ಮಳೆಗಾಲ ಮುನ್ನೆಚ್ಚರಿಕೆ ಕ್ರಮ : ಮುಂದುವರಿದ ಜಿಲ್ಲಾಧಿಕಾರಿಗಳ ಶಿವಮೊಗ್ಗ ಸಿಟಿ ರೌಂಡ್ಸ್..!

ಶಿವಮೊಗ್ಗ ನಗರದಲ್ಲಿ ಮಳೆಗಾಲದ ವೇಳೆ ಜನವಸತಿ ಪ್ರದೇಶಗಳಲ್ಲಿ ಉಂಟಾಗುವ ಜಲಾವೃತ ಸಮಸ್ಯೆಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ನಗರದ ವಿವಿಧೆಡೆ ಭೇಟಿಯಿತ್ತು ನಡೆಸುತ್ತಿರುವ ಪರಿಶೀಲನಾ ಕಾರ್ಯ ಶುಕ್ರವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಎಲ್.ಬಿ.ಎಸ್. ನಗರ, ಶರಾವತಿ ನಗರ, ಹರಿಗೆ, ಗುರುಪುರ, ವಿದ್ಯಾನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಹಾದು ಹೋಗಿರುವ ತುಂಗಾ ನಾಲೆ ಹಾಗೂ ಪ್ರಮುಖ ರಾಜ ಕಾಲುವೆಗಳ ಸ್ಥಿತಿಗತಿಯ ವೀಕ್ಷಣೆ ಮಾಡಿದರು. ಶರಾವತಿ ನಗರದ ಬಳಿ ಕೊಳಚೆ ನೀರು ತುಂಗಾ ನಾಲೆಗೆ ಸೇರ್ಪಡೆಯಾಗದಂತೆ ಹಾಗೂ ಎಲ್.ಬಿ.ಎಸ್. ನಗರದ ಚಾನಲ್ ಬಳಿ ಬಿದ್ದಿರುವ ಕಸದ ರಾಶಿ ತೆರವುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಂಗಾರು ಮಳೆ ಆರಂಭವಾಗುವುದರೊಳಗೆ ರಾಜಕಾಲುವೆ, ಚರಂಡಿಗಳಲ್ಲಿ ಸರಾಗವಾಗಿ ಮಳೆ ನೀರು ಹರಿದು ಹೋಗುವ ವ್ಯವಸ್ಥೆ ಮಾಡಬೇಕು. ತಗ್ಗು ಪ್ರದೇಶಗಳಲ್ಲಿ ಸಮಸ್ಯೆ ತಲೆದೋರದಂತೆ ಅಗತ್ಯವಿರುವ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

ಶಿವಮೊಗ್ಗ, ಮೇ 26:  ಮುಂಬರುವ ಮಳೆಗಾಲದ ವೇಳೆ ಜಲಾವೃತ ಸಮಸ್ಯೆ ಎದುರಾಗದಂತೆ ಸೂಕ್ತ ಪರಿಹಾರ ಕ್ರಮಕೈಗೊಳ್ಳುವ ಉದ್ದೇಶದಿಂದ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಶಿವಮೊಗ್ಗ ನಗರದಲ್ಲಿ ನಡೆಸುತ್ತಿರುವ ಪರಿಶೀಲನಾ ಕಾರ್ಯ ಮುಂದುವರಿದಿದೆ.

ಶುಕ್ರವಾರ ಕೂಡ ನಗರದ ವಿವಿಧ ಪ್ರದೇಶಗಳಿಗೆ ಡಿಸಿ ಭೇಟಿ ನೀಡಿದ್ದರು. ಮಳೆಯಿಂದ ಸಮಸ್ಯೆ ಎದುರಿಸಬಹುದಾದ ಪ್ರದೇಶಗಳನ್ನು, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಿದರು.

ಪಾಲಿಕೆ ವ್ಯಾಪ್ತಿಯ ಎಲ್‍ಬಿಎಸ್ ನಗರದ ಚಾನಲ್‍ಗೆ ಭೇಟಿ ನೀಡಿ, ಚಾನಲ್‍ನಲ್ಲಿರುವ ಗಿಡಗಂಟಿ, ಕಸ ತೆಗೆಸಬೇಕು. ಇಲ್ಲವಾದಲ್ಲಿ ಮಳೆ ನೀರು ಸರಾಗವಾಗಿ ಹರಿಯದೇ ನೀರು ಹೊರಗೆ ನುಗ್ಗುವ ಸಂಭವವಿದ್ದು, ನೀರು ಸರಾಗವಾಗಿ ಹರಿಯಲು ಅನುವಾಗುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿಸಿದರು.

ಶರಾವತಿ ನಗರ ಚಾನಲ್ ಬಳಿ ಭೇಟಿ ನೀಡಿ, ಚರಂಡಿ ಕೊಳಚೆ ನೀರನ್ನು ಚಾನಲ್‍ಗೆ ಬಿಡದಂತೆ ಕ್ರಮ ವಹಿಸಬೇಕೆಂದು ತಿಳಿಸಿದ ಅವರು ನಗರದ ಹೊರ ವಲಯದ ಗೋಪಿಶೆಟ್ಟಿಕೊಪ್ಪದ ಚಾನೆಲ್ ತಿರುವಿನಲ್ಲಿ ನೀರು ರಭಸವಾಗಿ ಹರಿಯುವುದರಿಂದ ಕಳೆದ ಬಾರಿ ಚಾನಲ್ ಏರಿ ಒಡೆದಿತ್ತು. ಈ ಬಾರಿ ಹಾಗಾಗದಂತೆ ರಾಮೇನಕೊಪ್ಪ ಬಳಿಯ ಕಾನೆಹಳ್ಳಕ್ಕೆ ನೀರು ಹರಿಸುವ ಮೂಲಕ ಆ ರಭಸವನ್ನು ಕಡಿಮೆ ಮಾಡಬಹುದೆಂದು ಸಲಹೆ ನೀಡಿದರು.

ದಿ.25 ರಂದು ನಗರದ ಹರಿಗೆ ಚಾನಲ್, ಗುರುಪುರ ಮತ್ತು ವಿದ್ಯಾನಗರದ ರಾಜಾ ಕಾ ಲುವೆ ಗಳ ಬಳಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕೈಗೊಳ್ಳಬೇಕಾದ ಸೂಕ್ತ ಕ್ರಮಗಳ ಕುರಿತು ಸೂಚನೆಗಳನ್ನು ನೀಡಿದ್ದರು. ವಿವಿಧ ನಾಲೆಗಳು, ರಾಜ ಕಾಲುವೆ, ಚಾನಲ್, ಚರಂಡಿಗಳನ್ನು ಪರಿಶೀಲಿಸಿ, ಮಳೆ ಆರಂಭವಾಗುವ ಮುನ್ನ ಕಸ, ಮಣ್ಣು, ಹೂಳು ತೆಗೆಸುವಂತೆ ಹಾಗೂ ಇತರೆ ಪರ್ಯಾಯ ವ್ಯವಸ್ಥೆ ಮಾಡಿ ತೊಂದರೆಯಾಗದಂತೆ ಸೂಕ್ತ ರೀತಿಯಲ್ಲಿ ಕ್ರಮ ವಹಿಸುವಂತೆ ಸಣ್ಣ ನೀರಾವರಿ ಇಲಾಖೆ, ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *