shmimoga news | ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಕಾಮಗಾರಿ ವೇಳೆ ಭೂ ಕುಸಿತ : ಶಿವಮೊಗ್ಗ – ಭದ್ರಾವತಿ ನಡುವೆ ವಾಹನ ಸಂಚಾರ ದುಸ್ತರ!

National Highway Underpass Work Causes Landslide: Traffic Disrupted Between Shivamogga and Bhadravati! ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಕಾಮಗಾರಿ ವೇಳೆ ಭೂ ಕುಸಿತ : ಶಿವಮೊಗ್ಗ – ಭದ್ರಾವತಿ ನಡುವೆ ವಾಹನ ಸಂಚಾರ ದುಸ್ತರ!

ಶಿವಮೊಗ್ಗ (shivamogga), ಜನವರಿ 23: ಶಿವಮೊಗ್ಗ – ಭದ್ರಾವತಿ ನಡುವಿನ ಮಾಚೇನಹಳ್ಳಿಯ ಶಿಮುಲ್ ಡೈರಿ ಬಳಿ ನಡೆಯುತ್ತಿರುವ, ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಮಾರ್ಗದ ಅಂಡರ್ ಪಾಸ್ ಕಾಮಗಾರಿ ಸ್ಥಳದ ಬಳಿ ಭೂ ಕುಸಿತ ಉಂಟಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಅಡೆತಡೆಯಾಗಿದೆ.

ಅಂಡರ್ ಪಾಸ್ ಕಾಮಗಾರಿ ಹಿನ್ನೆಲೆಯಲ್ಲಿ ಒಂದು ಕಡೆ ಸರ್ವಿಸ್ ರಸ್ತೆ ಬಿಡಲಾಗಿದೆ. ಸದರಿ ಸ್ಥಳದ ಸಮೀಪವೇ ಭೂ ಕುಸಿತ ಉಂಟಾಗಿದೆ. ಇದರಿಂದ ಸದರಿ ರಸ್ತೆಯಲ್ಲಿ ಮೊದಲೇ ದುಸ್ತರವಾಗಿರುವ ವಾಹನ ಸಂಚಾರವು, ಮತ್ತಷ್ಟು ಸಂಕಷ್ಟಮಯವಾಗಿ ಪರಿಣಮಿಸುವಂತಾಗಿದೆ ಎಂದು ಸವಾರರು ದೂರಿದ್ದಾರೆ.

ಕಳೆದ 4 ವರ್ಷಗಳ ಹಿಂದೆ ಅಂಡರ್ ಪಾಸ್ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆಯದ ಕಾರಣದಿಂದ, ವಾಹನ ಸವಾರರು ತೀವ್ರ ತೊಂದರೆಗೆ ಸಿಲುಕುವಂತಾಗಿದೆ. ಸದ್ಯದ ಕಾಮಗಾರಿ ವೇಗ ಗಮನಿಸಿದರೆ, ಮುಂದಿನ ಮಳೆಗಾಲದ ವೇಳೆಗೂ ಪೂರ್ಣಗೊಳ್ಳುವ ಲಕ್ಷಣಗಳಿಲ್ಲವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಕ್ಷಣವೇ ಭೂ ಸಾರಿಗೆ ಇಲಾಖೆಯು ಇತ್ತ ಗಮನಹರಿಸಬೇಕು. ಅಂಡರ್ ಪಾಸ್ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

National Highway Underpass Work Causes Landslide: Traffic Disrupted Between Shivamogga and Bhadravati! | Shivamogga, January 23: A landslide has occurred near the underpass construction site of the National Highway four-lane project close to the Shimul Dairy at Machenahalli, between Shivamogga and Bhadravati. This has obstructed vehicle movement. Due to the underpass work, a service road had been provided on one side. The landslide occurred near this road, making the already difficult traffic situation even more troublesome, according to commuters.The underpass construction began four years ago. However, since the work has not progressed at the expected pace, motorists have been facing severe difficulties. Observing the current speed of the work, locals express dissatisfaction, saying there are no signs of completion even by the next monsoon season.Residents urge the Department of Road Transport to immediately take note of the situation. They demand that the underpass construction be completed within the stipulated time to ensure smooth vehicle movement.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →