‘0% ಅಭಿವೃದ್ಧಿ, 40% ಕಮಿಷನ್… ಉತ್ತರ ಕೊಡಿ ಸಿದ್ದರಾಮಯ್ಯ…’ ಎಂದ ಬಿಜೆಪಿ ಶಾಸಕ ಡಿ.ಎಸ್.ಅರುಣ್!
ಶಿವಮೊಗ್ಗ, ಫೆ. 9: ‘ಕಾಂಗ್ರೆಸ್ ಸರ್ಕಾರದಲ್ಲಿ 40% ಕಮಿಷನ್ ದಂಧೆ ನಡೆಯುತ್ತಿದೆ ಎಂಬ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರ ಆರೋಪದ ಬಗ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ಅವರು ಉತ್ತರ ನೀಡಬೇಕು’ ಎಂದು ವಿಧಾನ ಪರಿಷತ್ ಬಿಜೆಪಿ ಶಾಸಕ (council bjp mla) ಡಿ.ಎಸ್.ಅರುಣ್ (d s arun) ಆಗ್ರಹಿಸಿದ್ದಾರೆ.
ಈ ಕುರಿತಂತೆ ಅವರು ಶುಕ್ರವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಎಗ್ಗಿಲ್ಲದೆ ಸಾಗುತ್ತಿರುವ ಕಮಿಷನ್ ದಂಧೆ ಕುರಿತಂತೆ, ಗುತ್ತಿಗೆದಾರರ ಸಂಘದ ಅಧ್ಯಕ್ಷರ ಆರೋಪ ಪುಷ್ಠಿ ನೀಡಿದಂತಾಗಿದೆ. 40% ಕಮಿಷನ್ ನೀಡದಿದ್ದರೆ ಯಾವ ಕೆಲಸವೂ ಆಗುವುದಿಲ್ಲ ಎಂದು ಹೇಳಿರುವುದು, ಸರ್ಕಾರದ ಹಂತದಲ್ಲಿನ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.
ಅಸಮರ್ಥ ಸೇವೆ ಹಾಗೂ ಆಡಳಿತ ಸುಧಾರಣೆಗಾಗಿ ಅಧಿಕಾರಿಗಳ ವರ್ಗಾವಣೆಗಳಾಗುತ್ತವೆ. ಆದರೆ ಕಾಂಗ್ರೆಸ್ ಸರ್ಕಾರದ ಅಲ್ಪಾವಧಿಯಲ್ಲಿ ಗರಿಷ್ಠ ವರ್ಗಾವಣೆಗಳು ನಡೆದಿವೆ. ಇದಕ್ಕೆ ಕಮೀಷನ್ ದಂಧೆ ಮುಖ್ಯ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಸಣ್ಣಪುಟ್ಟ ಸಮಸ್ಯೆಗಳ ಪರಿಹಾರಕ್ಕೆ, ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿನ ವಿಧಾನಸೌಧಕ್ಕೆ ಜನಸಾಮಾನ್ಯರು ಬರುವಂತಾಗಿದೆ. ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಕಮಿಷನ್ ವಸೂಲಿ ಮಾಡುತ್ತಿರುವುದರಿಂದ ಸರ್ಕಾರಿ ಕಚೇರಿಗಳಲ್ಲಿ ಜನರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.
ಈ ಕಾರಣದಿಂದ ರಾಜ್ಯದ ಮೂಲೆಮೂಲೆಯಿಂದ ಜನರು ಬಾಕಿಯಿರುವ ಕೆಲಸಕಾರ್ಯ ಮಾಡಿಸಿಕೊಳ್ಳಲು ಮುಖ್ಯಮಂತ್ರಿಗಳ ಜನಸ್ಪಂದನ ಸಭೆಗೆ ಆಗಮಿಸುವಂತಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ದಿ ಶೂನ್ಯವಾಗಿದ್ದು, ಕಮೀಷನ್ ದಂಧೆ ಜೋರಾಗಿದೆ ಎಂದು ಡಿ.ಎಸ್.ಅರುಣ್ ಅವರು ದೂರಿದ್ಧಾರೆ.
‘
More Stories
shimoga news | ಶಿವಮೊಗ್ಗ : ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲು ಜಲ ಮಂಡಳಿ ಎಂಜಿನಿಯರ್’ಗೆ ಮನವಿ
Shivamogga: Request to the Water Board Engineer to supply drinking water to the areas around Press Colony
ಶಿವಮೊಗ್ಗ : ಪ್ರೆಸ್ ಕಾಲೋನಿ ಸುತ್ತಮುತ್ತಲಿನ ಬಡಾವಣೆಗಳಿಗೆ ಕುಡಿಯುವ ನೀರು ಪೂರೈಸಲು ಜಲ ಮಂಡಳಿ ಎಂಜಿನಿಯರ್’ಗೆ ಮನವಿ
shimoga outer ring road | ನೆನೆಗುದಿಗೆ ಬಿದ್ದ ಶಿವಮೊಗ್ಗ ಹೊರ ವರ್ತುಲ ರಸ್ತೆ 2 ನೇ ಹಂತಕ್ಕೆ ಸಿಗಲಿದೆಯೇ ವೇಗ?
MP BY Raghavendra appeals for implementation of national highway projects in Shivamogga constituency
Will the delayed Shivamogga Outer Ring Road get speed in Phase 2?
ನೆನೆಗುದಿಗೆ ಬಿದ್ದ ಶಿವಮೊಗ್ಗ ಹೊರವರ್ತುಲ ರಸ್ತೆ 2 ನೇ ಹಂತಕ್ಕೆ ಸಿಗಲಿದೆಯೇ ವೇಗ?
shimoga news | ಮೃತ ಮಹಿಳೆಯ ಬಳಿಯಿದ್ದ ನಗದು, ಚಿನ್ನಾಭರಣ ಮಗಳಿಗೆ ಹಿಂದಿರುಗಿಸಿ ಕರ್ತವ್ಯ ನಿಷ್ಠೆ ಮೆರೆದ ಪೊಲೀಸ್ ಪೇದೆ!
Police constable shows loyalty to duty by returning cash and jewelry belonging to a deceased woman to her daughter!
ಮೃತ ಮಹಿಳೆಯ ಬಳಿಯಿದ್ದ ನಗದು – ಚಿನ್ನಾಭರಣ ಮಗಳಿಗೆ ಹಿಂದಿರುಗಿಸಿ ಕರ್ತವ್ಯ ನಿಷ್ಠೆ ಮೆರೆದ ಪೊಲೀಸ್ ಪೇದೆ!
news update | ವಿಭಾಗ ಪತ್ರ ಗೊಂದಲ ಸರಿಪಡಿಸಲು ಕಂದಾಯ ಸಚಿವರಿಗೆ ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಆಗ್ರಹ!
Legislative Council MLA DS Arun urges Revenue Minister to rectify division letter confusion!
ವಿಭಾಗ ಪತ್ರ ಗೊಂದಲ ಸರಿಪಡಿಸಲು ಕಂದಾಯ ಸಚಿವರಿಗೆ ವಿಧಾನ ಪರಿಷತ್ ಶಾಸಕ ಡಿ ಎಸ್ ಅರುಣ್ ಆಗ್ರಹ!
shimoga news | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ – ವಾರ್ಡ್ ಮೀಸಲಾತಿ ನಿಗದಿ ವಿಳಂಬ : ಸರ್ಕಾರಕ್ಕೆ ಶಾಸಕ ಚನ್ನಬಸಪ್ಪ ಆಗ್ರಹವೇನು?
Shimoga Corporation area revision, ward reservation determination: Urban Development Minister’s important answer to MLA Channabasappa’s question!
ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ, ವಾರ್ಡ್ ಮೀಸಲಾತಿ ನಿಗದಿ : ಶಾಸಕ ಚನ್ನಬಸಪ್ಪ ಪ್ರಶ್ನೆಗೆ ನಗರಾಭಿವೃದ್ದಿ ಸಚಿವರ ಮಹತ್ವದ ಉತ್ತರ!
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 18 ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for December 18 in shimoga APMC wholesale market
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 18 ರ ತರಕಾರಿ ಬೆಲೆಗಳ ವಿವರ
