ಶಿವಮೊಗ್ಗ (shivamogga), ಫೆಬ್ರವರಿ 12: ಶಿವಮೊಗ್ಗ ಜಿಲ್ಲೆಯ ಅತೀ ದೊಡ್ಡ ಗ್ರಾಮ ಪಂಚಾಯ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ, ಶಿವಮೊಗ್ಗದ ಅಬ್ಬಲಗೆರೆ ಗ್ರಾಪಂ ಆಡಳಿತದ ಚುನಾಯಿತ ಜನಪತ್ರಿನಿಧಿಗಳ 5 ವರ್ಷಗಳ ಆಡಳಿತಾವಧಿ ಫೆಬ್ರವರಿ 09 ರಂದು ಪೂರ್ಣಗೊಂಡಿದೆ.
ಈ ಹಿನ್ನೆಲೆಯಲ್ಲಿ ಅಬ್ಬಲಗೆರೆ ಗ್ರಾಪಂಗೆ ಆಡಳಿತಾಧಿಕಾರಿ ನೇಮಿಸಲಾಗಿದೆ. ತಾಲೂಕು ಪಂಚಾಯ್ತಿಯ ತಾಲೂಕು ಉದ್ಯೋಗ ವಿಭಾಗದ ಸಹಾಯಕ ನಿರ್ದೇಶಕರಾದ ಸಂತೋಷ್ ಅವರನ್ನು ಆಡಳಿತಾಧಿಕಾರಿಯಾಗಿ ನಿಯೋಜಿಸಲಾಗಿದೆ.
ಸಂತೋಷ್ ಅವರು ಅಬ್ಬಲಗೆರೆ ಗ್ರಾಪಂ ಕಚೇರಿಗೆ ಆಗಮಿಸಿ, ಆಡಳಿತಾಧಿಕಾರಿಯಾಗಿ ಅಧಿಕೃತ ಕಾರ್ಯಾಭಾರ ಆರಂಭಿಸಿದ್ದಾರೆ. ಪಿಡಿಓ ರಾಜಪ್ಪ ಅವರು ನೂತನ ಆಡಳಿತಾಧಿಕಾರಿಯವರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎ ಅಕ್ಷತಾ, ಬಿಲ್ ಕಲೆಕ್ಟರ್ ಸಂದೀಪ್, ಡಿಇಓ ವಸಂತ್, ಅಟೆಂಡರ್’ಗಳಾದ ಕವಿತಾ, ಗೀತಾ ಅವರು ಉಪಸ್ಥಿತರಿದ್ದರು.
ಮನವಿ ಅರ್ಪಣೆ : ಕೆ ಹೆಚ್ ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದಿಂದ ನೂತನ ಆಡಳಿತಾಧಿಕಾರಿಗಳಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಮನವಿ ಪತ್ರ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರೂ ಆದ ಪತ್ರಕರ್ತ ಬಿ ರೇಣುಕೇಶ್ ಉಪಸ್ಥಿತರಿದ್ದರು.
Santosh Appointed as Administrator of Abbala Gere, the Largest Gram Panchayat in Shivamogga District | Shivamogga, February 12: Abbala Gere Gram Panchayat, recognized as the largest in Shivamogga district, completed the five-year term of its elected representatives on February 9. In this context, an administrator has been appointed to oversee the Panchayat. Santosh, Assistant Director of the Taluk Employment Division under the Taluk Panchayat, has been designated as the new administrator. Santosh arrived at the Abbala Gere Gram Panchayat office and officially assumed charge as administrator. PDO Rajappa welcomed him with a bouquet. On this occasion, SDA Akshata, Bill Collector Sandeep, DEO Vasant, and Attenders Kavita and Geeta were present. Petition Submission: The Welfare Association of KHB Press Colony residents submitted a memorandum to the new administrator regarding the fulfillment of various demands. Association President and journalist B. Renukesh was also present.

