yuva nidhi scheme news | ಪ್ರತಿ ತಿಂಗಳು ಯುವನಿಧಿ ಫಲಾನುಭವಿಗಳ ಸ್ವಯಂ ಘೋಷಣೆ ಕಡ್ಡಾಯ : ಇಲ್ಲದಿದ್ದರೆ ಹಣ ಸಿಗುವುದಿಲ್ಲ!

yuvanidhi scheme shimoga | ಯುವನಿಧಿ ಯೋಜನೆ

ಶಿವಮೊಗ್ಗ (shimoga) ಜುಲೈ 05 : ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಯ ಫಲಾನುಭವಿಗಳು, ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡುವುದು ಕಡ್ಡಾಯವಾಗಿದೆ ಎಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಯು 26-12-2023 ರಂದು ಆರಂಭವಾಗಿದೆ. ಜಿಲ್ಲೆಯ ಫಲಾನುಭವಿಗಳು ತ್ರೈಮಾಸಿಕಕ್ಕೆ ಬದಲಾಗಿ ಪ್ರತಿ ತಿಂಗಳು 25 ರೊಳಗೆ ಕಡ್ಡಾಯವಾಗಿ ನಿಗದಿತ ಆನ್ ಲೈನ್ ಪೋರ್ಟಲ್‌ನಲ್ಲಿ ಲಾಗಿನ್ ಆಗಿ, ಸ್ವಯಂ ಘೋಷಣೆ ನೀಡಬೇಕು. ನೀಡದಿದ್ದಲ್ಲಿ ಆ ತಿಂಗಳ ನೇರ ನಗದು ಖಾತೆಗೆ ಜಮೆಯಾಗುವುದಿಲ್ಲ.

2025 ರಲ್ಲಿ ಪದವಿ/ಡಿಪ್ಲೊಮಾ ಪದವಿ ಪಡೆದ ಪದವೀಧರರು, ಪದವಿ ಪಡೆದು 6 ತಿಂಗಳಾದರೂ ಉದ್ಯೋಗ ಪಡೆಯದ ನಿರುದ್ಯೋಗಿಗಳು, ಸೇವಾ ಸಿಂಧು ಪೋರ್ಟಲ್‌ಗೆ ಬೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಪದವೀಧರರಿಗೆ ರೂ.3,000 ಹಾಗೂ ಡಿಪ್ಲೋಮಾ ಪದವೀಧರರಿಗೆ ರೂ.1,500 ನೀಡಲಾಗುವುದು ಎಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shivamogga, July 5: Employment officials have announced that it is mandatory for beneficiaries of the ‘Yuva Nidhi’ scheme—the state government’s fifth guarantee scheme—to submit a self-declaration every month.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *