shimoga rain news | ಮಲೆನಾಡಿನಲ್ಲಿ ಮುಂಗಾರು ಮಳೆ ದುರ್ಬಲ : ಲಿಂಗನಮಕ್ಕಿ, ತುಂಗಾ, ಭದ್ರಾ ಡ್ಯಾಂಗಳ ಒಳಹರಿವಿನಲ್ಲಿ ಗಣನೀಯ ಕುಸಿತ!

shimoga tunga river

ಶಿವಮೊಗ್ಗ (shivamogga), ಜುಲೈ 13: ಕಳೆದೊಂದು ವಾರದ ಹಿಂದೆ ಧಾರಾಕಾರ ಮಳೆಗೆ ಸಾಕ್ಷಿಯಾಗಿದ್ದ ಮಲೆನಾಡು ಭಾಗದಲ್ಲಿ, ಕಳೆದ ಮೂರ್ನಾಲ್ಕು ದಿನಗಳಿಂದ ಮುಂಗಾರು ಮಳೆಯ ಪ್ರಮಾಣ ಸಂಪೂರ್ಣ ಇಳಿಮುಖವಾಗಿದೆ. ಇದರಿಂದ ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಗಣನೀಯ ಕುಸಿತ ಕಂಡುಬಂದಿದೆ.

13/07/2026 ರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆ ವಿವರ ಮುಂದಿನಂತಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿಯಲ್ಲಿ 7 ಮಿಲಿ ಮೀಟರ್ (ಮಿ.ಮೀ.), ಯಡೂರು 10 ಮಿ.ಮೀ., ಹುಲಿಕಲ್ 5 ಮಿ.ಮೀ., ಮಾಸ್ತಿಕಟ್ಟೆ 8 ಮಿ.ಮೀ., ಚಕ್ರಾ 10 ಮಿ.ಮೀ. ಹಾಗೂ ಸಾವೇಹಕ್ಲುವಿನಲ್ಲಿ 6 ಮಿ.ಮೀ ಮಳೆಯಾಗಿದೆ.

ಉಳಿದಂತೆ ಶಿವಮೊಗ್ಗದಲ್ಲಿ 0.00 ಮಿ.ಮೀ., ಭದ್ರಾವತಿ 0.30 ಮಿ.ಮೀ., ತೀರ್ಥಹಳ್ಳಿ 0.60 ಮಿ.ಮೀ., ಸಾಗರ 0.60 ಮಿ.ಮೀ., ಶಿಕಾರಿಪುರ 0.30 ಮಿ.ಮೀ., ಸೊರಬ 0.00 ಮಿ.ಮೀ. ಹಾಗೂ ಹೊಸನಗರದಲ್ಲಿ 0.70 ಮಿ.ಮೀ. ಮಳೆಯಾಗಿದೆ.

ಡ್ಯಾಂಗಳ ವಿವರ : ಸೋಮವಾರ ಬೆಳಿಗ್ಗೆ 8 ಗಂಟೆಯ ಮಾಹಿತಿಯಂತೆ ಲಿಂಗನಮಕ್ಕಿ ಡ್ಯಾಂನ ಒಳಹರಿವು 4999 ಕ್ಯೂಸೆಕ್ ಇದ್ದು, ಹೊರಹರಿವನ್ನು ಸ್ಥಗಿತಗೊಳಿಸಲಾಗಿದೆ. ಡ್ಯಾಂ ನೀರಿನ ಮಟ್ಟ 1762.90 (ಗರಿಷ್ಠ ಮಟ್ಟ : 1819) ಅಡಿಯಿದೆ.

ಭದ್ರಾ ಜಲಾಶಯದ ಒಳಹರಿವು 1713 ಕ್ಯೂಸೆಕ್ ಇದ್ದು, 220 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂ ನೀರಿನ ಮಟ್ಟ 147 ಅಡಿ 4 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ. ತುಂಗಾ ಜಲಾಶಯ ಈಗಾಗಲೇ ಗರಿಷ್ಠ ಮಟ್ಟ ತಲುಪಿದೆ. 5182 ಕ್ಯೂಸೆಕ್ ಒಳಹರಿವಿದ್ದು, 5506 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

Monsoon rains weak in Malnad: Significant drop in inflows from Linganamakki, Tunga, Bhadra dams! | Shivamogga, July 13: In Malnad, which witnessed heavy rains a week ago, the monsoon rains have completely decreased in the last three to four days. This has led to a significant drop in inflows in major reservoirs.

The details of rainfall received in various parts of the district in the last 24 hours ending at 8 am on 13/07/2026 are as follows. Areas under the Western Ghats such as Mani received 7 millimeters (mm), Yadoor 10 mm, Hulikal 5 mm, Mastikatte 8 mm, Chakra 10 mm and Savehaklu received 6 mm of rain.

Otherwise, Shivamogga received 0.00 mm, Bhadravati 0.30 mm, Thirthahalli 0.60 mm, Sagar 0.60 mm, Shikaripura 0.30 mm, Soraba 0.00 mm and Hosanagar received 0.70 mm.

Dam details: As of 8 am on Monday, the inflow of Linganamakki dam is 4999 cusecs and the outflow has been stopped. The dam water level is 1762.90 (maximum level: 1819) feet.

The inflow of Bhadra reservoir is 1713 cusecs and 220 cusecs of water is being released. The dam water level is 147 feet 4 inches (maximum level: 186) feet. Tunga reservoir has already reached its maximum level. There is an inflow of 5182 cusecs and 5506 cusecs of water is being released.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *