shimoga news | ಶಿವಮೊಗ್ಗ : ತುಂಗಾ ನಾಲೆಗೆ ಬಿದ್ದಿದ್ದ ಯುವಕನ ರಕ್ಷಣೆ ಮಾಡಿದ ಅಗ್ನಿಶಾಮಕ ದಳ!

Shivamogga: Firefighters rescue a young man who had fallen into the Tunga canal! ಶಿವಮೊಗ್ಗ : ತುಂಗಾ ನಾಲೆಗೆ ಬಿದ್ದಿದ್ದ ಯುವಕನ ರಕ್ಷಣೆ ಮಾಡಿದ ಅಗ್ನಿಶಾಮಕ ದಳ!

ಶಿವಮೊಗ್ಗ (shivamogga), ನವೆಂಬರ್ 27: ಶಿವಮೊಗ್ಗ ನಗರದ ಹೊರವಲಯ ಅನುಪಿನಕಟ್ಟೆ ಸಮೀಪದ ತುಂಗಾ ಮೇಲ್ದಂಡೆ ನಾಲೆಯಲ್ಲಿ ಬಿದ್ದಿದ್ದ ಯುವಕನೋರ್ವನನ್ನು, ಅಗ್ನಿಶಾಮಕ ದಳ ತಂಡ ಹರಸಾಹಸ ನಡೆಸಿ ರಕ್ಷಣೆ ಮಾಡಿದ ಘಟನೆ ನವೆಂಬರ್ 27 ರ ಮಧ್ಯಾಹ್ನ ನಡೆದಿದೆ.

24 ವರ್ಷದ ಯುವಕನೇ ರಕ್ಷಣೆಗೊಳಗಾದವನು. ಸಣ್ಣಪುಟ್ಟ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲೆಗೆ ಯುವಕ ಬಿದ್ದಿದ್ದು ಹೇಗೆ?  ಎಂಬುವುದು ಸೇರಿದಂತೆ ಆತನ ಪೂರ್ವಾಪರಗಳ ವಿವರ ಇನ್ನಷ್ಟೆ ಲಭ್ಯವಾಗಬೇಕಾಗಿದೆ.

ಸುಮಾರು 100 ಅಡಿ ಆಳದ ನಾಲೆಗೆ ಯುವಕ ಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ತಂಡ ಸ್ಥಳಕ್ಕಾಗಮಿಸಿದೆ. ಹಗ್ಗದ ಸಹಾಯದಿಂದ ಯುವಕನಿದ್ದ ಸ್ಥಳಕ್ಕೆ ಸಿಬ್ಬಂದಿಗಳು ಇಳಿದಿದ್ದಾರೆ. ತದನಂತರ ಬೋಟ್ ಮೂಲಕ ಆತನನ್ನುದಡಕ್ಕೆ ಕರೆತಂದಿದ್ದಾರೆ.

ಭಾರೀ ಆಳದ ನಾಲೆಗೆ ಮೇಲ್ಭಾಗದಿಂದ ಬಿದ್ದರೂ ಪವಾಡಸದೃಶ್ಯ ರೀತಿಯಲ್ಲಿ ಯುವಕನು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿ ಬಿ ಆರ್ ಅಶೋಕ್ ಕುಮಾರ್, ಎಫ್’ಎಸ್ಓ ಮುಕ್ತುಂ ಹುಸೇನ್, ಚೇತನ್ ಕುಮಾರ್, ಶರತ್ ಕುಮಾರ್, ಸಂಗಮೇಶ್, ಮಾರುತಿ ಟಿ ಆರ್, ಶಬ್ಬೀರ್, ಸಂತೋಷ್ ಭಾಗಿಯಾಗಿದ್ದರು.

ಹಾಗೆಯೇ ಸ್ಥಳೀಯರಾದ ಕಿರಣ್ ಕೆ ಎಂ, ಪ್ರಜ್ವಲ್ ನಾಯಕ್, ಗೌತಮ್, ಸೂರಜ್, ಪುನೀತ್, ಗಗನ್, ಧ್ಯಾನ್, ದಿಗಂತ್, ರಘುನಂದನ್, ಅಭಿನವ್, ಗೋವರ್ಧನ್, ತರುಣ್ ಮೊದಲಾದವರು ಅಗ್ನಿಶಾಮಕ ದಳದ ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದಾರೆ.

Shivamogga, November 27: A fire brigade team bravely rescued a young man who had fallen into the upper Tunga canal near Anupinakatte on the outskirts of Shivamogga city on the afternoon of November 27.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →