ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಅಕ್ಟೋಬರ್ 07: ರಾಜ್ಯ ಜವಳಿ ನಿಗಮದ ಅಧ್ಯಕ್ಷರಾದ ಕೆ ಚೇತನ್ ಗೌಡ ಹಾಗೂ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸಿ ಜಿ ಮಧುಸೂದನ್ ಅವರು, ಕಿರಿಯ ವಯೋಮಾನದಲ್ಲಿಯೇ ಅತ್ಯಂತ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಈ ಇಬ್ಬರು ಯುವ ನಾಯಕರು ತಮ್ಮ ಅಧಿಕಾರಾವಧಿಯಲ್ಲಿ, ಶಿವಮೊಗ್ಗದ ನಾಗರಿಕರಿಗೆ ಅನುಕೂಲಕರವಾಗುವ ಶಾಶ್ವತ ಕ್ರಮಗಳ ಅನುಷ್ಠಾನದತ್ತ ಪ್ರಾಮಾಣಿಕ ಚಿತ್ತ ಹರಿಸಬೇಕಾಗಿದೆ. ತಮಗೆ ಸಿಕ್ಕಿರುವ ಸದಾವಕಾಶವನ್ನು ವ್ಯರ್ಥ ಮಾಡಿಕೊಳ್ಳದೆ ಸದ್ಭಳಕೆ ಮಾಡಿಕೊಂಡು, ತಮ್ಮದೆ ಆದ ಛಾಪು ಮೂಡಿಸಬೇಕಾಗಿದೆ.
ಶಿವಮೊಗ್ಗ ನಗರಕ್ಕೆ ಅಗತ್ಯವಿದೆ ಜವಳಿ ಪಾರ್ಕ್

*** ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿ ಕ್ರಮೇಣ ಜವಳಿ ಉದ್ಯಮ ಬೆಳವಣಿಗೆಯಾಗಲಾರಂಭಿಸಿದೆ. ಗಾರ್ಮೆಂಟ್ಸ್ ಗಳು ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ಜನರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಜವಳಿ ಉದ್ಯಮಕ್ಕೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ, ಶಿವಮೊಗ್ಗ ನಗರದಲ್ಲಿ ಜವಳಿ ಪಾರ್ಕ್ ನಿರ್ಮಾಣವಾಗಬೇಕಾಗಿದೆ.
ಪ್ರತ್ಯೇಕ ಜವಳಿ ಪಾರ್ಕ್ ನಿರ್ಮಾಣದಿಂದ, ಶಿವಮೊಗ್ಗದಲ್ಲಿ ಜವಳಿ ಸಂಬಂಧಿತ ಕೈಗಾರಿಕೆ ಹಾಗೂ ಉದ್ಯಮಗಳು ಆಗಮಿಸಲಿವೆ. ಇದರಿಂದ ಉದ್ಯೋಗಾವಕಾಶ ಸೃಷ್ಟಿಯಾಗುವುದರ ಜೊತೆಗೆ, ಆರ್ಥಿಕಾಭಿವೃದ್ದಿಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಜವಳಿ ನಿಗಮದ ಅಧ್ಯಕ್ಷ ಕೆ ಚೇತನ್ ಗೌಡ ಅವರು ಪ್ರಾಮಾಣಿಕ ಗಮನ ಹರಿಸಬೇಕಾಗಿದೆ.
ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಜೊತೆ ಖುದ್ದು ಸಮಾಲೋಚನೆ ನಡೆಸಬೇಕು. ಜವಳಿ ಪಾರ್ಕ್ ನಿರ್ಮಾಣಕ್ಕೆ ಅಗತ್ಯ ಅನುಮತಿ ಪಡೆದುಕೊಳ್ಳಬೇಕು. ಹಾಗೆಯೇ ಜವಳಿ ಉದ್ಯಮದ ಕೈಗಾರಿಕೋದ್ಯಮಿಗಳನ್ನು ಭೇಟಿಯಾಗಿ ಶಿವಮೊಗ್ಗದಲ್ಲಿ ತಮ್ಮ ಘಟಕ ತೆರೆಯಲು ಮನವೊಲಿಸುವ ಕಾರ್ಯ ನಡೆಸಬೇಕಾಗಿದೆ.
