shimoga news | ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ರೆಡ್’ಕ್ರಾಸ್ ಸಂಸ್ಥೆ ಸೇರಿದಂತೆ ದಾನಿಗಳ ನೆರವಿನಹಸ್ತ

Shivamogga: Houses damaged by cylinder explosion – Donors join hands with Red Cross to help ಶಿವಮೊಗ್ಗ : ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿ – ರೆಡ್’ಕ್ರಾಸ್ ಸಂಸ್ಥೆ ಸೇರಿದಂಥೆ ದಾನಿಗಳ ನೆರವಿನಹಸ್ತ

ಶಿವಮೊಗ್ಗ (shivamogga news), ಡಿಸೆಂಬರ್ 30: ಇತ್ತೀಚೆಗೆ ಶಿವಮೊಗ್ಗ ನಗರದ ಸಿದ್ದೇಶ್ವರ ನಗರದಲ್ಲಿ ಅಡುಗೆ ಮಾಡಲು ಬಳಸುವ ಸಿಲಿಂಡರ್ ಸ್ಫೋಟದಿಂದ ಹಾನಿಗೀಡಾದ ಎರಡು ಮನೆಗಳ ಕುಟುಂಬ ಸದಸ್ಯರಿಗೆ ರೆಡ್’ಕ್ರಾಸ್ ಸಂಸ್ಥೆ ಹಾಗೂ ದಾನಿಗಳು ನೆರವಿನ ಹಸ್ತ ಚಾಚಿದ್ದಾರೆ.

ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ.ದಿನೇಶ್, ಗುಂಡಪ್ಪ ಶೆಡ್ ನ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ದೇಶಕರಾದ ಜಗದೀಶ್, ಸಾಮಾಜಿಕ ಕಾರ್ಯಕರ್ತ ದೇವು ಹಾಗೂ ಬ್ಲಡ್ ಬ್ಯಾಂಕ್ ಕಾರ್ಯದರ್ಶಿ ನವೀನ್ ಅವರು ಕುಟುಂಬಗಳಿಗೆ ನೆರವಾಗುವ ಕಾರ್ಯ ಮಾಡಿದ್ದಾರೆ.

ಬೆಡ್ ಶೀಟ್, ಟಾರ್ಪೆಲ್, ಟೀ ಶರ್ಟ್, ಶರ್ಟ್, ಕಿಚನ್ ಸೆಟ್ ಗಳು ಸೇರಿದಂತೆ ದೈನಂದಿನ ಬಳಕೆಗೆ ಅನುಕೂಲವಾಗುವ ವಸ್ತುಗಳನ್ನು ಕುಟುಂಬಗಳಿಗೆ ನೀಡಲಾಗಿದೆ. ಇದಕ್ಕೆ ಜಗದೀಶ್ ಹಾಗೂ ದೇವು ಅವರು ನೆರವಾಗಿದ್ದಾರೆ ಎಂದು ಡಾ. ದಿನೇಶ್ ಅವರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿಯೂ ಸದರಿ ಕುಟುಂಬಗಳಿಗೆ ದಾನಿಗಳು ನೀಡುವ ನೆರವಿನಹಸ್ತವನ್ನು ರೆಡ್ ಕ್ರಾಸ್ ಸಂಸ್ಥೆಯಿಂದ ತಲುಪಿಸಲಾಗುವುದು ಎಂದು ಹೇಳಿದ್ದಾರೆ.

Shivamogga, December 30: The Red Cross and donors have extended a helping hand to the family members of two houses that were recently damaged by a cooking cylinder explosion in Siddeshwara Nagar, Shivamogga city.

Red Cross Secretary Dr. Dinesh, Gundappa Shed Ayyappa Swamy Temple Director Jagadish, and social activist Devu have been working to help the families.

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: www.udayasaakshi.@gmail.com Mobile : 9242987506

View all posts by B. Renukesha →