ಸಾಗರ (sagar), ಜನವರಿ 11: ಮಹಿಳೆಯೋರ್ವರ ಮುಖಕ್ಕೆ ಖಾರದ ಪುಡಿ ಎರಚಿ, ಸ್ಟೀಲ್ ರಾಡ್ ನಿಂದ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದವ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿದ್ದ ಆರೋಪಿಯನ್ನು ಸಾಗರ ತಾಲೂಕಿನ ಆನಂದಪುರ ಠಾಣೆ ಪೊಲೀಸರು ಜನವರಿ 10 ರಂದು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಹಲ್ಲೆ ನಡೆಸಿದ ಆರೋಪಿ ಸೊರಬ ತಾಲೂಕು ವಡ್ಡಿಗೆರೆ ಗ್ರಾಮದ ನಿವಾಸಿ ಗೋವಿಂದ ವೈ (24) ಹಾಗೂ ಹಲ್ಲೆಗೆ ಕುಮ್ಮಕ್ಕು ನೀಡಿದ ಆಪಾದನೆ ಮೇರೆಗೆ ವಡ್ಡಿಗೆರೆ ಗ್ರಾಮದ ನಿವಾಸಿ ಕಿರಣಕುಮಾರ್ (32) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಇಬ್ಬರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಜನವರಿ 11 ರಂದು ಜಿಲ್ಲಾ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಸಾಗರ ಡಿವೈಎಸ್ಪಿ ಕೇಶವ ಕೆ ಇ, ಗ್ರಾಮಾಂತರ ಸರ್ಕಲ್ ಇನ್ಸ್’ಪೆಕ್ಟರ್ ಸಂತೋಷ್ ಶೆಟ್ಟಿ ಮಾರ್ಗದರ್ಶನದಲ್ಲಿ ಸಬ್ ಇನ್ಸ್’ಪೆಕ್ಟರ್ ಪ್ರವೀಣ್ ಎಸ್ ಪಿ, ಶಿವಮೊಗ್ಗ ಸಿಡಿಆರ್ ಸೆಲ್ ಸಿಬ್ಬಂದಿಗಳಾದ ಇಂದ್ರೇಶ್, ಗುರು, ಸಿದ್ದರೂಡ, ಪ್ರಶಾಂತ್, ಪರಶುರಾಮ್, ತಾಹಿರ್, ಉಮೇಶ್ ಲಮಾಣಿ, ಹರ್ಷರವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಘಟನೆ ಹಿನ್ನೆಲೆ : 5/1/2026 ರಂದು ಸಂಜೆ 7 ಗಂಟೆ ಸಮಯದಲ್ಲಿ ಸಾಗರ ತಾಗರ ತಾಲೂಕಿನ ಮಸಕಲ್ ಬೈಲು ಬಸ್ ನಿಲ್ದಾಣದಿಂದ, ಮಾವ ಚಲಾಯಿಸುತ್ತಿದ್ದ ಬೈಕ್ ನಲ್ಲಿ ಶೃತಿ ಎಂಬ ಮಹಿಳೆ ತೆರಳುತ್ತಿದ್ದರು.
ಈ ವೇಳೆ ಅಪರಿಚಿತನೋರ್ವ ಬೈಕ್ ಅಡ್ಡಗಟ್ಟಿ ನಿಲ್ಲಿಸಿ ಏಕಾಏಕಿ ಶೃತಿ ಅವರ ಮುಖಕ್ಕೆ ಖಾರದ ಪುಡಿ ಎರಚಿದ್ದ. ನಂತರ ಸ್ಟೀಲ್ ರಾಡ್ ನಿಂದ ಅವರ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Attempt to Murder Case: Two Accused Arrested!Sagara, January 11:A woman was attacked by having chili powder thrown on her face and being struck on the head with a steel rod in a murderous assault. The main accused who carried out the attack, along with the accomplice who supported him, were successfully arrested by the Anandapur Police of Sagara Taluk on January 10.

