ಶಿವಮೊಗ್ಗ (shivamogga), ಜನವರಿ 19: ಜ್ಯೂಸ್ ಸೆಂಟರ್ ಹಾಗೂ ಬಟ್ಟೆ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾದ ಘಟನೆ, ಜನವರಿ 18 ರಂದು ಶಿವಮೊಗ್ಗ ನಗರದ ಬಿ ಹೆಚ್ ರಸ್ತೆಯಲ್ಲಿ ನಡೆದಿದೆ.
ತಗಡಿನ ಶೀಟ್ ಶೆಡ್ ನಲ್ಲಿದ್ದ ಡೈಮೆಂಡ್ ಜ್ಯೂಸ್ ಸೆಂಟರ್ ಹಾಗೂ ಬಾಂಬೆ ಸೇಲ್ ಬಟ್ಟೆ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಘಟನೆಯಲ್ಲಿ ರೆಫ್ರಿಜರೇಟರ್, ಮಿಕ್ಸರ್ ಗ್ರೈಂಡರ್, ಬಟ್ಟೆಗಳು, ಶೋ ಗೊಂಬೆಗಳು, ಬಟ್ಟೆ ಟೇಬಲ್ ಗಳು ಬೆಂಕಿಗಾಹುತಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿದ್ಯುತ್ ಅವಘಡ ಸಂಭವಿಸಿದ್ದು ಹೇಗೆ? ನಷ್ಟದ ಪ್ರಮಾಣವೆಷ್ಟ? ಎಂಬ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.
ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಎಫ್ ಎಸ್ ಟಿ ಓ ಮುಕ್ತುಂ ಹುಸೇನ್, ಎಲ್ ಎಫ್ ಸುನೀಲ್, ಎಫ್ ಡಿ ಸತೀಶ್, ಎಫ್ ಎಂ ಯರ್ರಿಸ್ವಾಮಿ, ಮನೋಜ್ ಮೊದಲಾದವರಿದ್ದರು.
Shivamogga: Fire Accident at Juice Center and Clothing Store! | Shivamogga, January 19: A sudden fire broke out and reduced to ashes a juice center and a clothing store on BH Road in Shivamogga city on January 18. The incident occurred at the Diamond Juice Center and Bombay Sale Clothing Store, which were housed in a tin-sheet shed. Items such as a refrigerator, mixer grinder, clothes, display mannequins, and clothing tables were destroyed in the fire, according to available information. Details regarding whether the fire was caused by an electrical short circuit and the extent of the loss are yet to be confirmed. Firefighting operations were carried out by Fire Service officers FSTO Mukthum Hussain, LF Sunil, FD Satish, FM Yarriswamy, Manoj, and others.

