ಶಿವಮೊಗ್ಗ (shivamogga), ಅಕ್ಟೋಬರ್ 22: ಶಿವಮೊಗ್ಗ ನಗರದಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕಳೆಗಟ್ಟಿದೆ. ಕಳೆದೆರೆಡು ದಿನಗಳಿಂದ ಲಕ್ಷ್ಮೀ ಪೂಜೆ, ವಾಹನಗಳ ಪೂಜೆ ನಡೆಯಿತು. ಹಬ್ಬದ ಅತ್ಯಂತ ಮಹತ್ವದ ಘಟ್ಟವಾದ ಬಲಿ ಪಾಡ್ಯಮಿಯ ಗೋ ಪೂಜೆಯು ಅಕ್ಟೋಬರ್ 22 ರಂದು ನಡೆಯಿತು.
ಬೆಳಿಗ್ಗೆಯಿಂದ ಬೀಳುತ್ತಿದ್ದ ಮಳೆಯ ನಡುವೆಯೇ, ಅತ್ಯಂತ ಭಕ್ತಿಭಾವದಿಂದ ನಾಗರೀಕರು ಗೋವುಗಳ ಪೂಜೆ ಮಾಡಿದರು. ಗೋವುಗಳಿಗೆ ಹೂ ಮಾಲೆ ತೊಡಿಸಿ, ಸಿಹಿ ತಿನಿಸು, ನೈವೇದ್ಯ ಅರ್ಪಿಸಿ ಪೂಜಿಸುತ್ತಿದ್ದ ದೃಶ್ಯ ಕಂಡುಬಂದಿತು.
ಹಳ್ಳಿಗಳಲ್ಲಿ ಸಂಭ್ರಮ : ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಗೋ ಪೂಜೆ ಸಂಭ್ರಮ ಜೋರಾಗಿತ್ತು. ಗೋ ಪಾಲಕರು ಜಾನುವಾರು ಕೊಟ್ಟಿಗೆಗಳನ್ನು ಸ್ವಚ್ಚಗೊಳಿಸಿ, ಸುಣ್ಣ-ಕೆಮ್ಮಣ್ಣು ಹಚ್ಚಿ, ಹೂವುಗಳಿಂದ ಅಲಂಕರಿಸಿದ್ದರು.
ಗೋವುಗಳ ಕೊಂಬುಗಳಿಗೆ ಬಣ್ಣ ಬಳಿದು, ಹೂ ಮಾಲೆಗಳಿಂದ ಸಿಂಗರಿಸಿ ವಿಶೇಷ ಪೂಜೆ ನೆರವೇರಿಸುತ್ತಿದ್ದ ದೃಶ್ಯ ಕಂಡುಬಂದಿತು.
Shivamogga, October 22: The festival of lights, Diwali, is in full swing in Shivamogga city. Lakshmi Puja and vehicle worship have been held for the past two days. The most important event of the festival, the Bali Padyami GoPuja, was held on October 22.

