shimoga news | ಶಿವಮೊಗ್ಗ : ಕೆಹೆಚ್’ಬಿ – ಪಾಲಿಕೆಯಿಂದ ಜಂಟಿ ಒತ್ತುವರಿ ತೆರವು ಕಾರ್ಯಾಚರಣೆ – ಕೋಟ್ಯಾಂತರ ರೂ. ಮೌಲ್ಯದ ಜಾಗ ವಶಕ್ಕೆ

Encroachment clearance operation by the Shivamogga Municipal Corporation administration! ಶಿವಮೊಗ್ಗ ಪಾಲಿಕೆಯಿಂದ ಒತ್ತುವರಿ ತೆರವು ಕಾರ್ಯಾಚರಣೆ!

ಶಿವಮೊಗ್ಗ (shivamogga), ಜನವರಿ 13: ಶಿವಮೊಗ್ಗ ಮಹಾನಗರ ಪಾಲಿಕೆ ವಾರ್ಡ್ 31 ರ ವ್ಯಾಪ್ತಿ ಗೋಪಿಶೆಟ್ಟಿಕೊಪ್ಪದಲ್ಲಿನ ಕೆಹೆಚ್’ಬಿ ಬಡಾವಣೆಯಲ್ಲಿ ರಸ್ತೆ ಜಾಗ, ಖಾಲಿ ನಿವೇಶನ ಹಾಗೂ ಸಿಎ ಜಾಗ ಒತ್ತುವರಿ ಮಾಡಿ ಹಾಕಿದ್ದ ಕಾಂಪೌಂಡ್ ನ್ನು, ಪೊಲೀಸ್ ಪಹರೆಯಲ್ಲಿ ಕರ್ನಾಟಕ ಗೃಹ ಮಂಡಳಿ ( ಕೆಹೆಚ್’ಬಿ) ಹಾಗೂ ಮಹಾನಗರ ಪಾಲಿಕೆ ಆಡಳಿತ ಜಂಟಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಿದ ಘಟನೆ ಜನವರಿ 13 ರಂದು ನಡೆದಿದೆ.  

ಗೋಪಿಶೆಟ್ಟಿಕೊಪ್ಪ ಬಡಾವಣೆಯ ಕೆರೆಯ ಬಳಿ, ಕಳೆದ ಹಲವು ವರ್ಷಗಳ ಹಿಂದೆ ಕೆಹೆಚ್’ಬಿ ಸಂಸ್ಥೆ ಬಡಾವಣೆ ನಿರ್ಮಾಣ ಮಾಡಿತ್ತು. ಸದರಿ ಬಡಾವಣೆಯ ನಿರ್ವಹಣೆಯ ಜವಾಬ್ದಾರಿಯನ್ನು, ಈಗಾಗಲೇ ಪಾಲಿಕೆ ಆಡಳಿತಕ್ಕೆ ಹಸ್ತಾಂತರ ಮಾಡಿದೆ.

ಸದರಿ ಬಡಾವಣೆಯಲ್ಲಿ ಹಾದು ಹೋಗಿರುವ 60 ಅಡಿ ರಸ್ತೆ, ಖಾಲಿ ನಿವೇಶನ ಹಾಗೂ ಸಾರ್ವಜನಿಕ ಉಪಯೋಗ (ಸಿಎ) ಬಿಟ್ಟ ನಿವೇಶನವನ್ನು ವ್ಯಕ್ತಿಯೋರ್ವರು ಒತ್ತುವರಿ ಮಾಡಿ ಕಾಂಪೌಂಡ್ ಹಾಕಿದ್ದ ಆರೋಪ ಕೇಳಿಬಂದಿತ್ತು.

ಈ ಹಿನ್ನೆಲೆಯಲ್ಲಿ ಕೆಹೆಚ್’ಬಿ ಹಾಗೂ ಪಾಲಿಕೆ ಆಡಳಿತವು ಪೊಲೀಸ್ ಪಹರೆಯೊಂದಿಗೆ ಮಂಗಳವಾರ ಸದರಿ ಕಾಂಪೌಂಡ್ ನ್ನು ಜೆಸಿಬಿ ಮೂಲಕ ತೆರವುಗೊಳಿಸಿದೆ. ಒತ್ತುವರಿಯಾಗಿದ್ದ ಕೋಟ್ಯಾಂತರ ರೂ. ಮೌಲ್ಯದ ಜಾಗವನ್ನು ತನ್ನ ವಶಕ್ಕೆ ಪಡೆಯುವಲ್ಲಿ ಸಫಲವಾಗಿವೆ.

