Diwali cow worship celebrations in Shivamogga city! ಶಿವಮೊಗ್ಗ ನಗರದಲ್ಲಿ ದೀಪಾವಳಿ ಗೋ ಪೂಜೆ ಸಂಭ್ರಮ!

shimoga deepavali celebration | ಶಿವಮೊಗ್ಗ ನಗರದಲ್ಲಿ ದೀಪಾವಳಿ ಗೋಪೂಜೆ ಸಂಭ್ರಮ!

ಶಿವಮೊಗ್ಗ (shivamogga), ಅಕ್ಟೋಬರ್ 22: ಶಿವಮೊಗ್ಗ ನಗರದಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕಳೆಗಟ್ಟಿದೆ. ಕಳೆದೆರೆಡು ದಿನಗಳಿಂದ ಲಕ್ಷ್ಮೀ ಪೂಜೆ, ವಾಹನಗಳ ಪೂಜೆ ನಡೆಯಿತು. ಹಬ್ಬದ ಅತ್ಯಂತ ಮಹತ್ವದ ಘಟ್ಟವಾದ ಬಲಿ ಪಾಡ್ಯಮಿಯ ಗೋ ಪೂಜೆಯು ಅಕ್ಟೋಬರ್ 22 ರಂದು ನಡೆಯಿತು.

ಬೆಳಿಗ್ಗೆಯಿಂದ ಬೀಳುತ್ತಿದ್ದ ಮಳೆಯ ನಡುವೆಯೇ, ಅತ್ಯಂತ ಭಕ್ತಿಭಾವದಿಂದ ನಾಗರೀಕರು ಗೋವುಗಳ ಪೂಜೆ ಮಾಡಿದರು. ಗೋವುಗಳಿಗೆ ಹೂ ಮಾಲೆ ತೊಡಿಸಿ, ಸಿಹಿ ತಿನಿಸು, ನೈವೇದ್ಯ ಅರ್ಪಿಸಿ ಪೂಜಿಸುತ್ತಿದ್ದ ದೃಶ್ಯ ಕಂಡುಬಂದಿತು.  

ಹಳ್ಳಿಗಳಲ್ಲಿ ಸಂಭ್ರಮ : ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಗೋ ಪೂಜೆ ಸಂಭ್ರಮ ಜೋರಾಗಿತ್ತು. ಗೋ ಪಾಲಕರು ಜಾನುವಾರು ಕೊಟ್ಟಿಗೆಗಳನ್ನು ಸ್ವಚ್ಚಗೊಳಿಸಿ, ಸುಣ್ಣ-ಕೆಮ್ಮಣ್ಣು ಹಚ್ಚಿ, ಹೂವುಗಳಿಂದ  ಅಲಂಕರಿಸಿದ್ದರು.

ಗೋವುಗಳ ಕೊಂಬುಗಳಿಗೆ ಬಣ್ಣ ಬಳಿದು, ಹೂ ಮಾಲೆಗಳಿಂದ ಸಿಂಗರಿಸಿ ವಿಶೇಷ ಪೂಜೆ ನೆರವೇರಿಸುತ್ತಿದ್ದ ದೃಶ್ಯ ಕಂಡುಬಂದಿತು.  

Shivamogga, October 22: The festival of lights, Diwali, is in full swing in Shivamogga city. Lakshmi Puja and vehicle worship have been held for the past two days. The most important event of the festival, the Bali Padyami GoPuja, was held on October 22.

Special trains run between Bengaluru and Shivamogga on the occasion of Diwali! ದೀಪಾವಳಿ ಪ್ರಯುಕ್ತ ಬೆಂಗಳೂರು - ಶಿವಮೊಗ್ಗ ನಡುವೆ ವಿಶೇಷ ರೈಲುಗಳ ಸೇವೆ! Previous post Trains from Bengaluru to Shivamogga | ದೀಪಾವಳಿ ಪ್ರಯುಕ್ತ ಬೆಂಗಳೂರು – ಶಿವಮೊಗ್ಗ ನಡುವೆ ವಿಶೇಷ ರೈಲುಗಳ ಸೇವೆ!