The municipal administration does not listen to the concerns of the residents of Hanumanth Nagar in Shivamogga! ಶಿವಮೊಗ್ಗದ ಹನುಮಂತ ನಗರ ನಿವಾಸಿಗಳ ಗೋಳು ಆಲಿಸದ ಪಾಲಿಕೆ ಆಡಳಿತ!

shimoga news | ಶಿವಮೊಗ್ಗದ ಹನುಮಂತ ನಗರ ನಿವಾಸಿಗಳ ಗೋಳು ಆಲಿಸದ ಪಾಲಿಕೆ ಆಡಳಿತ!

ಶಿವಮೊಗ್ಗ (shivamogga), ಡಿಸೆಂಬರ್ 17: ದೇಶ – ರಾಜ್ಯದಲ್ಲಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ನಗರಗಳಲ್ಲಿ ಶಿವಮೊಗ್ಗವೂ ಒಂದಾಗಿದೆ. ಆದರೆ ನಗರದ ಬೆಳವಣಿಗೆ, ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯಗಳ ಬೆಳವಣಿಗೆಯಾಗಿಲ್ಲ. ಪಾಲಿಕೆ ವ್ಯಾಪ್ತಿಯ ಅದೆಷ್ಟೊ ಬಡಾವಣೆಗಳಲ್ಲಿ ಕನಿಷ್ಠ ಮೂಲಸೌಕರ್ಯಗಳ ವ್ಯವಸ್ಥೆಯೂ ಇಲ್ಲವಾಗಿದೆ. ಇದು ಆಡಳಿತದ ವೈಫಲ್ಯಕ್ಕೆ ಸಾಕ್ಷಿಯಾಗಿದೆ.

ಇದಕ್ಕೆ ತಾಜಾ ನಿದರ್ಶನವೆಂಬಂತೆ, ಮಹಾನಗರ ಪಾಲಿಕೆ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ಲೇಔಟ್ ನ ಹನುಮಂತನಗರ ಬಡಾವಣೆಯ ಅವ್ಯವಸ್ಥೆ ತಾಜಾ ನಿದರ್ಶನವಾಗಿದೆ!

ಬಡಾವಣೆಯಲ್ಲಿ ಬೀದಿ ದೀಪ, ಚರಂಡಿಗಳ ಸ್ವಚ್ಛತೆ, ಕಸ ಸಂಗ್ರಹಣೆ ವ್ಯವಸ್ಥೆ ಸೇರಿದಂತೆ ರಸ್ತೆಯಂತಹ ಕನಿಷ್ಠ ಮೂಲಸೌಕರ್ಯಗಳ ವ್ಯವಸ್ಥೆಯೂ ಇಲ್ಲವಾಗಿದೆ. ಕುಡಿಯುವ ನೀರು ಪೂರೈಕೆಯೂ ಸಮರ್ಪಕವಾಗಿಲ್ಲ. ಈಗಾಗಲೇ ಸ್ಥಳೀಯ ನಿವಾಸಿಗಳು, ಸಾಕಷ್ಟು ಬಾರಿ ಪಾಲಿಕೆ ಆಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಶಾಸಕ ಚನ್ನಬಸಪ್ಪ ಅವರು ಕೂಡ ಬಡಾವಣೆಗೆ ಆಗಮಿಸಿ, ಅವ್ಯವಸ್ಥೆಯ ಖುದ್ದು ಪರಿಶೀಲನೆ ನಡೆಸಿದ್ಧಾರೆ. ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಸೌಲಭ್ಯಗಳು ಲಭ್ಯವಾಗಿಲ್ಲ. ನಮ್ಮ ಗೋಳು ಆಲಿಸುವವರೇ ಯಾರೂ ಇಲ್ಲವಾಗಿದ್ಧಾರೆ ಎಂದು ನಿವಾಸಿಗಳು ದೂರುತ್ತಾರೆ.

ನಿವಾಸಿಗಳೇ ಹಣ ಸಂಗ್ರಹಿಸಿ ನಾಮ ಫಲಕಗಳಿಗೆ ಹೆಸರು ಬರೆಯಿಸಿದ್ದೆವೆ. ಆಗಾಗ್ಗೆ ಚರಂಡಿ ಸ್ವಚ್ಛತೆಯ ಕಾರ್ಯ ಮಾಡುತ್ತಿದ್ದೆವೆ. ನಮ್ಮಗಳ ಪಾಲಿಗೆ ಪಾಲಿಕೆ ಆಡಳಿತ ಇದ್ದೂ ಇಲ್ಲದಂತಾಗಿದೆ. ಪಾಲಿಕೆಯ ಯಾವೊಬ್ಬ ಅಧಿಕಾರಿ, ಸಿಬ್ಬಂದಿಯೂ ಇಲ್ಲಿಗೆ ಭೇಟಿಯಿತ್ತು ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲವೆಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಗಮನಹರಿಸಲಿ : ಇನ್ನಾದರೂ ಪಾಲಿಕೆ ಆಡಳಿತ ಇತ್ತ ಗಮನಹರಿಸಬೇಕಾಗಿದೆ. ನಾಗರೀಕರು ಬೀದಿಗಿಳಿದು ಪ್ರತಿಭಟನೆ ನಡೆಸುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ. ಹನುಮಂತನಗರ ಬಡಾವಣೆಯಲ್ಲಿ ಬೀದಿ ದೀಪಗಳ ವ್ಯವಸ್ಥೆ, ಚರಂಡಿ ಸ್ವಚ್ಛತೆ, ಮನೆ ಮನೆಗಳಿಂದ ಕಸ ಸಂಗ್ರಹಣೆಯಂತಹ ಕನಿಷ್ಠ ವ್ಯವಸ್ಥೆ ಮಾಡಬೇಕಾಗಿದೆ. ಹಾಗೆಯೇ ರಸ್ತೆಗಳ ಡಾಂಬರೀಕರಣಕ್ಕೂ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕಾಗಿದೆ.

Shivamogga is one of the fastest growing cities in the country and state. However, the growth of the city and its population has not kept pace with the development of its infrastructure. Many of the areas under the corporation’s jurisdiction lack even basic infrastructure. This is evidence of the failure of the administration. The settlement lacks even basic infrastructure like roads, street lighting, clean drains, and garbage collection systems. Drinking water supply is also inadequate. Local residents have already brought this to the attention of the municipal administration many times, but to no avail.

Previous post shimoga news | ಶಿವಮೊಗ್ಗ ನಗರ ಕುಡಿಯುವ ನೀರು ಪೂರೈಕೆ : ಹೊಸ ಯೋಜನೆ ಅನುಷ್ಠಾನದತ್ತ ಹರಿಯುವುದೆ ಜನಪ್ರತಿನಿಧಿಗಳ ಚಿತ್ತ?