ಶಿವಮೊಗ್ಗ (shivamogga), ಜನವರಿ 26: ಶಿವಮೊಗ್ಗದ ವಿದ್ಯಾನಗರದಲ್ಲಿರುವ ಆಹಾರ ಪದಾರ್ಥಗಳ ದಾಸ್ತಾನು ಗೋಡೌನ್ ಮೇಲೆ ಅಧಿಕಾರಿಗಳ ತಂಡ ದಿಡೀರ್ ದಾಳಿ ನಡೆಸಿದ ಘಟನೆ ಜನವರಿ 26 ರಂದು ನಡೆದಿದೆ.
ಈ ವೇಳೆ ಗೋಡೌನ್ ನಲ್ಲಿ ಅವಧಿ ಮೀರಿದ #Expired ಭಾರೀ ಪ್ರಮಾಣದ ತಿಂಡಿ-ತಿನಿಸು ಪ್ಯಾಕೆಟ್ ಗಳು, ಆಹಾರ ಪದಾರ್ಥಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಅಪರ ಜಿಲ್ಲಾಧಿಕಾರಿ ಅಭಿಷೇಕ್ ನೇತೃತ್ವದಲ್ಲಿ ಸದರಿ ಕಾರ್ಯಾಚರಣೆ ನಡೆಸಲಾಗಿದೆ. ಉಪ ವಿಭಾಗಾಧಿಕಾರಿ ಸತ್ಯನಾರಾಯಣ, ತಹಶೀಲ್ದಾರ್ ವಿ ಎಸ್ ರಾಜೀವ್ ಸೇರಿದಂತೆ ಆಹಾರ ಇಲಾಖೆ, ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಅಧಿಕಾರಿ – ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಬೆಂಗಳೂರಿನಿಂದ ಸದರಿ ಆಹಾರ ಪದಾರ್ಥಗಳನ್ನು ತಂದು, ಶಿವಮೊಗ್ಗದಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬ ವಿವರವನ್ನು ಸಂಬಂಧಿಸಿದವರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಅಧಿಕಾರಿಗಳ ತಂಡ ವಶಕ್ಕೆ ಪಡೆದು ನಾಶಗೊಳಿಸಲು ಕೊಂಡೊಯ್ದಿದೆ. ಕಾರ್ಯಾಚರಣೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.
Shivamogga: Surprise Raid – Large Quantity of Expired Food Items Found! | Shivamogga, January 26: A surprise raid was conducted on a food storage warehouse located in Vidyanagar, Shivamogga, on January 26 by a team of officials. During the raid, a huge stock of expired snack packets and food items was discovered. The operation was led by Additional Deputy Commissioner Abhishek. Sub-Divisional Officer Satyanarayana, Tahsildar V. S. Rajeev, along with officials and staff from the Food Department, Municipal Corporation, and Health Department, participated in the raid. It has been revealed that these food items were brought from Bengaluru and sold in Shivamogga.

