shimoga news | ಶಿವಮೊಗ್ಗ ನಗರದಲ್ಲಿ ಸಂಚಲನ ಮೂಡಿಸಿದ ಟ್ರಾಫಿಕ್ ಇನ್ಸ್’ಪೆಕ್ಟರ್ ದೇವರಾಜ್!

Traffic Inspector Devaraj Creates a Stir in Shivamogga City ಶಿವಮೊಗ್ಗ ನಗರದಲ್ಲಿ ಸಂಚಲನ ಮೂಡಿಸಿದ ಟ್ರಾಫಿಕ್ ಇನ್ಸ್’ಪೆಕ್ಟರ್ ದೇವರಾಜ್!

ವರದಿ : ಬಿ. ರೇಣುಕೇಶ್

ಶಿವಮೊಗ್ಗ (shivamogga), ಜೂನ್ 04: ಶಿವಮೊಗ್ಗ ನಗರದ ಜನ – ವಾಹನ ದಟ್ಟಣೆಯಿರುವ ರಸ್ತೆಗಳಲ್ಲಿ, ಕಳೆದ ಹಲವು ದಶಕಗಳಿಂದ ಅವ್ಯಾಹತವಾಗಿ ಫುಟ್’ಪಾತ್ ಗಳು ಒತ್ತುವರಿಯಾಗಿವೆ. ಪಾದಚಾರಿಗಳು ರಸ್ತೆ ಮೇಲೆ ಸಂಚರಿಸುವಂತಾಗಿದೆ. ಹೇಳುವವರು ಕೇಳುವವರು ಯಾರೂ ಇಲ್ಲದಂತ ಸ್ಥಿತಿ ನಿರ್ಮಾಣವಾಗಿದೆ!

ನೂರಾರು ಕೋಟಿ ರೂ. ವೆಚ್ಚದಲ್ಲಿ ‘ಸ್ಮಾರ್ಟ್ ಸಿಟಿ’ ಯೋಜನೆಯಡಿ, ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ನಿರ್ಮಿಸಿದ ಫುಟ್’ಪಾತ್ ಗಳು  ಕಾಟಾಚಾರಕ್ಕೆ ಎಂಬಂತಾಗಿವೆ. ಹಲವು ಪ್ರಭಾವಿಗಳೇ ಫುಟ್’ಪಾತ್, ರಸ್ತೆ ಜಾಗ ಒತ್ತುವರಿ ಮಾಡಿಕೊಂಡಿರುವ ಗುರುತರ ಆರೋಪಗಳಿವೆ. ಆದರೆ ಪ್ರಭಾವಿಗಳನ್ನು ಪ್ರಶ್ನಿಸುವ ಎದೆಗಾರಿಕೆ ಆಡಳಿತ ತೋರುತ್ತಿಲ್ಲವೆಂಬ ದೂರುಗಳಿವೆ.

ಇದೆಲ್ಲದರ ನಡುವೆ ಇತ್ತೀಚೆಗೆ ನಗರದಲ್ಲಿರುವ ಎರಡು ಟ್ರಾಫಿಕ್ ಪೊಲೀಸ್ ಠಾಣೆಗಳ ಅಧಿಕಾರಿ – ಸಿಬ್ಬಂದಿಗಳು ಸುಗಮ ಜನ – ವಾಹನ ಸಂಚಾರಕ್ಕಾಗಿ ಕೈಗೊಳ್ಳುತ್ತಿರುವ ಹಲವು ಜನೋಪಯೋಗಿ ಕ್ರಮಗಳು ಅಭಿನಂದನಾರ್ಹವಾಗಿದೆ. ಅದರಲ್ಲಿಯೂ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ರಸ್ತೆ – ಫುಟ್’ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯು ನಾಗರಿಕರ ಗಮನ ಸೆಳೆಯಲಾರಂಭಿಸಿದೆ.

ಟ್ರಾಫಿಕ್ ಇನ್ಸ್’ಪೆಕ್ಟರ್ ದೇವರಾಜ್ ಅವರ ಖಡಕ್ ಕಾರ್ಯನಿರ್ವಹಣೆ, ಕರ್ತವ್ಯ ಬದ್ದತೆಯ ಕಾರಣದಿಂದ ಸದರಿ ಕಾರ್ಯ ನಡೆಯುವಂತಾಗಿರುವುದು ಅಕ್ಷರಶಃ ಸತ್ಯವಾಗಿದೆ. ಇವರ ನೇರ – ನಿರ್ಭೀಡ ಕಾರ್ಯವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ. ಮತ್ತೊಂದೆಡೆ, ‘ಪ್ರಭಾವಿ’ಗಳ ವಲಯದಿಂದ ವ್ಯಾಪಕ ಒತ್ತಡ, ಆಕ್ಷೇಪಗಳು ಬರುತ್ತಿದ್ದರೂ ಅದಕ್ಕೆಲ್ಲ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