ನಿವೇಶನ ಹಂಚಿಕೆ, ಅಪಾರ್ಟ್’ಮೆಂಟ್ ನಿರ್ಮಾಣಕ್ಕೆ ಗಮನಹರಿಸಿ

*** ಶಿವಮೊಗ್ಗ ನಗರದಲ್ಲಿ ನಿವೇಶನಗಳ ದರ ಗಗನಕ್ಕೇರುತ್ತಿದೆ. ಬಡ – ಮಧ್ಯಮ ವರ್ಗದವರು ಸ್ವಂತ ನಿವೇಶನ ಹೊಂದುವುದು ಗಗನ ಕುಸುಮವಾಗಿ ಪರಿಣಮಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ, ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರವು ಬಡ – ಮಧ್ಯಮ ವರ್ಗದವರಿಗೆ ರಿಯಾಯ್ತಿ ದರದಲ್ಲಿ ನಿವೇಶನ ಹಾಗೂ ಮನೆ ಕಲ್ಪಿಸುವ ಜೂರುರು ಹೆಚ್ಚಿದೆ.
ಈ ಕಾರಣದಿಂದ ಶಿವಮೊಗ್ಗದ ಊರುಗಡೂರು ಬಳಿ ಪ್ರಾಧಿಕಾರ ಅಭಿವೃದ್ದಿ ಪಡಿಸುತ್ತಿರುವ ಬಡಾವಣೆ ನಿರ್ಮಾಣ ಕಾರ್ಯವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಅರ್ಹ ನಾಗರಿಕರಿಗೆ ನಿವೇಶನ ಹಂಚಿಕೆ ಮಾಡಲು ಪ್ರಾಧಿಕಾರದ ನೂತನ ಅಧ್ಯಕ್ಷ ಸಿ ಜಿ ಮಧುಸೂದನ್ ಕ್ರಮಕೈಗೊಳ್ಳಬೇಕಾಗಿದೆ.
ಈಗಾಗಲೇ ಬಡಾವಣೆ ಅಭಿವೃದ್ದಿ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಮತ್ತೊಂದೆಡೆ, ನಾಗರಿಕರಿಂದ ಅರ್ಜಿ ಪಡೆದು ವರ್ಷಗಳೇ ಉರುಳಿವೆ. ನಿವೇಶನ ಹಂಚಿಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈ ಬಗ್ಗೆ ಪ್ರಾಧಿಕಾರದ ಅಧ್ಯಕ್ಷರು ಅಧಿಕಾರಿಗಳ ಜೊತೆ ಸಭೆ ನಡೆಸಿ, ನಿವೇಶನ ಹಂಚಿಕೆ ಪ್ರಕ್ರಿಯೆ ಚಾಲನೆ ನೀಡಬೇಕಾಗಿದೆ.
ಹಾಗೆಯೇ ನಗರದ ವಿವಿಧೆಡೆ ಪ್ರಾಧಿಕಾರದ ಜಾಗದಲ್ಲಿ ಅಪಾರ್ಟ್’ಮೆಂಟ್ ಗಳ ನಿರ್ಮಾಣದ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಕೂಡ ಇಲ್ಲಿಯವರೆಗೂ ಕಾರ್ಯಗತಗೊಂಡಿಲ್ಲ. ಬಡ – ಮಧ್ಯಮ ವರ್ಗದವರಿಗೆ ಕೈಗೆಟಕುವ ದರದಲ್ಲಿ ಅಪಾರ್ಟ್’ಮೆಂಟ್ ಗಳನ್ನು ನಿರ್ಮಿಸಿ, ಮನೆ ಹಂಚಿಕೆ ಮಾಡುವ ಕಾರ್ಯವನ್ನು ಅಧ್ಯಕ್ಷ ಸಿ ಜಿ ಮಧುಸೂದನ್ ಮಾಡಬೇಕಾಗಿದೆ.
ಹಾಗೆಯೇ ಪಾರ್ಕ್, ಕೆರೆಗಳ ಅಭಿವೃದ್ದಿ, ನಗರ ಸೌಂದರ್ಯೀಕರಣ, ಸುವ್ಯವಸ್ಥಿತ ಲೇಔಟ್ ಗಳ ನಿರ್ಮಾಣ ಸೇರಿದಂತೆ ಪ್ರಾಧಿಕಾರ ಕೈಗೆತ್ತಿಕೊಂಡಿರುವ ಹಲವು ಅಭಿವೃದ್ದಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ಅಧ್ಯಕ್ಷ ಸಿ ಜಿ ಮಧುಸೂದನ್ ಕ್ರಮಕೈಗೊಳ್ಳಬೇಕಾಗಿದೆ.
Shivamogga, October 07: K. Chetan Gowda – Chairman of the State Textile Corporation, and C.G. Madhusudan – Chairman of the Shivamogga-Bhadravati Urban Development Authority – have assumed high-ranking positions at a young age – thereby drawing public attention.
During their tenure, these two young leaders must sincerely focus on implementing measures that provide lasting benefits to the citizens of Shivamogga. They should make the best use of this opportunity rather than squandering it, and strive to leave a distinctive mark of their own.

