ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಮತ್ತೆ ಮಳೆ ಚುರುಕು : ಲಿಂಗನಮಕ್ಕಿ ಡ್ಯಾಂಗೆ ಹೆಚ್ಚಿದ ಒಳಹರಿವು
ಶಿವಮೊಗ್ಗ (shivamogga), ಜು. 24: ಜಿಲ್ಲೆಯ ಪಶ್ಚಿಮಘಟ್ಟ (western ghat) ವ್ಯಾಪ್ತಿಯ ಪ್ರದೇಶಗಳಲ್ಲಿ ತಗ್ಗಿದ್ದ ಮಳೆಯ (rain) ಅಬ್ಬರ, ಮತ್ತೆ ಚುರುಕುಗೊಂಡಿದೆ. ಇದರಿಂದ ಲಿಂಗನಮಕ್ಕಿ ಡ್ಯಾಂ (linaganamakki dam) ಒಳಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಜೊತೆಗೆ ಡ್ಯಾಂ ನೀರಿನ ಮಟ್ಟ 1800 ಅಡಿಗಳ ಗಡಿ ದಾಟಿದೆ.
ಬುಧವಾರ ಬೆಳಿಗ್ಗೆಯ ಮಾಹಿತಿಯಂತೆ, ಲಿಂಗಮನಕ್ಕಿ ಜಲಾಶಯದ ಒಳಹರಿವು (inflow) 58,619 ಕ್ಯೂಸೆಕ್ ಇದೆ. ಮಂಗಳವಾರ ಈ ಪ್ರಮಾಣ 41,269 ಕ್ಯೂಸೆಕ್ (cusec) ಇತ್ತು. ಉಳಿದಂತೆ1892 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂ ನೀರಿನ ಮಟ್ಟ (dam water level) 1801 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 1775. 2 ಅಡಿಯಿತ್ತು.
ಪ್ರಸ್ತುತ ವರ್ಷ ಜಲಾನಯನ ಪ್ರದೇಶ (catchment area) ವ್ಯಾಪ್ತಿಯಲ್ಲಿ ಉತ್ತಮ ಮಳೆಯಾದ ಕಾರಣದಿಂದ, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ವರ್ಷ ಡ್ಯಾಂನಲ್ಲಿ ಸುಮಾರು 26 ಅಡಿಯಷ್ಟು ಹೆಚ್ಚು ನೀರು ಸಂಗ್ರಹವಾಗಿದೆ.
ತುಂಗಾ ಡ್ಯಾಂ (tunga dam) ನೀರಿನ ಒಳಹರಿವಿನಲ್ಲಿಯೂ ಯಥಾಸ್ಥಿತಿ ಕಂಡುಬಂದಿದೆ. 34,542 ಕ್ಯೂಸೆಕ್ ಒಳಹರಿವಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳಹರಿವಿನಷ್ಟೆ ನೀರನ್ನು ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ (hospet tungabhadra dam) ಬಿಡಲಾಗುತ್ತಿದೆ (outflow).
ಆದರೆ ಭದ್ರಾ ಡ್ಯಾಂ (bhadra dam) ಒಳಹರಿವಿನಲ್ಲಿ ಇಳಿಕೆಯಾಗಿದೆ. ಬುಧವಾರ 15,383 ಕ್ಯೂಸೆಕ್ ಇದೆ. ಮಂಗಳವಾರ ಈ ಪ್ರಮಾಣ 20,045 ಕ್ಯೂಸೆಕ್ ಇತ್ತು. ಡ್ಯಾಂನ ನೀರಿನ ಮಟ್ಟ 169 ಅಡಿ 5 ಇಂಚು (ಗರಿಷ್ಠ ಮಟ್ಟ : 186) ಅಡಿಯಿದೆ.
ಮಳೆ ವಿವರ : ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ಬಿದ್ದ ಮಳೆಯ ವಿವರ ಈ ಮುಂದಿನಂತಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿ (mani) 87 ಮಿಲಿ ಮೀಟರ್, ಯಡೂರು (yadur) 89 ಮಿ.ಮೀ., ಹುಲಿಕಲ್ (hulikall) 113 ಮಿ.ಮೀ., ಮಾಸ್ತಿಕಟ್ಟೆ (masthikatte) 130 ಮಿ.ಮೀ., ಚಕ್ರಾ (chakra) 130 ಮಿ.ಮೀ., ಸಾವೇಹಕ್ಲು (savehakklu) 129 ಮಿ.ಮೀ. ಮಳೆಯಾಗಿದೆ.
ಶಿವಮೊಗ್ಗ (shimoga) 18. 90 ಮಿ.ಮೀ., ಭದ್ರಾವತಿ (bhadravati) 10. 20 ಮಿ.ಮೀ., ತೀರ್ಥಹಳ್ಳಿ (thirthahalli) 60. 90 ಮಿ.ಮೀ., ಸಾಗರ (sagar) 58. 90 ಮಿ.ಮೀ., ಶಿಕಾರಿಪುರ (shikaripur) 10. 40 ಮಿ.ಮೀ., ಸೊರಬ (sorab) 23. 90 ಮಿ.ಮೀ. ಹಾಗೂ ಹೊಸನಗರದಲ್ಲಿ (hosanagar) 68. 80 ಮಿ.ಮೀ. ಮಳೆಯಾಗಿದೆ (rain).
