Shivamogga: Tunga River water for lakes – what is the demand of Basavanagangur villagers? ಶಿವಮೊಗ್ಗ : ಕೆರೆಗಳಿಗೆ ತುಂಗಾ ನದಿ ನೀರು – ಬಸವನಗಂಗೂರು ಗ್ರಾಮಸ್ಥರ ಆಗ್ರಹವೇನು?

shimoga news | ಶಿವಮೊಗ್ಗ : ಕೆರೆಗಳಿಗೆ ತುಂಗಾ ನದಿ ನೀರು – ಬಸವನಗಂಗೂರು ಗ್ರಾಮಸ್ಥರ ಆಗ್ರಹವೇನು?

ಶಿವಮೊಗ್ಗ (shivamogga), ಅಕ್ಟೋಬರ್ 13: ಶಿವಮೊಗ್ಗ ತಾಲೂಕಿನ ಬಸವನಗಂಗೂರು ಗ್ರಾಮದ ಕೆರೆಗೆ ತುಂಗಾ ನದಿಯಿಂದ ಹರಿಸಲಾಗುತ್ತಿರುವ ನೀರಿನ ಪ್ರಮಾಣ ಹೆಚ್ಚಿಸಿ, ಕಾಲಮಿತಿಯೊಳಗೆ ಕೆರೆ ಭರ್ತಿಗೊಳಿಸಬೇಕು. ಹಾಗೆಯೇ ಕೆರೆ ದಂಡೆ ರಸ್ತೆಯ ಉಳಿದ ಭಾಗವನ್ನು ಡಾಂಬರೀಕರಣಸಬೇಕು ಎಂದು ಸಣ್ಣ ನೀರಾವರಿ ಇಲಾಖೆಗೆ ನಾಗರೀಕರು ಮನವಿ ಮಾಡಿದ್ದಾರೆ.

ಅಕ್ಟೋಬರ 13 ರಂದು ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪುರುಷೋತ್ತಮ್ ಹಾಗೂ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಪಿಡಿಓ ರಾಜಪ್ಪ ಅವರು, ಬಸವನಗಂಗೂರು ಕೆರೆ ವೀಕ್ಷಣೆ ಮಾಡಿದರು. ಈ ವೇಳೆ ಬಸವನಗಂಗೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಿವಾಸಿಗಳು ಅಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿದರು.

ಬಸವನಗಂಗೂರು ಗ್ರಾಮದ ಕೆರೆಗೆ ಕಳೆದ ಸರಿಸುಮಾರು ಎರಡು ತಿಂಗಳಿನಿಂದ ತುಂಗಾ ನದಿಯಿಂದ ನೀರು ಹರಿಸಲಾಗುತ್ತಿದೆ. ಆದರೆ ಸಮರ್ಪಕವಾಗಿ ನೀರು ಪೂರೈಕೆಯಾಗದಿರುವುದರಿಂದ, ಇಲ್ಲಿಯವರೆಗೂ ಕೆರೆ ಭರ್ತಿಯಾಗಿಲ್ಲ. ನೀರಿನ ಸಂಗ್ರಹದ ಪ್ರಮಾಣವೂ ಕಡಿಮೆಯಿದೆ ಎಂದು ನಾಗರೀಕರು ತಿಳಿಸಿದ್ದಾರೆ.

ಜೊತೆಗೆ ಕೆರೆ ದಂಡೆ ರಸ್ತೆಯು ಬಸವನಗಂಗೂರು, ಗೆಜ್ಜೇನಹಳ್ಳಿ, ಮೋಜಪ್ಪನ ಹೊಸೂರು, ಪ್ರೆಸ್ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳ ನಾಗರೀಕರ ಸಂಚಾರಕ್ಕೆ ಹಾಗೂ ರೈತರು ಹೊಲಗದ್ದೆಗಳಿಗೆ ಓಡಾಡಲು ಬಳಸುತ್ತಿದ್ದಾರೆ. ಈಗಾಗಲೇ ಸದರಿ ರಸ್ತೆಯ ಬಸವನಗಂಗೂರು ಭಾಗದಲ್ಲಿ ಡಾಂಬರೀಕರಣವಾಗಿದೆ.

ಉಳಿದ ಭಾಗದ ಕೆರೆ ರಸ್ತೆಯು ಮಣ್ಣಿನ ರಸ್ತೆಯಾಗಿದ್ದು, ಗುಂಡಿ-ಗೊಟರುಗಳು ಬಿದ್ದಿವೆ. ಜನ – ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಈ ಕಾರಣದಿಂದ ಸದರಿ ರಸ್ತೆಯನ್ನು ಕೂಡ ಡಾಂಬರೀಕರಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ನಾಗರೀಕರು ಆಗ್ರಹಿಸಿದ್ದಾರೆ.

ನಾಗರೀಕರ ಅಹವಾಲು ಆಲಿಸಿದ ನಂತರ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪುರುಷೋತ್ತಮ್ ಅವರು ಮಾತನಾಡಿ, ಬಸವನಗಂಗೂರು ಗ್ರಾಮದ ಕೆರೆಗೆ ತುಂಗಾ ನದಿಯಿಂದ ಹರಿಸಲಾಗುತ್ತಿರುವ ನೀರಿನ ಪ್ರಮಾಣ ಹೆಚ್ಚಿಸಲಾಗುವುದು. ಕಾಲಮಿತಿಯೊಳಗೆ ಕೆರೆ ಭರ್ತಿಗೆ ಕ್ರಮಕೈಗೊಳ್ಳಲಾಗುವುದು. ಹಾಗೆಯೇ ರಸ್ತೆ ಡಾಂಬರೀಕರಣಗೊಳಿಸುವ ಸಂಬಂಧ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಕೆ ಹೆಚ್ ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್, ಮುಖಂಡ ಗುರುಚರಣ್, ಬಸವನಗಂಗೂರು ಗ್ರಾಮಸ್ಥರಾದ ಉಮೇಶ್, ಗಣೇಶ್, ದ್ವಾರಕೇಶ್, ಆನಂದ್, ಶಶಿ, ಪ್ರಕಾಶ್, ಪ್ರಸನ್ನ, ಶರತ್, ಮಂಜು, ಮಿಥುನ್ ಸೇರಿದಂತೆ ಮೊದಲಾದವರಿದ್ದರು.

Shivamogga: Tunga River water for lakes – what is the demand of Basavanagangur villagers? | Citizens have appealed to the Minor Irrigation Department to increase the amount of water being released from the Tunga River into the lake in Basavanagangur village of Shivamogga taluk and fill the lake within the stipulated time. Similarly, the remaining portion of the lake bank road should be asphalted.

Shivamogga: Power outage in more than 50 areas on October 14! ಶಿವಮೊಗ್ಗ : ಅಕ್ಟೋಬರ್ 14 ರಂದು 50 ಕ್ಕೂ ಅಧಿಕ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ! Previous post shimoga | power cut | ಶಿವಮೊಗ್ಗ : ಅಕ್ಟೋಬರ್ 14 ರಂದು 50 ಕ್ಕೂ ಅಧಿಕ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ!