hosanagara news | ಹೊಸನಗರ ತಾಲೂಕಿನ ಶರಾವತಿ ಹಿನ್ನೀರು ಪ್ರದೇಶದಲ್ಲಿ ಎರಡು ಬೃಹತ್ ಸೇತುವೆಗಳ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಸಂಸದರು

“MP inspects construction of two major bridges in Sharavathi backwaters, Hosnagar Taluk” ಹೊಸನಗರ ತಾಲೂಕಿನ ಶರಾವತಿ ಹಿನ್ನೀರು ಪ್ರದೇಶದಲ್ಲಿ ಎರಡು ಬೃಹತ್ ಸೇತುವೆಗಳ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಸಂಸದರು

ಹೊಸನಗರ (hosanagara), ಮೇ 29: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766ಸಿ ಅಭಿವೃದ್ದಿ ಯೋಜನೆಯಡಿ, ಸುತ್ತ ಹಾಗೂ ಬೆಕ್ಕೋಡಿ ಬಳಿ ಶರಾವತಿ ಹಿನ್ನೀರಿಗೆ ನಿರ್ಮಿಸಲಾಗುತ್ತಿರುವ ಸೇತುವೆಗಳನ್ನು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರು ಮೇ 29 ರಂದು ವೀಕ್ಷಿಸಿದರು.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವತಿಯಿಂದ 313 ಕೋಟಿ ರೂ. ವೆಚ್ಚದಲ್ಲಿ 13 ಕಿ.ಮೀ. ಉದ್ದದ ಸಂಪೂರ್ಣ ಮರು ಜೋಡಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಡಿ ಶರಾವತಿ ಹಿನ್ನೀರಿನ ಪ್ರದೇಶಗಳಾದ ಸುತ್ತ ಹಾಗೂ ಬೆಕ್ಕೋಡಿ ಬಳಿ ಎರಡು ಬೃಹತ್ ಸೇತುವೆಗಳ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ.

ಎರಡು ಸೇತುವೆಗಳು ಫುಟ್’ಪಾತ್ ಸೇರಿದಂತೆ ಒಟ್ಟಾರೆ 16 ಮೀಟರ್ ಅಗಲ ಹೊಂದಿವೆ. ಸೇತುವೆಗಳ ನಿರ್ಮಾಣದಿಂದ ಮಲೆನಾಡು ಭಾಗದ ಸಂಪರ್ಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ ಎಂದು ಸಂಸದ ಬಿ ವೈ ರಾಘವೇಂದ್ರ ಅವರು ತಿಳಿಸಿದ್ದಾರೆ.

ನಿಗದಿತ ಅವದಿಯೊಳಗೆ ಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಬೇಕು. ಹಿನ್ನೀರು ಪ್ರದೇಶವಾಗಿರುವುದರಿಂದ, ಪರಿಸರ ಸಮತೋಲನ ಕಾಯ್ದುಕೊಂಡು ಅತ್ಯುನ್ನತ ಎಂಜಿನಿಯರಿಂಗ್ ಗುಣಮಟ್ಟದ ಮಾನದಂಡದೊಂದಿಗೆ ಸುಸ್ಥಿರ ಸೇತುವೆಗಳ ನಿರ್ಮಾಣ ಮಾಡಬೇಕು ಎಂದು ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದ್ದಾರೆ.

ಭೇಟಿಯ ವೇಳೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು, ನಿರ್ಮಾಣ ಸಂಸ್ಥೆ ಪ್ರಮುಖರು, ಸ್ಥಳೀಯ ಬಿಜೆಪಿ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು.

Hosnagar, May 29: Lok Sabha member B. Y. Raghavendra inspected the bridges being built across the Sharavathi backwaters near Sutta and Bekkodi in Hosnagar taluk of Shivamogga district on May 29, under the National Highway 766C development project.

The Ministry of Road Transport and Highways has undertaken a complete 13 km reconstruction project at a cost of ₹313 crore. As part of this, two large bridges are being constructed across the Sharavathi backwaters at Sutta and Bekkodi.

Both bridges, including footpaths, will have a total width of 16 meters. MP Raghavendra stated that the construction of these bridges will bring revolutionary changes to connectivity in the Malnad region.

He instructed officials to complete the bridge works within the stipulated time and open them for public use. Since the area is a backwater zone, he emphasized that the bridges must be built with high engineering standards, ensuring environmental balance and sustainability.

Officials from the National Highways Department, representatives of the construction company, and local BJP leaders were present during the visit.

 

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *