shikaripura news | ಶಿಕಾರಿಪುರ : ಬಸ್ ನಿಲ್ದಾಣದಲ್ಲಿ ಸಿಕ್ಕಿದ ಮಾಂಗಲ್ಯ ಸರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದವರಿಗೆ ಸನ್ಮಾನ

Shikaripura: Honoring those who showed honesty by returning a lost mangalya chain ಶಿಕಾರಿಪುರ : ಬಸ್ ನಿಲ್ದಾಣದಲ್ಲಿ ಸಿಕ್ಕಿದ ಮಾಂಗಲ್ಯ ಸರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದವರಿಗೆ ಸನ್ಮಾನ

ಶಿಕಾರಿಪುರ (shikaripur), ಜನವರಿ 25: ಬಸ್ ನಿಲ್ದಾಣದಲ್ಲಿ ಸಿಕ್ಕಿದ ಮಾಂಗಲ್ಯ ಸರವನ್ನು ವಾರಸುದಾರರಿಗೆ ಹಿಂದಿರುಗಿಸ ಪ್ರಾಮಾಣಿಕತೆಗೆ ಮೆರೆದ ಇಬ್ಬರು ವ್ಯಕ್ತಿಗಳಿಗೆ, ಶಿಕಾರಿಪುರ ಪೊಲೀಸರು ಸನ್ಮಾನಿಸಿ ಅಭಿನಂದಿಸಿದ್ದಾರೆ.

ಶಿಕಾರಿಪುರ ತಾಲೂಕು ಕಪ್ಪನಹಳ್ಳಿ ಗ್ರಾಮದ ನಿವಾಸಿಗಳಾದ ಪರಶುರಾಮ್ ಹಾಗೂ ಅಶೋಕ್ ಕುಮಾರ್ ಪ್ರಾಮಾಣಿಕತೆ ಮೆರೆದ ವ್ಯಕ್ತಿಗಳಾಗಿದ್ದಾರೆ.

ಇವರಿಗೆ 21-1-2026 ರಂದು ಶಿಕಾರಿಪುರ ಪಟ್ಟಣದ ಬಸ್ ನಿಲ್ದಾಣ ಆವರಣದಲ್ಲಿ 8 ಗ್ರಾಂ ತೂಕದ ಮಾಂಗಲ್ಯ ಸರ ಸಿಕ್ಕಿತ್ತು. ಇದನ್ನು ಅವರು ಶಿಕಾರಿಪುರ ಪಟ್ಟಣ ಪೊಲೀಸ್ ಠಾಣೆಗೆ ತಂದು ಕೊಟ್ಟಿದ್ದರು.

ಪೊಲೀಸರು ಮೂಲ ವಾರಸುದಾರರನ್ನು ಪತ್ತೆ ಹಚ್ಚಿ, ಜನವರಿ 23 ರಂದು ಹಿಂದಿರುಗಿಸಿದ್ದಾರೆ. ಹಾಗೆಯೇ ಪ್ರಾಮಾಣಿಕತೆ ಮೆರೆದ ಪರಶುರಾಮ್ ಹಾಗೂ ಅಶೋಕ್ ಕುಮಾರ್ ಅವರಿಗೆ ಸನ್ಮಾನಿಸಿ ಅಭಿನಂದಿಸಿದ್ದಾರೆ.

Shikaripura: Honoring those who showed honesty by returning a lost mangalya chain | Shikaripura, January 25: Two individuals who displayed honesty by returning a mangalya chain found at the bus stand to its rightful owner were honored and congratulated by the Shikaripura police. The honest individuals are residents of Kappanahalli village in Shikaripura taluk — Parashuram and Ashok Kumar. On January 21, 2026, they found a mangalya chain weighing 8 grams in the premises of the Shikaripura town bus stand. They handed it over to the Shikaripura Town Police Station.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →