shimoga news | ಶಿವಮೊಗ್ಗ ಪಾಲಿಕೆ ಕಚೇರಿಯಲ್ಲಿ ಲೋಕಾಯುಕ್ತ ತಂಡದಿಂದ ದಿಡೀರ್ ತಪಾಸಣೆ!
ಶಿವಮೊಗ್ಗ (shivamogga), ಜನವರಿ 09: ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಗೆ ಜನವರಿ 9 ರಂದು ಲೋಕಾಯುಕ್ತ ತಂಡ ದಿಡೀರ್ ಭೇಟಿಯಿತ್ತು, ವಿವಿಧ ವಿಭಾಗಗಳಲ್ಲಿ ಪರಿಶೀಲನೆ ನಡೆಸಿತು.
ಪಾಲಿಕೆಯ ಕಂದಾಯ, ಆರೋಗ್ಯ, ಆಡಳಿತ ಸೇರಿದಂತೆ ಹಲವು ವಿಭಾಗಗಳಲ್ಲಿ ಲೋಕಾಯುಕ್ತ ತಂಡ ಕಡತಗಳ ಪರಿಶೀಲನೆ ನಡೆಸಿದೆ. ವಿವಿಧ ವಿಷಯಗಳ ಕುರಿತಂತೆ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಮಾಹಿತಿ ಕಲೆ ಹಾಕುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಳಿಗ್ಗೆಯಿಂದ ಆರಂಭಗೊಂಡ ತಪಾಸಣಾ ಕಾರ್ಯವು ಮಧ್ಯಾಹ್ನದವರೆಗೂ ಮುಂದುವರಿದಿತ್ತು. ಸುಮಾರು 25 ಕ್ಕೂ ಹೆಚ್ಚು ಜನರಿದ್ದ ಲೋಕಾಯುಕ್ತ ಅಧಿಕಾರಿ – ಸಿಬ್ಬಂದಿಗಳ ತಂಡವು, ಏಕಕಾಲದಲ್ಲಿ ಪಾಲಿಕೆಯ ವಿವಿಧ ವಿಭಾಗಗಳಲ್ಲಿ ತಪಾಸಣೆ ನಡೆಸಿದ್ದು ಬಿಸಿ ಬಿಸಿ ಚರ್ಚೆಗೆಡೆ ಮಾಡಿಕೊಟ್ಟಿದೆ.
ಪಾಲಿಕೆಯ ವಿವಿಧ ವಿಭಾಗಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಜನಸಾಮಾನ್ಯರ ಕೆಲಸಕಾರ್ಯಗಳು ಆಗುತ್ತಿಲ್ಲ. ಕಡತಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ- ಎಂಬಿತ್ಯಾದಿ ಸಾರ್ವಜನಿಕ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ತಂಡ ತಪಾಸಣೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಆದರೆ ತಪಾಸಣೆ ಕುರಿತಂತೆ ಲೋಕಾಯುಕ್ತ ತಂಡ ಯಾವುದೇ ಅದಿಕೃತ ಮಾಹಿತಿ ನೀಡಿಲ್ಲ. ಇನ್ನಷ್ಟೆ ಈ ಕುರಿತಂತ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.
Lokayukta team conducts surprise inspection at Shivamogga Municipal Corporation office! | Shivamogga, January 09: A Lokayukta team made a surprise visit to the Shivamogga Municipal Corporation office on January 9 and inspected various departments.
More Stories
shimoga news | ಶಿವಮೊಗ್ಗ : ರಾಜ್ಯ ಹೆದ್ದಾರಿ ಡಾಂಬರೀಕರಣಕ್ಕೆ ಚಾಲನೆ
Shivamogga : State highway asphalting begins
ಶಿವಮೊಗ್ಗ : ರಾಜ್ಯ ಹೆದ್ದಾರಿ ಡಾಂಬರೀಕರಣಕ್ಕೆ ಚಾಲನೆ
shimoga | hosanagara news | ಹೊಸನಗರ : ರಸ್ತೆಯಲ್ಲಿ ತೆಗೆದ ಗುಂಡಿಗೆ ಬಿದ್ದು ಬೈಕ್ ಸವಾರ ಸಾ**ವು!
Hosanagar: Biker dies on the spot in road accident!
ಹೊಸನಗರ : ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವು!
shimoga news | ಶಿವಮೊಗ್ಗ | ಭದ್ರಾವತಿ ಮಲ್ಲಾಪುರದಲ್ಲಿ ಪತ್ತೆಯಾದ ಅನಾಮಧೇಯ ಗಂಡು ಮಗುವಿನ ಪೋಷಕರ ಪತ್ತೆಗೆ ಮನವಿ
Shivamogga | Appeal to find parents of anonymous baby boy found in Bhadravati Mallapur
shimoga news | ಶಿವಮೊಗ್ಗ | ಭದ್ರಾವತಿ ಮಲ್ಲಾಪುರದಲ್ಲಿ ಪತ್ತೆಯಾದ ಅನಾಮಧೇಯ ಗಂಡು ಮಗುವಿನ ಪೋಷಕರ ಪತ್ತೆಗೆ ಮನವಿ
hosanagara news | ರಿಪ್ಪನ್’ಪೇಟೆ | ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ವ್ಯಕ್ತಿ ಸಾ**ವು!
Rippon’pet | Man dies on the spot after being hit by a lorry!
ರಿಪ್ಪನ್’ಪೇಟೆ | ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ವ್ಯಕ್ತಿ ಸಾವು!
shimoga news | ಶಿವಮೊಗ್ಗ : ಕೇಂದ್ರ ಸರ್ಕಾರದ ವಿರುದ್ದ ಬಿಎಸ್ಎನ್ಎಲ್ ನಿವೃತ್ತ ನೌಕರರ ಪ್ರತಿಭಟನೆ
Shivamogga: BSNL retired employees protest against the central government
ಶಿವಮೊಗ್ಗ : ಕೇಂದ್ರ ಸರ್ಕಾರದ ವಿರುದ್ದ ಬಿಎಸ್ಎನ್ಎಲ್ ನಿವೃತ್ತ ನೌಕರರ ಪ್ರತಿಭಟನೆ
shimoga news | ಶಿವಮೊಗ್ಗ : ಹೃದಯಾಘಾತದಿಂದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು!
Shivamogga: Engineering student dies of heart attack!
ಶಿವಮೊಗ್ಗ : ಹೃದಯಾಘಾತದಿಂದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು!