ಕಾರ್ಯಾರಣೆಯಲ್ಲಿ ಕೆಹೆಚ್’ಬಿ ಸಂಸ್ಥೆಯ ಕಾರ್ಯಪಾಲಕ ಅಭಿಯಂತರ ಶರಣಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಹರೀಶ್ ಕೆ, ಕಚೇರಿ ಅಧೀಕ್ಷಕರಾದ ಅನ್ವರ್ ಬಾಬು, ಮಹಾನಗರ ಪಾಲಿಕೆ ಕಂದಾಯ ವಿಭಾಗದ ಆಯುಕ್ತರಾದ ಪೂಜಾರ್, ಹೆಲ್ತ್ ಇನ್ಸ್’ಪೆಕ್ಟರ್ ಸುರೇಶ್ ಕುಮಾರ್, ರೆವಿನ್ಯೂ ಇನ್ಸ್’ಪೆಕ್ಟರ್ ಗಳಾದ ಅಂಜನಮೂರ್ತಿ, ಅನೀಸ್, ಸರ್ವೇಯರ್ ವೇಣುಗೋಪಾಲ್, ಬಿಲ್ ಕಲೆಕ್ಟರ್ ಲಕ್ಷ್ಮಣ್, ಜೆಸಿಬಿ ಆಪರೇಟರ್ ಗಳಾದ ಸತೀಶ್, ಹರ್ಷ,

ತುಂಗಾ ನಗರ ಪೊಲೀಸ್ ಠಾಣೆ ಇನ್ಸ್’ಪೆಕ್ಟರ್ ಗುರುರಾಜ್, ಸಬ್ ಇನ್ಸ್’ಪೆಕ್ಟರ್ ಗಾದಿ ಲಿಂಗಪ್ಪ, ಸಿಬ್ಬಂದಿಗಳಾದ ಜನಾರ್ದನ್, ಯಶವಂತ್  ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

*** ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪದ ಕೆಹೆಚ್’ಬಿ ಸಂಸ್ಥೆಯ ಬಡಾವಣೆಯಲ್ಲಾಗಿದ್ದ ಕೋಟ್ಯಾಂತರ ರೂ. ಮೌಲ್ಯದ ಜಾಗ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳುವಂತೆ, ಶಿವಮೊಗ್ಗ ಕೆಹೆಚ್’ಬಿ ಎಇಇ ಹರೀಶ್ ಕೆ ಅವರಿಗೆ ಬೆಂಗಳೂರಿನ ಕೆಹೆಚ್’ಬಿ ಸಂಸ್ಥೆಯ ಆಯುಕ್ತರಾದ, ಹಿರಿಯ ಐಎಎಸ್ ಅಧಿಕಾರಿ ಕೆ ಎ ದಯಾನಂದ್ ಅವರು ಇತ್ತೀಚೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಕೆ ಎ ದಯಾನಂದ್ ಅವರ ಖಡಕ್ ಸೂಚನೆ ಬೆನ್ನಲ್ಲೆ ಎಚ್ಚೆತ್ತ ಕೆಹೆಚ್’ಬಿ ಸಂಸ್ಥೆಯು, ಪಾಲಿಕೆ ಆಡಳಿತದ ನೆರವಿನೊಂದಿಗೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದೆ ಎಂಬ ಮಾಹಿತಿ ತಿಳಿದುಬಂದಿದೆ. ಪ್ರಸ್ತುತ ಕೆಹೆಚ್’ಬಿ ಆಯುಕ್ತರಾಗಿರುವ ಕೆ ಎ ದಯಾನಂದ್ ಅವರು ಈ ಹಿಂದೆ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡಿದ್ದರು. ತಮ್ಮ ಜನಪರ ಹಾಗೂ ದಕ್ಷ ಆಡಳಿತದ ಮೂಲಕ ನಾಗರೀಕರ ಮೆಚ್ಚುಗೆಗೆ ಪಾತ್ರರಾಗಿದ್ದರು.

Shimoga: KHB–City Corporation Joint Encroachment Clearance Drive – Land Worth Crores Reclaimed | Shimoga, January 13: In Ward No. 31, Gopishettikoppa, within the KHB Colony, compound walls that had encroached upon road space, vacant plots, and CA (civic amenity) sites were demolished in a joint operation carried out by the Karnataka Housing Board (KHB) and the Shimoga City Corporation administration on January 13.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →