shimoga crime news | ಶಿವಮೊಗ್ಗ – ಖೋಟಾ ನೋಟು ಪ್ರಕರಣ : ಇಬ್ಬರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ

shimoga court building

ಶಿವಮೊಗ್ಗ (shivamogga), ಜುಲೈ 14: ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಶಿವಮೊಗ್ಗದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 14/07/2026 ರಂದು ತೀರ್ಪು ನೀಡಿದೆ.

ಶಿವಮೊಗ್ಗದ ಟಿಪ್ಪುನಗರದ ನಿವಾಸಿಗಳಾದ ಅಮ್ಜದ್ ಪಾಷಾ (39) ಹಾಗೂ ಮೌಸಿನ್ ಖಾನ್ (33) ಜೈಲು ಶಿಕ್ಷೆಗೆ ಗುರಿಯಾದವರೆಂದು ಗುರುತಿಸಲಾಗಿದೆ. ಅಪರಾಧಿಗಳಿಗೆ ಜೈಲು ಶಿಕ್ಷೆಯ ಜೊತೆಗೆ 52 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ನ್ಯಾಯಾಧೀಶರಾದ ಯಶವಂತ ಕುಮಾರ್ ರವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮಮತಾ ಬಿ ಎಸ್ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : ಪಶ್ಚಿಮ ಬಂಗಾಳದಿಂದ ತಂದಿದ್ದ ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಅಪರಾಧಿಗಳಿಬ್ಬರು ಬೈಕ್ ನಲ್ಲಿ ತೆರಳುತ್ತಿದ್ದಾಗ, 07/02/2018 ರಂದು ಶಿವಮೊಗ್ಗದ ಗೋಪಾಳದ ಖಾಸಗಿ ಬಸ್ ನಿಲ್ದಾಣದ ಬಳಿ ತುಂಗಾ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದರು. 500 ರೂ. ಮುಖ ಬೆಲೆಯ 262 ಖೋಟಾ ನೋಟುಗಳನ್ನು ವಶಕ್ಕೆ ಪಡೆದಿದ್ದರು.

ವಿಚಾರಣೆ ವೇಳೆ 70 ಸಾವಿರ ಅಸಲಿ ನೋಟು ನೀಡಿ, 2 ಲಕ್ಷ ರೂ. ಮೌಲ್ಯದ 500 ಮುಖಬೆಲೆಯ ನಕಲಿ ನೋಟುಗಳನ್ನು ಪಶ್ಚಿಮ ಬಂಗಾಳದಿಂದ ತಂದಿರುವ ವಿಷಯ ತಿಳಿಸಿದ್ದರು. ಇನ್ಸ್’ಪೆಕ್ಟರ್ ಆರ್ ವಿ ಗಂಗಾಧರಪ್ಪರವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.

Shivamogga, July 14: The 3rd Additional District and Sessions Court of Shivamogga has sentenced two people to 3 years rigorous imprisonment in connection with the counterfeit currency case on 14/07/2026.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *