shimoga news | ಯಶವಂತಪುರ – ತಾಳಗುಪ್ಪ ರೈಲಿನಲ್ಲಿ ದರೋಡೆ : ಶಿವಮೊಗ್ಗ ನಗರದಲ್ಲಿ ನಡೆದ ಘಟನೆ!

ಭದ್ರಾವತಿ : ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ ಬೆಂಕಿ! ಭದ್ರಾವತಿ, ಫೆಬ್ರವರಿ 20: ಮನೆ ಮುಂಭಾಗ ನಿಲ್ಲಿಸಿದ್ದ ಮೂರು ಬೈಕ್ ಗಳಿಗೆ, ಕಿಡಿಗೇಡಿಗಳು ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಭದ್ರಾವತಿಯ ನೆಹರು ನಗರದಲ್ಲಿ ಫೆಬ್ರವರಿ 17 ರ ಮುಂಜಾನೆ ನಡೆದಿದೆ. ಆದಿಲ್ ಎಂಬುವರ ಮನೆಯ ಬಳಿ ಘಟನೆ ನಡೆದಿದೆ. ಬಜಾಜ್ ಡಿಸ್ಕವರ್, ಪಲ್ಸರ್ ಮತ್ತು ಪ್ಲಾಟಿನಾ ಬೆಂಕಿಗಾಹುತಿಯಾದ ಬೈಕ್ ಗಳಾಗಿವೆ. ಸದರಿ ಬೈಕ್ ಗಳು ಆದಿಲ್ ಅವರ ಸಹೋದರರಿಗೆ ಸೇರಿದ್ದಾಗಿವೆ. ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಒಟ್ಟಾರೆ 1.85 ಲಕ್ಷ ರೂ. ನಷ್ಟವಾಗಿದೆ. ಬೆಂಕಿ ಹಚ್ಚಿದವರು ಯಾರು? ಕಾರಣವೇನು? ಎಂಬಿತ್ಯಾದಿ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ. ಈ ಸಂಬಂಧ ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Bhadravati: Three bikes parked in front of a house set on fire! Bhadravati, February 20: In a shocking incident, miscreants set fire to three bikes parked in front of a house in Nehru Nagar, Bhadravati, during the early hours of February 17. The incident occurred near the residence of a man named Adil. The bikes that were burnt include a Bajaj Discover, Pulsar, and Platina. These belonged to Adil’s brothers. All three bikes were completely gutted in the fire, resulting in a total loss estimated at ₹1.85 lakh. The identity of those who set the fire and the motive behind the act remain unknown and are under police investigation. A case has been registered at the Bhadravati Old Town Police Station in connection with the incident.

ಶಿವಮೊಗ್ಗ (shivamogga), ಫೆಬ್ರವರಿ 12: ರೈಲಿನ ಬೋಗಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಯೋರ್ವ, ಪ್ರಯಾಣಿಕರಿಗೆ ಬೆದರಿಸಿ ಮೊಬೈಲ್ ಪೋನ್ ವೊಂದನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಶಿವಮೊಗ್ಗದ ವಿದ್ಯಾನಗರ ರೈಲ್ವೆ ನಿಲ್ದಾಣದ ಬಳಿ ಕಳೆದ ಮಂಗಳವಾರ ರಾತ್ರಿ ನಡೆದಿದೆ.

ಯಶವಂತಪುರ – ತಾಳಗುಪ್ಪ ರೈಲಿನಲ್ಲಿ ಸದರಿ ಘಟನೆ ನಡೆದಿದೆ. ಎಂದಿನಂತೆ ತಾಳಗುಪ್ಪದಿಂದ ಯಶವಂತಪುರಕ್ಕೆ ಹೊರಟ ರೈಲು, ಶಿವಮೊಗ್ಗದ ವಿದ್ಯಾನಗರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದೆ. ಈ ವೇಳೆ ಏಕಾಏಕಿ ದುಷ್ಕರ್ಮಿಯೋರ್ವ ಬೋಗಿಯೊಂದಕ್ಕೆ ನುಗ್ಗಿದ್ದಾನೆ. ಮಾರಕಾಸ್ತ್ರದಿಂದ ಪ್ರಯಾಣಿಕರಿಗೆ ಬೆದರಿಸಿದ್ದಾನೆ ಎನ್ನಲಾಗಿದೆ.

ನಂತರ ಪ್ರಯಾಣಿಕರೋರ್ವರ ಬಳಿಯಿದ್ದ ಮೊಬೈಲ್ ಪೋನ್ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಕುರಿತಂತೆ ರೈಲ್ವೆ ಪ್ರಯಾಣಿಕರೋರ್ವರು ರೈಲ್ವೆ ಇಲಾಖೆಯ ರೈಲ್ ಮದದ್ ಪೋರ್ಟ್’ಲ್ ನಲ್ಲಿ ದೂರು ಕೂಡ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

Robbery on Yeshwanthpur–Talaguppa Train : Incident in Shivamogga City!

Shivamogga, February 12: A miscreant entered one of the train coaches near Vidyanagar Railway Station in Shivamogga last Tuesday night, threatened passengers, and fled after snatching a mobile phone. The incident occurred on the Yeshwanthpur–Talaguppa train. As usual, the train had departed Talaguppa for Yeshwanthpur and arrived at Vidyanagar Railway Station in Shivamogga. At that moment, the miscreant suddenly entered a coach and reportedly threatened passengers with a deadly weapon.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →