
ಶಿವಮೊಗ್ಗ : ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿ ಶೀಟರ್ ಕಾಲಿಗೆ ಗುಂಡು!
ಶಿವಮೊಗ್ಗ (shivamogga), ಆ. 12: ಬಂಧಿಸಲು ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಲೆತ್ನಿಸಿದ ರೌಡಿ ಶೀಟರ್ (rowdy sheeter) ಓರ್ವನ ಕಾಲಿಗೆ ಗುಂಡು ಹಾರಿಸಿ, ಪೊಲೀಸರು ಬಂಧಿಸಿದ ಘಟನೆ ಆ. 12 ರ ಸೋಮವಾರ ಶಿವಮೊಗ್ಗ ನಗರದಲ್ಲಿ ನಡೆದಿದೆ.
ಭವಿತ್ (26) ಬಂಧಿತ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ವಿನೋಬನಗರ ಠಾಣೆ (vinobanagar police station) ಸಬ್ ಇನ್ಸ್’ಪೆಕ್ಟರ್ ಸುನೀಲ್ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ (shimoga sp) ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.
ಭವಿತ್ ವಿರುದ್ದ ಕೊಲೆ, ದರೋಡೆ, ಕೊಲೆ ಯತ್ನ ಸೇರಿದಂತೆ ಏಳು ಪ್ರಕರಣಗಳು (criminal cases) ದಾಖಲಾಗಿದ್ದವು. ಜಿಲ್ಲೆಯಿಂದ ಈತನನ್ನು ಗಡಿಪಾರುಗೊಳಿಸಲಾಗಿತ್ತು. ಶಿವಮೊಗ್ಗಕ್ಕೆ ಆರೋಪಿ ವಾಪಾಸ್ ಆಗಿದ್ದ.
ಭಾನುವಾರ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (jayanagara police station) ಅಮಾಯಕ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ, ಗಲಾಟೆ ಮಾಡಿದ್ದ. ಕೊಲೆಗೆ ಯತ್ನಿಸಿದ್ದ. ಆರೋಪಿ ಬಂಧನಕ್ಕೆ ಪಿಎಸ್ಐ ಸುನೀಲ್ ನೇತೃತ್ವದಲ್ಲಿ ಪೊಲೀಸ್ ತಂಡ ರಚಿಸಲಾಗಿತ್ತು ಎಂದು ಎಸ್ಪಿ ತಿಳಿಸಿದ್ದಾರೆ.
ಸುನೀಲ್ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಲು ತೆರಳಿದ ವೇಳೆ, ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನಿಸಿದ್ದ (accused tried to attack the police personnel). ದಾಳಿಯಿಂದ ಸಿಬ್ಬಂದಿ ಶ್ರೀಕಾಂತ್ ಎಂಬುವರು ಗಾಯಗೊಂಡಿದ್ದಾರೆ. ತಕ್ಷಣವೇ ಆತ್ಮ ರಕ್ಷಣೆ ಉದ್ದೇಶದಿಂದ ಸಬ್ ಇನ್ಸ್’ಪೆಕ್ಟರ್ ಆರೋಪಿ ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ (the accused was shot in the leg and arrested). ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.