Lokayukta team conducts surprise inspection at Shivamogga Municipal Corporation office! ಶಿವಮೊಗ್ಗ ಪಾಲಿಕೆ ಕಚೇರಿಯಲ್ಲಿ ಲೋಕಾಯುಕ್ತ ತಂಡದಿಂದ ದಿಡೀರ್ ತಪಾಸಣೆ!

shimoga news | ಶಿವಮೊಗ್ಗ ಪಾಲಿಕೆ ಕಚೇರಿಯಲ್ಲಿ ಲೋಕಾಯುಕ್ತ ತಂಡದಿಂದ ದಿಡೀರ್ ತಪಾಸಣೆ!

ಶಿವಮೊಗ್ಗ (shivamogga), ಜನವರಿ 09: ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಗೆ ಜನವರಿ 9 ರಂದು ಲೋಕಾಯುಕ್ತ ತಂಡ ದಿಡೀರ್ ಭೇಟಿಯಿತ್ತು, ವಿವಿಧ ವಿಭಾಗಗಳಲ್ಲಿ ಪರಿಶೀಲನೆ ನಡೆಸಿತು.

ಪಾಲಿಕೆಯ ಕಂದಾಯ, ಆರೋಗ್ಯ, ಆಡಳಿತ ಸೇರಿದಂತೆ ಹಲವು ವಿಭಾಗಗಳಲ್ಲಿ ಲೋಕಾಯುಕ್ತ ತಂಡ ಕಡತಗಳ ಪರಿಶೀಲನೆ ನಡೆಸಿದೆ. ವಿವಿಧ ವಿಷಯಗಳ ಕುರಿತಂತೆ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಮಾಹಿತಿ ಕಲೆ ಹಾಕುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಳಿಗ್ಗೆಯಿಂದ ಆರಂಭಗೊಂಡ ತಪಾಸಣಾ ಕಾರ್ಯವು ಮಧ್ಯಾಹ್ನದವರೆಗೂ ಮುಂದುವರಿದಿತ್ತು. ಸುಮಾರು 25 ಕ್ಕೂ ಹೆಚ್ಚು ಜನರಿದ್ದ ಲೋಕಾಯುಕ್ತ ಅಧಿಕಾರಿ – ಸಿಬ್ಬಂದಿಗಳ ತಂಡವು, ಏಕಕಾಲದಲ್ಲಿ ಪಾಲಿಕೆಯ ವಿವಿಧ ವಿಭಾಗಗಳಲ್ಲಿ ತಪಾಸಣೆ ನಡೆಸಿದ್ದು ಬಿಸಿ ಬಿಸಿ ಚರ್ಚೆಗೆಡೆ ಮಾಡಿಕೊಟ್ಟಿದೆ.

ಪಾಲಿಕೆಯ ವಿವಿಧ ವಿಭಾಗಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಜನಸಾಮಾನ್ಯರ ಕೆಲಸಕಾರ್ಯಗಳು ಆಗುತ್ತಿಲ್ಲ. ಕಡತಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ- ಎಂಬಿತ್ಯಾದಿ ಸಾರ್ವಜನಿಕ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ತಂಡ ತಪಾಸಣೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಆದರೆ ತಪಾಸಣೆ ಕುರಿತಂತೆ ಲೋಕಾಯುಕ್ತ ತಂಡ ಯಾವುದೇ ಅದಿಕೃತ ಮಾಹಿತಿ ನೀಡಿಲ್ಲ. ಇನ್ನಷ್ಟೆ ಈ ಕುರಿತಂತ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.

Lokayukta team conducts surprise inspection at Shivamogga Municipal Corporation office! | Shivamogga, January 09: A Lokayukta team made a surprise visit to the Shivamogga Municipal Corporation office on January 9 and inspected various departments.

Shivamogga: Engineering student dies of heart attack! ಶಿವಮೊಗ್ಗ : ಹೃದಯಾಘಾತದಿಂದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು! Previous post shimoga news | ಶಿವಮೊಗ್ಗ : ಹೃದಯಾಘಾತದಿಂದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು!
Shivamogga: BSNL retired employees protest against the central government ಶಿವಮೊಗ್ಗ : ಕೇಂದ್ರ ಸರ್ಕಾರದ ವಿರುದ್ದ ಬಿಎಸ್ಎನ್ಎಲ್ ನಿವೃತ್ತ ನೌಕರರ ಪ್ರತಿಭಟನೆ Next post shimoga news | ಶಿವಮೊಗ್ಗ : ಕೇಂದ್ರ ಸರ್ಕಾರದ ವಿರುದ್ದ ಬಿಎಸ್ಎನ್ಎಲ್ ನಿವೃತ್ತ ನೌಕರರ ಪ್ರತಿಭಟನೆ