Sagara Sub-Jail faces another problem: What is it? What is the reason? ಸಾಗರ ಉಪ ಕಾರಾಗೃಹಕ್ಕೆ ಎದುರಾಗಿದೆ ಮತ್ತೊಂದು ಸಂಕಷ್ಟ : ಏನದು? ಕಾರಣವೇನು? ವರದಿ : ಬಿ. ರೇಣುಕೇಶ್ reporter : b renukesha

sagara sub jail | ಸಾಗರ ಉಪ ಕಾರಾಗೃಹಕ್ಕೆ ಎದುರಾಗಿದೆ ಮತ್ತೊಂದು ಸಂಕಷ್ಟ : ಏನದು? ಕಾರಣವೇನು?

ಸಾಗರ (sagara), ಅಕ್ಟೋಬರ್ 7: ಸಾಗರ ಪಟ್ಟಣದಲ್ಲಿರುವ ಉಪ ಕಾರಾಗೃಹದ ಮತ್ತೊಂದು ಬದಿಯ ಕಾಂಪೌಂಡ್ ಗೋಡೆಯು ಶಿಥಿಲಾವಸ್ಥೆಯಲ್ಲಿದ್ದು, ಕುಸಿದು ಬೀಳುವ ಸ್ಥಿತಿಯಲ್ಲಿದೆ. ಇದರಿಂದ ಸದ್ಯಕ್ಕೆ ಕಾರಾಗೃಹ ಕಟ್ಟಡ ಪುನಾರಾರಂಭಗೊಳ್ಳುವ ಸಾಧ್ಯತೆಯಿಲ್ಲವಾಗಿದೆ!

ಕಳೆದ 2023 ರ ಜುಲೈ ತಿಂಗಳಲ್ಲಿ ಬಿದ್ದ ಭಾರೀ ಮಳೆಯ ವೇಳೆ, ವರದಾ ರಸ್ತೆಯಲ್ಲಿರುವ ಜೈಲ್ ಕಟ್ಟಡದ ಕಾಂಪೌಂಡ್ ಗೋಡೆ ಕುಸಿದು ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿನ ವಿಚಾರಣಾಧೀನ ಕೈದಿಗಳನ್ನು ಶಿವಮೊಗ್ಗ ಸೆಂಟ್ರಲ್ ಜೈಲ್ ಗೆ ಸ್ಥಳಾಂತರಿಸಲಾಗಿತ್ತು.

ಕಾಂಪೌಂಡ್ ಗೋಡೆ ದುರಸ್ತಿಗೆಂದು, ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯು ಸುಮಾರು 1.80 ಕೋಟಿ ರೂ. ಬಿಡುಗಡೆ ಮಾಡಿತ್ತು. ಪಿಡಬ್ಲ್ಯೂಡಿ ಇಲಾಖೆ ಮೂಲಕ, ಗೋಡೆ ನಿರ್ಮಾಣ ಕಾರ್ಯ ನಡೆಸಲಾಗಿತ್ತು.

ಕಳೆದ ಸರಿಸುಮಾರು 8 ತಿಂಗಳ ಹಿಂದೆಯೇ ನಿರ್ಮಾಣ ಕಾರ್ಯ ಪೂರ್ಣಗೊಳಿಸಿರುವ ಪಿಡಬ್ಲ್ಯೂಡಿ ಇಲಾಖೆ, ಕಟ್ಟಡವನ್ನು ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಸುಪರ್ದಿಗೆ ಹಸ್ತಾಂತರಿಸಿದೆ.

ಸದರಿ ಕಟ್ಟಡ ಪುನಾರಾರಂಭದ ಸಿದ್ದತೆ ನಡೆಸುತ್ತಿದ್ದ ವೇಳೆಯೇ, ಜೈಲ್ ನ ಮತ್ತೊಂದು ಬದಿಯ ಕಾಂಪೌಂಡ್ ಗೋಡೆಯು ಶಿಥಿಲಾವಸ್ಥೆಯಲ್ಲಿದ್ದು, ಅದು ಕೂಡ ಕುಸಿದು ಬೀಳುವ ಸ್ಥಿತಿಯಲ್ಲಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಈ ಕಾರಣದಿಂದ ಅಪಾಯಕಾರಿ ಸ್ಥಿತಿಯಲ್ಲಿರುವ ಗೋಡೆ ಕೆಡವಿ, ಹೊಸ ಗೋಡೆ ನಿರ್ಮಾಣಕ್ಕೆ ಅನುಮತಿ ಕೋರಿ, ಕಾರಾಗೃಹ ಇಲಾಖೆಯು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಲ್ಲಿಯವರೆಗೂ ಕಟ್ಟಡ ಪುನಾರಾರಂಭಗೊಳಿಸದಿರುವ ನಿರ್ಧಾರ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೊದಲೇ ಗಮನಿಸಿಲ್ಲವೇಕೆ? : ಕಳೆದ ಮೂರು ವರ್ಷದ ಹಿಂದೆ ಕಟ್ಟಡದ ಕಾಂಪೌಂಡ್ ಗೋಡೆ ಕುಸಿದು ಬಿದ್ದ ವೇಳೆಯೇ, ಮತ್ತೊಂದು ಬದಿಯ ಕಾಂಪೌಂಡ್ ಗೋಡೆಯು ಅಪಾಯಕಾರಿ ಸ್ಥಿತಿಯಲ್ಲಿತ್ತು. ಆ ವೇಳೆಯೇ ಸದರಿ ಗೋಡೆ ನಿರ್ಮಾಣಕ್ಕೂ ಅಧಿಕಾರಿಗಳು ಯೋಜನಾ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರೆ, ಈ ವೇಳೆಗಾಗಲೇ ಜೈಲ್ ಕಾರ್ಯಾರಂಭಗೊಳ್ಳುತ್ತಿತ್ತು ಎಂಬುವುದು ನಾಗರೀಕರ ಅಭಿಪ್ರಾಯವಾಗಿದೆ.

ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣರವರು ಇತ್ತ ಗಮನಹರಿಸಬೇಕಾಗಿದೆ. ಜೈಲ್ ಕಟ್ಟಡದ ಮತ್ತೊಂದು ಬದಿಯ ಗೋಡೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಅಗತ್ಯವಿರುವ ಅನುದಾನ ಮಂಜೂರು ಮಾಡಿಸಿ, ಕಾಲಮಿತಿಯೊಳಗೆ ಕಟ್ಟಡ ಪುನಾರಾರಂಭಕ್ಕೆ ಅಗತ್ಯಕ್ರಮಕೈಗೊಳ್ಳುವರೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

*** ಸಾಗರ ಉಪ ಕಾರಾಗೃಹವನ್ನು 1971 ರಲ್ಲಿ ನಿರ್ಮಿಸಲಾಗಿತ್ತು. ವಿಚಾರಣಾಧೀನ ಕೈದಿಗಳನ್ನಿರಿಸಲಾಗುತ್ತಿತ್ತು. ಸಾಗರ, ಸೊರಬ, ಶಿಕಾರಿಪುರ, ಸಿದ್ದಾಪುರ ತಾಲೂಕುಗಳ ವಿಚಾರಣಾಧೀನ ಕೈದಿಗಳಿಗೆ ಸಾಕಷ್ಟು ಅನುಕೂಲವಾಗಿತ್ತು. ಪೊಲೀಸ್ ಇಲಾಖೆಗೂ ಸಹಕಾರಿಯಾಗಿತ್ತು. ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಉಪ ಕಾರಾಗೃಹದ ಕಾರ್ಯನಿರ್ವಹಣೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಸಾಗರ ಸುತ್ತಮುತ್ತಲಿನ ತಾಲೂಕುಗಳ ವಿಚಾರಣಾಧೀನ ಕೈದಿಗಳನ್ನು ಶಿವಮೊಗ್ಗ ಸೆಂಟ್ರಲ್ ಜೈಲ್ ಗೆ ಕರೆತರುವಂತಾಗಿದೆ. ಇದು ಪೊಲೀಸರಿಗೂ ಹೊರೆಯಾಗಿದೆ. ಹಾಗೆಯೇ ವಿಚಾರಣಾಧೀನ ಕೈದಿಗಳು ಹಾಗೂ ಅವರ ಕುಟುಂಬಸ್ಥರಿಗೂ ತೊಂದರೆಯಾಗಿ ಪರಿಣಮಿಸಿದೆ. ತಕ್ಷಣವೇ ಗೃಹ ಸಚಿವರು, ಕಾರಾಗೃಹ ಇಲಾಖೆ ಅಧಿಕಾರಿಗಳು ಸಾಗರ ಉಪ ಕಾರಾಗೃಹ ಕಾರ್ಯಾರಂಭಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ.

Sagar, October 7: The compound wall on the other side of the sub-jail in Sagar town is in a dilapidated state and is in a state of collapse. This makes it unlikely that the prison building will be reopened for the time being! During heavy rains in July 2023, the compound wall of the jail building on Varada Road collapsed. In this context, the undertrial prisoners here were shifted to the Shivamogga Central Jail.

 

 

Shivamogga: Power outages in various places on October 9th! ಶಿವಮೊಗ್ಗ : ಅಕ್ಟೋಬರ್ 9 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Previous post shimoga | power cut news | ಶಿವಮೊಗ್ಗ : ಅಕ್ಟೋಬರ್ 9 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!
Survey: Holiday for government and aided schools till October 18 - Exemption for PUC lecturers! ಸಮೀಕ್ಷೆ : ಅಕ್ಟೋಬರ್ 18 ರ ವರೆಗೆ ಸರ್ಕಾರಿ - ಅನುದಾನಿತ ಶಾಲೆಗಳಿಗೆ ರಜೆ - PUC ಉಪನ್ಯಾಸಕರಿಗೆ ವಿನಾಯ್ತಿ! Next post bengaluru | ಸಮೀಕ್ಷೆ : ಅಕ್ಟೋಬರ್ 18 ರ ವರೆಗೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ರಜೆ – PUC ಉಪನ್ಯಾಸಕರಿಗೆ ವಿನಾಯ್ತಿ!