Shivamogga: Tragic incident during Navratri - Student dies due to electric shock! ಶಿವಮೊಗ್ಗ : ನವರಾತ್ರಿ ವೇಳೆ ದುರ್ಘಟನೆ - ವಿದ್ಯುತ್ ಶಾಕ್ ನಿಂದ ವಿದ್ಯಾರ್ಥಿ ಸಾವು!

shimoga | ಶಿವಮೊಗ್ಗ : ನವರಾತ್ರಿ ವೇಳೆ ದುರ್ಘಟನೆ – ವಿದ್ಯುತ್ ಶಾಕ್ ನಿಂದ ವಿದ್ಯಾರ್ಥಿ ಸಾ**ವು!

ಶಿವಮೊಗ್ಗ, ಸೆಪ್ಟೆಂಬರ್ 27: ದಸರಾ ಹಬ್ಬದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಮಾಡಿದ್ದ ವಿದ್ಯುತ್ ದೀಪಾಲಂಕಾರದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ, ವಿದ್ಯಾರ್ಥಿಯೋರ್ವ ಮೃ**ತಪಟ್ಟ ದಾರುಣ ಘಟನೆ, ಶಿವಮೊಗ್ಗ ತಾಲೂಕಿನ ಹಾಡೋನಹಳ್ಳಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಸಮರ್ಥ (14) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಶಿವಮೊಗ್ಗದ ಖಾಸಗಿ ಶಾಲೆಯೊಂದರಲ್ಲಿ 9 ನೇ ತರಗತಿ ಅಭ್ಯಾಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.  

ಹಾಡೋನಹಳ್ಳಿ ಗ್ರಾಮದ ಅಂಬಾ ಭವಾನಿ ದೇವಾಲಯಕ್ಕೆ, ನವರಾತ್ರಿ ಹಬ್ಬದ ಅಂಗವಾಗಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ದೇವಾಲಯದ ಗೇಟ್ ಗೆ ಹಾಕಲಾಗಿದ್ದ ವಿದ್ಯುತ್ ದೀಪಾಲಂಕಾರದ ವೈಯರ್ ನಿಂದ ವಿದ್ಯುತ್ ಪ್ರವಹಿಸಲಾರಂಭಿಸಿದೆ. ದೇವಾಲಯಕ್ಕೆ ಆಗಮಿಸಿದ ಬಾಲಕ ಗೇಟ್ ಮುಟ್ಟಿದ ವೇಳೆ, ಬಾಲಕನಿಗೆ ವಿದ್ಯುತ್ ಶಾಕ್ ಹೊಡೆದಿದೆ.

ಕುಸಿದು ಬಿದ್ದ ಬಾಲಕನನ್ನು ತಕ್ಷಣವೇ ಗ್ರಾಮಸ್ಥರು ಹೊಳಲೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಶಿವಮೊಗ್ಗದ ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆಯೇ ಅ*ಸುನೀಗಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

Shivamogga, September 27: A tragic incident took place on Friday evening in Hadonahalli, Shivamogga taluk, where a student d**ied after being accidentally electrocuted during the lighting of electric lamps at a temple in the run-up to the Dasara festival.

Shivamogga Jayanagar police operation : Thirthahalli College employee involved in 3 chain robberies arrested! ಶಿವಮೊಗ್ಗ ಜಯನಗರ ಠಾಣೆ ಪೊಲೀಸರ ಕಾರ್ಯಾಚರಣೆ : 3 ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ತೀರ್ಥಹಳ್ಳಿ ಕಾಲೇಜ್ ನೌಕರ ಅರೆಸ್ಟ್! Previous post shimoga crime news | ಶಿವಮೊಗ್ಗ ಜಯನಗರ ಠಾಣೆ ಪೊಲೀಸರ ಕಾರ್ಯಾಚರಣೆ : 3 ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ ತೀರ್ಥಹಳ್ಳಿ ಕಾಲೇಜ್ ನೌಕರ ಅರೆಸ್ಟ್!