shimoga accident news | ಶಿವಮೊಗ್ಗ : ಶಾಲಾ ಬಸ್ ಗೆ ಸಿಲುಕಿ ಒಂದೂವರೆ ವರ್ಷದ ಪುಟಾಣಿಯ ದಾರುಣ ಸಾವು!

Shivamogga : Tragic death of one-and-a-half-year-old child after being run over by a school bus!ಶಿವಮೊಗ್ಗ : ಶಾಲಾ ಬಸ್ ಗೆ ಸಿಲುಕಿ ಒಂದೂವರೆ ವರ್ಷದ ಪುಟಾಣಿಯ ದಾರುಣ ಸಾವು!

ಶಿವಮೊಗ್ಗ (shivamogga), ಮಾರ್ಚ್ 31: ಶಾಲಾ ಬಸ್ ನಲ್ಲಿ ಆಗಮಿಸಿದ ಅಣ್ಣನನ್ನು ಕರೆದೊಯ್ಯಲು ಪೋಷಕರೊಂದಿಗೆ ಆಗಮಿಸಿದ್ದ ಒಂದೂವರೆ ವರ್ಷದ ಮಗು, ಆಕಸ್ಮಿಕವಾಗಿ ಶಾಲಾ ಬಸ್ ನ ಚಕ್ರಕ್ಕೆ ಸಿಲುಕಿ ಮೃತಪಟ್ಟ ದಾರುಣ ಘಟನೆ, ಶಿವಮೊಗ್ಗ ನಗರದ ಗೋಪಾಳಗೌಡ ಬಡಾವಣೆಯ ಚಂದನ ಪಾರ್ಕ್ ಸಮೀಪ ಮಾರ್ಚ್ 31 ರ ಮಧ್ಯಾಹ್ನ ನಡೆದಿದೆ.

ಆರ್ಯನ್ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಬಸ್ ಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಹೇಗಾಯ್ತು? : ಖಾಸಗಿ ಶಾಲಾ ಬಸ್ ನಲ್ಲಿ ಆಗಮಿಸಿದ ಮಗುವಿನ ಅಣ್ಣನನ್ನು ಕರೆದೊಯ್ಯಲು ಕುಟುಂಬದವರು ಆಗಮಿಸಿದ್ದಾರೆ. ಈ ವೇಳೆ ಅಚಾನಕ್ಕಾಗಿ ಮಗು ರಸ್ತೆ ಮುಂದಕ್ಕೆ ಬಂದಿದೆ. ಇದನ್ನು ಬಸ್ ಚಾಲಕ ಗಮನಿಸಿಲ್ಲ. ಮಗುವಿನ ಮೇಲೆಯೇ ಬಸ್ ಹರಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಅವಘಡದ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ. ಘಟನಾ ಸ್ಥಳಕ್ಕೆ ಪಶ್ಚಿ ಸಂಚಾರಿ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

 

Shivamogga: Tragic death of one-and-a-half-year-old child after being run over by a school bus!

Shivamogga, March 31: A heartbreaking incident occurred near Chandan Park in Gopalgowda Layout, Shivamogga city, on the afternoon of March 31. A one-and-a-half-year-old child, who had come with parents to pick up his elder brother arriving in a school bus, accidentally got caught under the wheels of the bus and died.

The deceased child has been identified as Aryan. The child, who was seriously injured after being run over by the bus, was immediately rushed to a private hospital. Doctors examined him and confirmed that he had passed away, according to locals.

How did it happen? The family had come to pick up the elder brother who arrived in a private school bus. At that moment, the younger child suddenly ran forward onto the road. The bus driver reportedly did not notice this and drove the bus over the child.

Further details about the accident are yet to emerge. Police from the West Traffic Station visited the spot and conducted an investigation.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *