
ವಾಹನಗಳಲ್ಲಿ ಎಲ್ಇಡಿ ಲೈಟ್ ಅಳವಡಿಕೆ ತೆರವು ಕಾರ್ಯಾಚರಣೆ : ಸಾವಿರಾರು ಕೇಸ್ ದಾಖಲು!
ಶಿವಮೊಗ್ಗ (shivamogga), ಆ. 10: ವಾಹನಗಳಲ್ಲಿ ನಿಯಮಕ್ಕೆ ವಿರುದ್ದವಾಗಿ ಎಲ್ಇಡಿ ಲೈಟ್ (led lights on vehicles) ಅಳವಡಿಕೆ ವಿರುದ್ದ, ಶಿವಮೊಗ್ಗ ಜಿಲ್ಲಾ ಪೊಲೀಸರು (shimoga district police) ವಿಶೇಷ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ. ಈಗಾಗಲೇ ಸಾವಿರಾರು ಕೇಸ್ ಗಳನ್ನು ದಾಖಲಿಸಿದ್ದಾರೆ.
ಕೆಲ ವಾಹನ ಚಾಲಕರು ಕಾರು, ಬೈಕ್ ಹಾಗೂ ಇತರ ವಾಹನಗಳಿಗೆ (vechiles) ಕಣ್ಣುಕುಕ್ಕುವಂಥ ಎಲ್ಇಡಿ ಲೈಟ್ ಅಳವಡಿಸಿಕೊಳ್ಳುತ್ತಿದ್ದರು. ಲೈಟ್ ಗಳ (lights) ಬೆಳಕಿನ ತೀವ್ರತೆಯಿಂದ ಎದುರುಬದಿಯಲ್ಲಿ ವಾಹನ ಚಲಾಯಿಸುವವರಿಗೆ ವಿಪರೀತ ತೊಂದರೆಯಾಗುತ್ತಿತ್ತು. ಕೆಲವೊಮ್ಮೆ ಅಪಘಾತಗಳಿಗೂ (accidents) ಕಾರಣವಾಗುತ್ತಿತ್ತು.
ಈ ಸಂಬಂಧ 1-7-2024 ರಿಂದ ಇಲ್ಲಿಯವರೆಗೆ, ಶಿವಮೊಗ್ಗ ಜಿಲ್ಲೆಯಾದ್ಯಂತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದರು. ‘ಕೇಂದ್ರ ಮೋಟಾರು ವಾಹನಗಳ ನಿಯಮಗಳ (indian motor vehicle act) ಅಡಿಯಲ್ಲಿ ಅನುಮತಿಸಲಾದ ಲೈಟ್ಗಳನ್ನ ಹೊರತುಪಡಿಸಿ, ಇತರೆ ಪ್ರಖರ ಬೆಳಕು ಹೊರಸೂಸುವ ಲೈಟ್ ಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಜೊತೆಗೆ ಐಎಂಎ ಕಾಯ್ದೆಯಡಿ ಕೇಸ್ ದಾಖಲಿಸಲಾಗುತ್ತಿದೆ’ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಶಿವಮೊಗ್ಗ (shimoga) ಪೊಲೀಸ್ ಉಪ ವಿಭಾಗ – ಎ ವ್ಯಾಪ್ತಿಯಲ್ಲಿ 38, ಬಿ – ವ್ಯಾಪ್ತಿಯಲ್ಲಿ 471 ಕೇಸ್, ಭದ್ರಾವತಿ (bhadravati) ಉಪ ವಿಭಾಗ ವ್ಯಾಪ್ತಿಯಲ್ಲಿ 388 ಕೇಸ್, ಶಿಕಾರಿಪುರ (shikaripur) ಉಪ ವಿಭಾಗ ವ್ಯಾಪ್ತಿಯಲ್ಲಿ 350 ಪ್ರಕರಣಗಳು,
ಸಾಗರ (sagar) ಉಪ ವಿಭಾಗ ವ್ಯಾಪ್ತಿಯಲ್ಲಿ 172 ಪ್ರಕರಣಗಳು ಮತ್ತು ತೀರ್ಥಹಳ್ಳಿ (thirthahalli) ಉಪ ವಿಭಾಗ 146 ಪ್ರಕರಣಗಳು ಸೇರಿದಂತೆ ಒಟ್ಟು 1565 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.