shimoga news | ಶಿವಮೊಗ್ಗ : ಸಿನಿಮಾ ಕಲಾವಿದೆ, ವಕೀಲೆ ಪೂರ್ಣಿಮಾ ಪ್ರಸನ್ನರಿಗೆ ‘ಮಾನವ ರತ್ನ ಶ್ರೇಷ್ಠ’ ರಾಜ್ಯ ಪ್ರಶಸ್ತಿ ಗೌರವ

Shivamogga: Film artist and lawyer Purnima Prasanna honoured with 'Manava Ratna Shrestha' state award ಶಿವಮೊಗ್ಗ : ಸಿನಿಮಾ ಕಲಾವಿದೆ, ವಕೀಲೆ ಪೂರ್ಣಿಮಾ ಪ್ರಸನ್ನರಿಗೆ ‘ಮಾನವ ರತ್ನ ಶ್ರೇಷ್ಠ’ ರಾಜ್ಯ ಪ್ರಶಸ್ತಿ ಗೌರವ

ಶಿವಮೊಗ್ಗ (shivamogga), ಡಿಸೆಂಬರ್ 27: ಸಿನಿಮಾ – ಧಾರವಾಹಿ ಕಲಾವಿದೆ, ವಕೀಲರೂ ಆದ ಪೂರ್ಣಿಮಾ ಪ್ರಸನ್ನ ಅವರಿಗೆ ಮೈಸೂರಿನ ಮಾನವ ಹಕ್ಕುಗಳ ಸೇವಾ ಸಂಸ್ಥೆಯು ‘ಮಾನವ ರತ್ನ ಶ್ರೇಷ್ಠ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಕಲೆ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿನ ಪೂರ್ಣೀಮಾ ಪ್ರಸನ್ನ ಅವರ ಸಾಧನೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಡಿಸೆಂಬರ್ 21 ರಂದು ಮೈಸೂರಿನಲ್ಲಿ ನಡೆದ ಸಮಾರಂಭದ ವೇಳೆ, ಅವರಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಗಿದೆ.

ಬಹುಮುಖ ಪ್ರತಿಭೆ : ಪೂರ್ಣಿಮಾ ಪ್ರಸನ್ನ ಅವರು 18 ಕನ್ನಡ ಚಲನಚಿತ್ರಗಳಲ್ಲಿ, ಹಲವು ಟಿವಿ ಧಾರವಾಹಿ, ಕಿರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೆಯೇ ಮೂಲತಃ ರಂಗಭೂಮಿ ಕಲಾವಿದರಾದ ಅವರು, 100 ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ನಿರ್ವಹಣೆ ಮಾಡಿದ್ದಾರೆ. ಜೊತೆಗೆ ರೇಡಿಯೋ ನಾಟಕ, ವಾಯ್ಸ್ ಡಬ್ಬಿಂಗ್ ಕಲಾವಿದರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಸದ್ಯ ಅವರು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪೂರ್ಣಿಮಾ ಅವರ ಸಮಾಜಮುಖಿ ಕೆಲಸಕಾರ್ಯ ಗುರುತಿಸಿ ರಾಜ್ಯ ಪ್ರಶಸ್ತಿ ನೀಡಿ ಅಭಿನಂದಿಸಿರುವುದಕ್ಕೆ ಶಿವಮೊಗ್ಗದ ಪ್ರಜ್ಞಾವಂತ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Shivamogga, December 27: Purnima Prasanna, a film and serial artist and lawyer, has been honored with the ‘Manava Ratna Shrestha’ state award by the Mysore Human Rights Service Organization.

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: www.udayasaakshi.@gmail.com Mobile : 9242987506

View all posts by B. Renukesha →