ಶಿವಮೊಗ್ಗದಲ್ಲಿ ಭಾರೀ ಮಳೆಗೆ 4 ಮನೆಗಳ ಗೋಡೆ ಕುಸಿತ!

4 walls of houses collapsed due to heavy rain in Shimoga! ಶಿವಮೊಗ್ಗದಲ್ಲಿ ಭಾರೀ ಮಳೆಗೆ 4 ಮನೆಗಳ ಗೋಡೆ ಕುಸಿತ!

ಶಿವಮೊಗ್ಗ (shivamogga), ಜು. 18: ಶಿವಮೊಗ್ಗ ನಗರದಲ್ಲಿ ಮುಂಗಾರು ಮಳೆ (monsoon rain) ಮುಂದುವರಿದಿದೆ. ತಡರಾತ್ರಿಯಿಂದ ಧಾರಾಕಾರ ವರ್ಷಧಾರೆಯಾಗುತ್ತಿದೆ (heavy rainfall). ಈ ನಡುವೆ ನಗರದ ಹೊರವಲಯ ಪುರಲೆಯಲ್ಲಿ (purle) ನಾಲ್ಕು ಮನೆಗಳ ಗೋಡೆಗಳು ಗುರುವಾರ ಮುಂಜಾನೆ ಕುಸಿದು ಬಿದ್ದ (wall collapse of houses) ಘಟನೆ ನಡೆದಿದೆ.

‘ಅವಿನಾಶ್, ಚೌಡೇಶ, ರೂಪ ಚಂದ್ರಪ್ಪ, ರಘು ಎಂಬುವರಿಗೆ ಮನೆಗಳು (houses) ಸೇರಿದ್ದಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಮನೆಗಳಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಪೀಠೋಪಕರಣ, ಎಲೆಕ್ಟ್ರಾನಿಕ್ ಉಪಕರಣಗಳು (Furniture, electronic appliances) ಸೇರಿದಂತೆ ಮನೆಗಳಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ (Items damaged)’ ಎಂದು ಸ್ಥಳೀಯ ಮುಖಂಡರೂ ಆದ ವಕೀಲ ಶೋಭರಾಜ್ ಅವರು ಮಾಹಿತಿ ನೀಡಿದ್ದಾರೆ.

ಮನೆಗಳ ಗೋಡೆ ಕುಸಿತಕ್ಕೊಳಗಾದವರು ಕಡುಬಡವರಾಗಿದ್ದಾರೆ (poor). ಮನೆಗಳ ಗೋಡೆ ಕುಸಿತದಿಂದ ತೊಂದರೆಗೆ ಸಿಲುಕುವಂತಾಗಿದೆ. ತಕ್ಷಣವೇ ಜಿಲ್ಲಾಡಳಿತ (district administration) ಸಂತ್ರಸ್ತರಿಗೆ (victims) ನೆರವು ಕಲ್ಪಿಸಬೇಕು. ಪರಿಹಾರ ಬಿಡುಡೆ ಮಾಡುವುದರ ಜೊತೆಗೆ, ಸೂಕ್ತ ಆಶ್ರಯದ ವ್ಯವಸ್ಥೆ ಮಾಡಬೇಕು ಎಂದು ಶೋಭರಾಜ್ ಆಗ್ರಹಿಸಿದ್ದಾರೆ.

ಭೇಟಿ : ಮನೆಗಳ ಗೋಡೆ ಕುಸಿತ ಸ್ಥಳಕ್ಕೆ ಮುಖಂಡ ಕೆ.ಇ.ಕಾಂತೇಶ್ (k e kantesh) ಅವರು ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮುಖಂಡ ಶೋಭರಾಜ್, ತಿಮ್ಮೇಗೌಡ್ರು, ರಂಗಸ್ವಾಮಿ, ನವೀನ್ ಸೇರಿದಂತೆ ಮೊದಲಾದವರಿದ್ದರು.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

One Comment on “ಶಿವಮೊಗ್ಗದಲ್ಲಿ ಭಾರೀ ಮಳೆಗೆ 4 ಮನೆಗಳ ಗೋಡೆ ಕುಸಿತ!”

Comments are closed.