shimoga crime news | ಶಿವಮೊಗ್ಗದ ಲಾಡ್ಜ್ ರೂಂನಲ್ಲಿ ರಾತ್ರಿ ನಡೆದಿದ್ದೇನು? : ಮಹಿಳೆ ಸ್ಥಿತಿ ಗಂಭೀರ – ಆಸ್ಪತ್ರೆಗೆ ದಾಖಲು!

Shivamogga : Robbers who stole a fake bangle and fled after being intimidated by an elderly woman's screams! ಶಿವಮೊಗ್ಗ : ವೃದ್ದೆಯ ನಕಲಿ ಬಳೆ ಕದ್ದು ಪರಾರಿಯಾದ ದರೋಡೆಕೋರರು!

ಶಿವಮೊಗ್ಗ (shivamogga), ನವೆಂಬರ್ 19: ಶಿವಮೊಗ್ಗ ನಗರದ ಲಾಡ್ಜ್ ವೊಂದರಲ್ಲಿ ತಂಗಿದ್ದ ಮಹಿಳೆಯೋರ್ವರು, ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಡರಾತ್ರಿ ನಡೆದಿದೆ.

ದಾವಣಗೆರೆ ಜಿಲ್ಲೆಯ 47 ವರ್ಷದ ಮಹಿಳೆಯೇ ಆತ್ಮಹತ್ಯೆಗೆ ಯತ್ನಿಸಿದವರೆಂದು ಗುರುತಿಸಲಾಗಿದೆ. ಇವರಿಗೆ ಗಂಭೀರ ಸ್ವರೂಪದ ಸುಟ್ಟು ಗಾಯವಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ.

ಮಹಿಳೆಗೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸದರಿ ಕೊಠಡಿಯಲ್ಲಿದ್ದ 45 ವರ್ಷದ ಪುರುಷನಿಗೆ ಸಣ್ಣಪುಟ್ಟ ಸುಟ್ಟ ಗಾಯವಾಗಿದ್ದು, ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ದೊಡ್ಡಪೇಟೆ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

ನವೆಂಬರ್ 18 ರ ಮಧ್ಯಾಹ್ನ ಸದರಿ ಮಹಿಳೆ ಹಾಗೂ ಪುರುಷ ಲಾಡ್ಜ್ ನಲ್ಲಿ ರೂಂ ಬಾಡಿಗೆ ಪಡೆದುಕೊಂಡಿದ್ದರು. ಇವರಿಬ್ಬರ ಕುರಿತಂತೆ ಹಾಗೂ ಘಟನೆಯ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

What happened in the middle of the night in a lodge room in Shimoga?: Woman in critical condition – admitted to hospital!

Shivamogga, November 19: A woman, who was staying at a lodge in Shivamogga city, attempted suicide by pouring petrol on herself and setting herself on fire late last night.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →