
sagar | ಸಾಗರ : ದೇವರ ಮಾಂಗಲ್ಯ ಸರ ಕದ್ದವ ಕೊನೆಗೂ ಸಿಕ್ಕಿಬಿದ್ದ!
ಸಾಗರ (sagara), ಫೆ. 13: ದೇವಾಲಯವೊಂದರಲ್ಲಿ ದೇವರ ಮೂರ್ತಿ ಮೇಲಿದ್ದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಆರೋಪಿಯನ್ನು, ಸಾಗರ ಪೇಟೆ ಠಾಣೆ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಸಾಗರ ತಾಲೂಕಿನ ಶಿರವಂತೆ ಗ್ರಾಮದ ನಿವಾಸಿ ಶಿವಕುಮಾರ್ (39) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಆರೋಪಿಯಿಂದ 2 ಲಕ್ಷ ರೂ. ಮೌಲ್ಯದ 30 ಗ್ರಾಂ 570 ಮಿಲಿ ತೂಕದ ಬಂಗಾರದ ಮಾಂಗಲ್ಯ ಸರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಮೇಲ್ವಿಚಾರಣೆಯಲ್ಲಿ ಸಾಗರ ಪೇಟೆ ಠಾಣೆ ಇನ್ಸ್’ಪೆಕ್ಟರ್ ಪುಲ್ಲಯ್ಯ ರಾಥೋಡ್, ಸಬ್ ಇನ್ಸ್’ಪೆಕ್ಟರ್ ಯಲ್ಲಪ್ಪ ಯರಗಣ್ಣನವರ್, ಸಿಬ್ಬಂದಿಗಳಾದ ಸನಾವುಲ್ಲಾ, ವಿಕಾಸ್, ವಿಶ್ವನಾಥ್, ಕೃಷ್ಣಮೂರ್ತಿ, ಮೆಹಬೂಬ್ ರವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಪ್ರಕರಣದ ಹಿನ್ನೆಲೆ : 8-2-2025 ರಂದು ರಾತ್ರಿ ಸಾಗರ ಪಟ್ಟಣದ ನಗರೇಶ್ವರ ದೇವಾಲಯದಲ್ಲಿ ಕಳವು ಕೃತ್ಯ ನಡೆದಿತ್ತು. ದೇವರ ಮೂರ್ತಿ ಮೇಲಿದ್ದ ಮಾಂಗಲ್ಯ ಸರ ಅಪಹರಿಸಲಾಗಿತ್ತು. ಈ ಸಂಬಂಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Sagar Feb 13: Sagar Town police have succeeded in arresting the absconding accused of stealing the mangala sutr from the idol of God in a temple. The police seized a gold mangala sutr weighing 30 grams 570 mili worth Rs 2 lakh from the accused.
Background of the case: On 8-2-2025 night, a theft took place in Nagareshwar temple in Sagar town. Mangala sutra was stoled from the idol of God. A case was registered in Sagar town police station in this regard.