‘ಟ್ರಾಫಿಕ್ ಇನ್ಸ್’ಪೆಕ್ಟರ್ ದೇವರಾಜ್ ಅವರು ನಗರದ ಟ್ರಾಫಿಕ್ ವ್ಯವಸ್ಥೆಯಲ್ಲಿ ಹಲವು ಸುಧಾರಣೆ ತರಲಾರಂಭಿಸಿದ್ದಾರೆ. ಖಡಕ್ ನಿರ್ಧಾರಗಳನ್ನು ಕೈಗೊಂಡು ಕಾರ್ಯಗತಗೊಳಿಸುತ್ತಿದ್ದಾರೆ. ಟ್ರಾಫಿಕ್ ವ್ಯವಸ್ಥೆಗೆ ಸಂಬಂಧಿಸಿದಂತೆ ಜನಸಾಮಾನ್ಯರ ದೂರು – ದುಮ್ಮಾನಗಳಿಗೂ ಸ್ಪಂದಿಸುತ್ತಿದ್ದಾರೆ. ಅದರಲ್ಲಿಯೂ ನಗರದ ಆಯಕಟ್ಟಿನ ಸ್ಥಳಗಳಲ್ಲಿ ಫುಟ್’ಪಾತ್ ಮಾತ್ರವಲ್ಲದೆ ರಸ್ತೆ ಜಾಗವನ್ನೂ ಒತ್ತುವರಿ ಮಾಡಿಕೊಂಡವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಸ್ಥಳಿಯಾಡಳಿತ ಮಾಡಬೇಕಾದ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಅವರ ಜನಪರ ಕಾಳಜಿ ನಿಜಕ್ಕೂ ಅಭಿನಂದನೀಯ’ ಎಂದು ನಾಗರಿಕ ವಲಯದಲ್ಲಿ ಮೆಚ್ಚುಗೆಯ ಮಾತುಗಳು ವ್ಯಕ್ತವಾಗುತ್ತಿವೆ.

ಪಾರ್ಕಿಂಗ್ ವ್ಯವಸ್ಥೆಯತ್ತ ಹರಿಯುವುದೆ ಪಾಲಿಕೆ ಆಡಳಿತದ ಚಿತ್ತ?

*** ಶಿವಮೊಗ್ಗ ನಗರದ ಜನ – ವಾಹನ ಸಂಚಾರ ದಟ್ಟಣೆಯಿರುವ ಹಲವು ರಸ್ತೆಗಳ ಕನ್ಸರ್’ವೆನ್ಸಿಗಳನ್ನು ಕೋಟ್ಯಾಂತರ ರೂ. ವೆಚ್ಚದಲ್ಲಿ ಅಭಿವೃದ್ದಿಗೊಳಿಸಲಾಗಿದೆ. ಸದರಿ ಕನ್ಸರ್’ವೆನ್ಸಿಗಳನ್ನು ವಾಹನಗಳ ನಿಲುಗಡೆಗೆ ಬಳಕೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮವಾಗಿಲ್ಲ. ಅಭಿವೃದ್ದಿಗೊಂಡಿರುವ ಅದೆಷ್ಟೊ ಕನ್ಸರ್’ವೆನ್ಸಿಗಳು ಪಾಳು ಬಿದ್ದಿವೆ. ಬಯಲು ಮೂತ್ರಾಲಯಗಳಾಗಿ ಪರಿವರ್ತಿತವಾಗಿವೆ. ಈ ನಿಟ್ಟಿನಲ್ಲಿ ಪಾಲಿಕೆ ಆಡಳಿತ ಚಿತ್ತ ಹರಿಸಬೇಕಾಗಿದೆ. ಪೊಲೀಸ್ ಇಲಾಖೆಯೊಂದಿಗೆ ಸೇರಿಕೊಂಡು ಸದರಿ ಕನ್ಸರ್’ವೆನ್ಸಿಗಳಲ್ಲಿ ವಾಹನಗಳ ನಿಲುಗಡೆಗೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. ಈ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಎದುರಾಗುತ್ತಿರುವ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ ಎಂಬುವುದು ಪ್ರಜ್ಞಾವಂತ ನಾಗರಿಕರ ಆಗ್ರಹವಾಗಿದೆ.

Traffic Inspector Devaraj Creates a Stir in Shivamogga City | Shivamogga, June 04: For decades, footpaths in Shivamogga’s busy roads have been encroached, forcing pedestrians to walk on the streets. Despite repeated complaints, no one seemed to listen. Under the Smart City project, crores of rupees were spent to build footpaths along major roads. However, many influential people have encroached upon these spaces, and authorities have been accused of lacking the courage to question them.

Amidst this, officers and staff of the city’s two traffic police stations have recently taken commendable steps to ease pedestrian and vehicle movement. Their continuous drive to clear road and footpath encroachments has caught public attention.

Inspector Devaraj’s Role :  Traffic Inspector Devaraj’s strict and dedicated work has ensured the success of these operations. His fearless actions are making waves on social media and earning praise from citizens. Despite pressure and objections from influential groups, he remains undeterred.

Citizens note that Devaraj has introduced several improvements in the city’s traffic system, responding to public complaints and taking bold decisions. He has targeted not only footpath encroachers but also those occupying road space illegally. Many believe he is doing the work that local administration should have been doing, and his public-oriented concern is highly commendable.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *