ಶಿವಮೊಗ್ಗ, ಜು. 24: ಜಿಲ್ಲೆಯಲ್ಲಿ ಲೇವಾದೇವಿ ವ್ಯವಹಾರ ನಡೆಸುತ್ತಿರುವ ಲೇವಾದೇವಿಗಾರರು, ಗಿರವಿದಾರರು ಮತ್ತು ಹಣಕಾಸು ಸಂಸ್ಥೆಗಳು (moneylenders, pawnbrokers, finance institutions) ವ್ಯವಹಾರ ಸ್ಥಳದ ಕಚೇರಿಯಲ್ಲಿ ಪರವಾನಿಗೆಯನ್ನು (license) ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂದು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು (Deputy Registrar of District Co-operative Societies) ಸೂಚಿಸಿದ್ದಾರೆ.
ಕರ್ನಾಟಕ ಲೇವಾದೇವಿ ಅಧಿನಿಯಮ 1961 (karnataka moneylenders act) ರ ಪ್ರಕರಣ 28 ರಡಿ ಸರ್ಕಾರವು ನಿಗದಿಪಡಿಸಿರುವ ಬಡ್ಡಿ ದರ (Interest rate) ಭದ್ರತಾ ಸಾಲಗಳಿಗೆ (Security loan) ವಾರ್ಷಿಕ ಶೇ.14 ರಷ್ಟು, ಭದ್ರತಾ ರಹಿತ ಸಾಲಗಳಿಗೆ (Unsecured loan) ವಾರ್ಷಿಕ ಶೇ. 16 ರಷ್ಟು ಬಡ್ಡಿಯನ್ನು (interest) ಮಾತ್ರ ವಿಧಿಸಬೇಕು ಎಂದು ತಿಳಿಸಿದ್ದಾರೆ.
ಸರ್ಕಾರವು (govt) ನಿಗದಿಪಡಿಸಿದ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿ ದರ ಪಡೆದ ಬಗ್ಗೆ ಪರಿವೀಕ್ಷಣೆಯಲ್ಲಿ (inspection) ಕಂಡುಬಂದಲ್ಲಿ ಅಥವಾ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಸದರಿಯವರ ಮೇಲೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

