Sulochanamma a resident of JPN Road Shimoga passed away ಶಿವಮೊಗ್ಗದ ಜೆಪಿಎನ್ ರಸ್ತೆ ನಿವಾಸಿ ಸುಲೋಚನಮ್ಮ ವಿಧಿವಶ

shimoga | ಶಿವಮೊಗ್ಗದ ಜೆಪಿಎನ್ ರಸ್ತೆ ನಿವಾಸಿ ಸುಲೋಚನಮ್ಮ ವಿಧಿವಶ

ಶಿವಮೊಗ್ಗ (shivamogga), ಡಿಸೆಂಬರ್ 25: ಶಿವಮೊಗ್ಗ ನಗರದ ಜೆಪಿಎನ್ ರಸ್ತೆಯ ನಿವಾಸಿಯಾದ ಸುಲೋಚನಮ್ಮ (75) ಅವರು ಡಿಸೆಂಬರ್ 25 ರ ಸಂಜೆ ವಿಧಿವಶರಾಗಿದ್ದಾರೆ. ಮೃತರು ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಸುಲೋಚನಮ್ಮ ಅವರು ಇತ್ತೀಚೆಗೆ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಮೃತ ಸುಲೋಚನಮ್ಮ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ದಿವಂಗತ ಧನಂಜಯ ಪಾಟೀಲ್ ಅವರ ಧರ್ಮಪತ್ನಿಯಾಗಿದ್ದರು. ಪಾರ್ಥಿವ ಶರೀರದ ಅಂತ್ಯ ಸಂಸ್ಕಾರವು ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮದಲ್ಲಿ ನೆರವೇರಲಿದೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡಿವೆ.

ಸಂತಾಪ : ಸುಲೋಚನಮ್ಮ ಅವರ ನಿಧನಕ್ಕೆ ‘ಈ – ಪತ್ರಿಕೆ’ ಯ ಸಂಪಾದಕರಾದ ನಾಗೇಶ್ ನಾಯ್ಕ್ ಹಾಗೂ ಪತ್ರಿಕಾ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ. ‘ಗೌರವಾನ್ವಿತರಾದ ಸುಲೋಚನಮ್ಮ ಅವರು ಕಳೆದ ಹಲವು ವರ್ಷಗಳಿಂದ ‘ಈ-ಪತ್ರಿಕೆ’ಯ ಗೌರವ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಈ ಹಿಂದೆ ಅವರ ಪತಿ ದಿವಂಗತ  ಧನಂಜಯ ಪಾಟೀಲ್ ಅವರು ಕೂಡ ‘ಈ – ಪತ್ರಿಕೆ’ಯ ಗೌರವ ಸಂಪಾದಕರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಸುಲೋಚನಮ್ಮ ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಕುಟುಂಬ ಸದಸ್ಯರಿಗೆ ದುಃಖ ಭರಿಸುವ ಶಕ್ತಿ ನೀಡಲಿ’ ಎಂದು ಶೋಕ ಸಂದೇಶದಲ್ಲಿ ನಾಗೇಶ್ ನಾಯ್ಕ್ ಅವರು ತಿಳಿಸಿದ್ದಾರೆ.

Shivamogga, December 25: Sulochanamma (75), a resident of JPN Road in Shivamogga city, passed away on the evening of December 25. The deceased is survived by a large circle of relatives.

Shimoga: Gas cylinder explosion - the house is completely damaged! ಶಿವಮೊಗ್ಗ : ಗ್ಯಾಸ್ ಸಿಲಿಂಡರ್ ಸ್ಪೋಟ – ಮನೆ ಸಂಪೂರ್ಣ ಜಖಂ! Previous post shimoga news | ಶಿವಮೊಗ್ಗ : ಗ್ಯಾಸ್ ಸಿಲಿಂಡರ್ ಸ್ಪೋಟ – ಮನೆ ಸಂಪೂರ್ಣ ಜಖಂ!
bengaluru | Bengaluru: What are the decisions taken in the state cabinet meeting? ಬೆಂಗಳೂರು : ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳೇನು? Next post Bengaluru news | ಬೆಂಗಳೂರು | ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ತಿದ್ದುಪಡಿಗೆ ಡಿ.23 ರಂದು ಅಂತಿಮ ಅಧಿಸೂಚನೆ : ಹಲವು ಮಹತ್ವದ ಬದಲಾವಣೆ!