Sagara: Head-on collision between government bus and school bus! ಸಾಗರ : ಸರ್ಕಾರಿ ಬಸ್ – ಶಾಲಾ ಬಸ್ ನಡುವೆ ಮುಖಾಮುಖಿ ಡಿಕ್ಕಿ!

sagara accident news | ಸಾಗರ : ಸರ್ಕಾರಿ ಬಸ್ – ಶಾಲಾ ಬಸ್ ನಡುವೆ ಮುಖಾಮುಖಿ ಡಿಕ್ಕಿ!

ಸಾಗರ (sagar), ಡಿಸೆಂಬರ್ 18: ಕೆಎಸ್ಆರ್’ಟಿಸಿ ಬಸ್ ಹಾಗೂ ಶಾಲಾ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ, ಡಿಸೆಂಬರ್ 18 ರ ಬೆಳಿಗ್ಗೆ ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಇಡುವಾಣಿ ಎಂಬಲ್ಲಿ ನಡೆದಿದೆ.

ಜೋಗ ಹಾಗೂ ಕಾರ್ಗಲ್ ಭಾಗದಿಂದ ಸಾಗರಕ್ಕೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಹಾಗೂ ಸಾಗರದಿಂದ ಕಾರ್ಗಲ್ ಮಾರ್ಗವಾಗಿ ಸಿಗಂದೂರಿಗೆ ತೆರಳುತ್ತಿದ್ದ ಕೆಎಸ್ಆರ್’ಟಿಸಿ ಬಸ್ ನಡುವೆ ಈ ಅವಘಡ ಸಂಭವಿಸಿದೆ.

ಶಾಲಾ ಬಸ್ ನಲ್ಲಿ ಸುಮಾರು 15 ಮಕ್ಕಳು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ ಎರಡೂ ಬಸ್ ಗಳಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ. ಹಾಗೆಯೇ ಎರಡು ಬಸ್ ಗಳ ಚಾಲಕರಿಗೂ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗಾಯಾಳುಗಳನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಕಾರ್ಗಲ್ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದು, ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Sagar, December 18: A head-on collision between a KSRTC bus and a school bus took place on the morning of December 18 at Iduvani near Kargal in Sagar taluk.

Shimoga Corporation area revision, ward reservation determination: Urban Development Minister's important answer to MLA Channabasappa's question! ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ - ವಾರ್ಡ್ ಮೀಸಲಾತಿ ನಿಗದಿ : ಶಾಸಕ ಚನ್ನಬಸಪ್ಪ ಪ್ರಶ್ನೆಗೆ ನಗರಾಭಿವೃದ್ದಿ ಸಚಿವರ ಮಹತ್ವದ ಉತ್ತರ! Previous post shimoga news | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ – ವಾರ್ಡ್ ಮೀಸಲಾತಿ ನಿಗದಿ ವಿಳಂಬ : ಸರ್ಕಾರಕ್ಕೆ ಶಾಸಕ ಚನ್ನಬಸಪ್ಪ ಆಗ್ರಹವೇನು?
Legislative Council MLA DS Arun urges Revenue Minister to rectify division letter confusion! ವಿಭಾಗ ಪತ್ರ ಗೊಂದಲ ಸರಿಪಡಿಸಲು ಕಂದಾಯ ಸಚಿವರಿಗೆ ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಆಗ್ರಹ! Next post news update | ವಿಭಾಗ ಪತ್ರ ಗೊಂದಲ ಸರಿಪಡಿಸಲು ಕಂದಾಯ ಸಚಿವರಿಗೆ ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಆಗ್ರಹ!