ಶಿಕಾರಿಪುರ (shikaripura), ಜೂನ್ 04: ಇಬ್ಬರು ಮಕ್ಕಳೊಂದಿಗೆ ತಾಯಿಯೋರ್ವರು ನಾಪತ್ತೆಯಾದ ಘಟನೆ, ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕಣಿವೆಮನೆ ಗ್ರಾಮದಲ್ಲಿ ನಡೆದಿದೆ.
ಮಹೇಶ್ ಎಂಬುವರ ಪತ್ನಿ ಪೂರ್ಣಿಮಾ (27) ಹಾಗೂ ಪುತ್ರರಾದ ಧೃವನ್ (8) ಹಾಗೂ ಧನವೀರ್ (2) ನಾಪತ್ತೆಯಾದವರೆಂದು ಗುರುತಿಸಲಾಗಿದೆ.
ಮೇ 31 ರಂದು ಇಬ್ಬರು ಮಕ್ಕಳೊಂದಿಗೆ ತಾಯಿಯು ಮನೆಯಿಂದ ಹೊರಹೋಗಿದ್ದರು. ನಂತರ ಮನೆಗೆ ಹಿಂದಿರುಗಿಲ್ಲ. ಎಲ್ಲಿಯೂ ಅವರ ಸುಳಿವು ಲಭ್ಯವಾಗಿಲ್ಲ ಎಂದು ಪೊಲೀಸ್ ಇಲಾಖೆಯು ಜೂನ್ 04 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಚಹರೆ : ಪೂರ್ಣಿಮಾ ಅವರು 5.1 ಅಡಿ ಎತ್ತರ. ಸಾಧಾರಣ ಮೈ ಕಟ್ಟು, ಗೋದಿ ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಆಕಾಶ ನೀಲಿ ಬಣ್ಣದ ಚೂಡಿದಾರ, ಬಿಳಿ ಬಣ್ಣದ ವೇಲ್ ಧರಿಸಿರುತ್ತಾರೆ.
ಬಾಲಕ ಧೃವನ್ 3 ಅಡಿ ಎತ್ತರ, ತೆಳ್ಳನೆಯ ಮೈ ಕಟ್ಟು, ಗೋದಿ ಮೈ ಬಣ್ಣ, ಕೋಲು ಮುಖ ಹೊಂದಿದ್ದು, ಮನೆಯಿಂದ ಹೋಗುವಾಗ ಬಿಳಿ ಕಪ್ಪು ಬಣ್ಣದ ತುಂಬುತೋಳಿನ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
ಪುಟಾಣಿ ಧನವೀರ್ ನು 2 ಅಡಿ ಎತ್ತರ, ತೆಳ್ಳನೆಯ ಮೈ ಕಟ್ಟು, ಗೋದಿ ಮೈ ಬಣ್ಣ, ದುಂಡು ಮುಖ ಹೊಂದಿದ್ದು, ಮನೆಯಿಂದ ಹೋಗುವಾಗ ಬಿಳಿಬಣ್ಣದ ಶರ್ಟ್, ಜಿನ್ಸ್ ಪ್ಯಾಂಟ್ ಧರಿಸಿರುತ್ತಾನೆ.
ತಾಯಿ ಹಾಗೂ ಮಕ್ಕಳ ಕುರಿತು ಸುಳಿವು ಲಭ್ಯವಾದಲ್ಲಿ ಜಿಲ್ಲಾ ಪೊಲೀಸ್ ಕಚೇರಿ, ಶಿವಮೊಗ್ಗ ದೂರವಾಣಿ ಸಂಖ್ಯೆ :-08182- 261413, ಡಿ.ಎಸ್.ಪಿ ಶಿಕಾರಿಪುರ ಉಪ ವಿಭಾಗ:-08187-222443, 9480803323, ಪಿ..ಐ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ. 08187-222443, 9480803366 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Missing Mother with Two Children : Police Seek Public Help
Shikaripura, June 04: A mother along with her two children has gone missing in Kanivemane village, Shikaripura taluk, Shivamogga district. The missing persons have been identified as Poornima (27), wife of Mahesh, and her sons Dhruvan (8) and Dhanaveer (2). On May 31, Poornima left home with her children and did not return. No clues have been found about their whereabouts, according to a police press release issued on June 04.
Description:
Poornima: Height 5.1 ft, medium build, wheatish complexion, round face, speaks Kannada. At the time of leaving home, she was wearing a sky-blue churidar and a white veil.
Dhruvan (8): Height 3 ft, slim build, wheatish complexion, oval face. He was wearing a white-and-black full-sleeve shirt and blue jeans.
Dhanaveer (2): Height 2 ft, slim build, wheatish complexion, round face. He was wearing a white shirt and jeans.
Contact Information:
If anyone has information about the mother and children, they are requested to contact:
- District Police Office, Shivamogga: 08182-261413
- DSP Shikaripura Sub-Division: 08187-222443, 9480803323
- PI Shikaripura Rural Police Station: 08187-222443, 9480803366

