Shivamogga - Bhadravati rail route review: Alternative route for vehicular traffic! ಶಿವಮೊಗ್ಗ - ಭದ್ರಾವತಿ ನಡುವಿನ ರೈಲ್ವೆ ಗೇಟ್ ಗಳ ಪರೀಶೀಲನೆ : ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ!

shimoga railway news | ಶಿವಮೊಗ್ಗ – ಭದ್ರಾವತಿ ನಡುವಿನ  ರೈಲ್ವೆ ಗೇಟ್ ಗಳ ಪರೀಶೀಲನೆ : ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ!

ಶಿವಮೊಗ್ಗ (shivamogga), ಅಕ್ಟೋಬರ್ 27: ಶಿವಮೊಗ್ಗ – ಭದ್ರಾವತಿ ನಡುವಿನ ಎಲ್‌ ಸಿ. ನಂ : 42, 46 ಮತ್ತು 47 ಗಳನ್ನು ಪರೀಕ್ಷೆಗಾಗಿ ಮುಚ್ಚಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 28 ರಿಂದ ನವೆಂಬರ್ 03 ರವರೆಗೆ, ವಿವಿಧ ದಿನಗಳಂದು ವಾಹನಗಳು ಮತ್ತು ಸಾರ್ವಜನಿಕರು ತಾತ್ಕಾಲಿಕವಾಗಿ ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಎಲ್‌ಸಿ 43 – ಯಲವಟ್ಟಿ ರಸ್ತೆ ಅ. 28 ರ ಬೆ.8 ರಿಂದ ಅ. 29 ರ ಸಂಜೆ 6 ರವರೆಗೆ ಎಲ್.ಸಿ. 46 ಮುಖಾಂತರ -ಹೊಸೊಡಿ ರಸ್ತೆ, ಯಲವಟ್ಟಿ ರಸ್ತೆ ಸಂಪರ್ಕ ಬದಲಿ ಮಾರ್ಗ. ಎಲ್‌ಸಿ 46 – ಚಿತ್ರದುರ್ಗ ರಸ್ತೆ- ಅ.30 ರ ಬೆ. 8 ರಿಂದ ಅ. 31 ರ ಸಂಜೆ 6 ರವರೆಗೆ ಹೊಸದಾಗಿ ನಿರ್ಮಿಸಿದ ಮೇಲ್ಸೇತುವೆ ಚಿತ್ರದುರ್ಗ ಸಂಪರ್ಕ ರಸ್ತೆ ಮಾರ್ಗ.

ಎಲ್‌ಸಿ 47 – ಮಲ್ಲೇಶ್ವರ ನಗರ ರಸ್ತೆ -ನವೆಂಬರ್ 2 ರ ಬೆ. 8 ರಿಂದ ನ. 3 ರ ಸಂಜೆ 6 ರವರೆಗೆ ಮಲ್ಲೇಶ್ವರ ನಗರ ರಸ್ತೆ- ಹೊನ್ನಾಳಿ ರಸ್ತೆ- ಸಂಗೊಳ್ಳಿ ರಾಯಣ್ಣ ಸರ್ಕಲ್ – ಶಂಕರಮಠ ಸಂಪರ್ಕ ಎಲ್ ಸಿ 47 ರ ಮಾರ್ಗವಿರುತ್ತದೆ. ಹಾಗೂ ಮಲ್ಲೇಶ್ವರನಗರ ರಸ್ತೆಯು ಕಚ್ಚಾಮಣ್ಣಿನ ರಸ್ತೆಯಾಗಿದ್ದು, ದ್ವಿಚಕ್ರ ವಾಹನಗಳು ಸಂಚರಿಸುವುದಕ್ಕ ಅವಕಾಶ ಕಲ್ಪಿಸಲಾಗಿದೆ. ಭಾರೀ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಸಾರ್ವಜನಿಕರ ಹಿತದೃಷ್ಠಿಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳ ತಾಂತ್ರಿಕ ಪರಿಶೀಲನೆ ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ರ ಅನ್ವಯ ಕೋಷ್ಟಕದಲ್ಲಿ ವಿವರಿಸಿದಂತೆ ತಾತ್ಕಾಲಿಕವಾಗಿ ಆಯಾ ದಿನಾಂಕಗಳಂದು ಮಾತ್ರ ಪರ್ಯಾಣ ಮಾರ್ಗಗಳಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಆದೇಶಿಸಲಾಗಿದೆ.

ಸಾರ್ವಜನಿಕರು/ ವಾಹನ ಸವಾರರು ಈ ಬದಲಿ ಮಾರ್ಗಗಳಲ್ಲಿ ಅಯಾ ದಿನಾಂಕಗಳಂದು ಮಾತ್ರ ಸಂಚರಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದೆ.

shimoga : LC No. 42, 46 and 47 between Shivamogga – Bhadravati are being closed. In this context, the District Collector has ordered vehicles and the public to temporarily ply on nearby alternative routes on various days from October 28 to November 03.

A child playing on the road died after being hit by a car near Virupinakoppa in Shivamogga! ಶಿವಮೊಗ್ಗ : ವಿರುಪಿನಕೊಪ್ಪ ಬಳಿ ಕಾರು ಡಿಕ್ಕಿಯಾಗಿ ರಸ್ತೆಯಲ್ಲಿ ಆಟವಾಡುತ್ತಿದ್ದ ಮಗು ಸಾವು! Previous post shimoga accident news | ಶಿವಮೊಗ್ಗ : ವಿರುಪಿನಕೊಪ್ಪ ಬಳಿ ಕಾರು ಡಿಕ್ಕಿಯಾಗಿ ರಸ್ತೆಯಲ್ಲಿ ಆಟವಾಡುತ್ತಿದ್ದ ಮಗು ಸಾವು!
Shivamogga: Worker dies after building wall collapses! ಶಿವಮೊಗ್ಗ : ಕಟ್ಟಡ ಗೋಡೆ ಕುಸಿದು ಕಾರ್ಮಿಕ ಸಾವು! Next post shimoga news | ಶಿವಮೊಗ್ಗ : ಗೋಡೆ ಕುಸಿದು ಕಾರ್ಮಿಕ ಸಾವು!