shimoga news | ಶಿವಮೊಗ್ಗ : ಕೇಂದ್ರ ಸರ್ಕಾರದ ವಿರುದ್ದ ಬಿಎಸ್ಎನ್ಎಲ್ ನಿವೃತ್ತ ನೌಕರರ ಪ್ರತಿಭಟನೆ
ಶಿವಮೊಗ್ಗ (shivamogga), ಜನವರಿ 09: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರ್ಕಾರಿ ಇಲಾಖೆಗಳ ನಿವೃತ್ತ ನೌಕರರು ಜನವರಿ 09 ರಂದು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ಇದಕ್ಕೆ ಬೆಂಬಲವಾಗಿ ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರುವ ಬಿಎಸ್ಎನ್ಎಲ್ ಭವನದ ಎದುರು ಆಲ್ ಇಂಡಿಯಾ ಬಿಎಸ್ಎನ್ಎಲ್ – ಡಾಟ್ ಪೆನ್ಷನರ್ಸ್ ಸಂಘಟನೆ ಧರಣಿ ನಡೆಸಿತು.
ಕೇಂದ್ರ ಸರ್ಕಾರದ ಹಣಕಾಸು ಬಿಲ್ ನಲ್ಲಿ 8 ನೇ ವೇತನ ಆಯೋಗ ರಚಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರಿ ಇಲಾಖೆಗಳ ನಿವೃತ್ತ ನೌಕರರು ಪಡೆಯುತ್ತಿರುವ ಪಿಂಚಣಿ ಪರಿಷ್ಕರಿಸಲು ಅವಕಾಶ ನೀಡಿಲ್ಲ. ಇದು ಖಂಡನಾರ್ಹವಾದುದಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೇತನ ಆಯೋಗದ ಪರಿಷ್ಕರಣೆಯಲ್ಲಿ ನಿವೃತ್ತರನ್ನು ಪರಿಗಣನೆ ಮಾಡದಿರುವುದು ನಿಜಕ್ಕೂ ನಿವೃತ್ತ ನೌಕರ ವಿರೋಧಿ ಧೋರಣೆಯಾಗಿದೆ. ಪಿಂಚಣಿ ಪರಿಷ್ಕರಣೆ ಮಾಡುವುದು ಅಗತ್ಯವಾಗಿದೆ. ಇದು ಸರ್ಕಾರದ ಅಗತ್ಯ ಕ್ರಮವಾಗಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ತಕ್ಷಣವೇ ಕೇಂದ್ರ ಸರ್ಕಾರ ನಿವೃತ್ತ ನೌಕರರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಮುಖಂಡರಾದ ನಾಗರಾಜ್, ಬಸವರಾಜ್, ರಾಜಪ್ಪ, ರಾಮಾನಾಯ್ಕ್, ಅರ್ಜುನ್, ಕೃಷ್ಣಮೂರ್ತಿ, ಚಂದ್ರಶೇಖರ್, ಕೃಷ್ಣಪ್ಪ. ರಾಮಪ್ಪ, ರಾಜಪ್ಪ, ಚನ್ನಬಸಪ್ಪ, ಚನ್ನಕೇಶವಮೂರ್ತಿ ಹೊಸಹಳ್ಳಿ ಸೇರಿದಂತೆ ಮೊದಲಾದವರಿದ್ದರು.
“Demanding the fulfillment of various demands, retired employees of central government departments held nationwide protests on January 9. In support of this, the All India BSNL-DOT Pensioners’ Association staged a sit-in protest in front of the BSNL building on Sagar Road in Shivamogga city.”
