರಿಗುಡಿ, ಐತಪ್ಪ ಸರ್ಕಲ್ ಮೂಲಕ ಗಣಪತಿ ಕೆರೆ ಜಾಮಿಯಾ ಮಸೀದಿಯ ಹತ್ತಿರ  ಅಂತ್ಯಗೊಂಡಿತು.

ಪಥ ಸಂಚಲನದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಸ್ ರಮೇಶ್ ಕುಮಾರ್, ಬೆನಕ ಪ್ರಸಾದ್ ಸೇರಿದಂತೆ ಎಸ್ಎಫ್, ಆರ್’ಎಎಫ್ ತುಕಡಿಗಳು, ಸಾಗರ ನಗರ, ಗ್ರಾಮಾಂತರ, ಕಾರ್ಗಲ್ ಪೊಲೀಸ್ ಠಾಣೆಗಳ ಅಧಿಕಾರಿ – ಸಿಬ್ಬಂದಿಗಳು ಭಾಗಿಯಾಗಿದ್ದರು.

Sagar, August 26: In the wake of the Gauri Ganesh and Eid Milad festivals, police from various forces conducted a parade in Sagar city on August 26. The district police department said in a statement issued on August 26 that police from the Special Task Force, Rapid Action Force and local police stations participated in the procession.

Live interviews from reputed companies on August 29th at Shivamogga Employment Exchange Office ಶಿವಮೊಗ್ಗ ಉದ್ಯೋಗ ವಿನಿಮಯ ಕಚೇರಿಯಲ್ಲಿ ಪ್ರತಿಷ್ಠಿತ ಕಂಪೆನಿಗಳಿಂದ ಆಗಸ್ಟ್ 29 ರಂದು ನೇರ ಸಂದರ್ಶನ Previous post shimoga news | ಶಿವಮೊಗ್ಗ ಉದ್ಯೋಗ ವಿನಿಮಯ ಕಚೇರಿಯಲ್ಲಿ ಪ್ರತಿಷ್ಠಿತ ಕಂಪೆನಿಗಳಿಂದ ಆಗಸ್ಟ್ 29 ರಂದು ನೇರ ಸಂದರ್ಶನ
shimoga APMC vegetable prices | Details of vegetable prices for September 26 in Shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 26 ರ ತರಕಾರಿ ಬೆಲೆಗಳ ವಿವರ Next post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಆಗಸ್ಟ್ 27 ರ ತರಕಾರಿ ಬೆಲೆಗಳ ವಿವರ