shimoga | ಶಿವಮೊಗ್ಗ – 2 ದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ!

Disruption in drinking water supply in Shivamogga city on December 11th - 12th! ಶಿವಮೊಗ್ಗ ನಗರದಲ್ಲಿ ಡಿಸೆಂಬರ್ 11 - 12 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

ಶಿವಮೊಗ್ಗ (shivamogga), ಸೆ. 14: ಶಿವಮೊಗ್ಗ ನಗರದಲ್ಲಿ ಸೆ. 18 ಹಾಗೂ ಸೆ. 19 ರಂದು ಎರಡು ದಿನಗಳ ಕಾಲ ಕುಡಿಯುವ ನೀರು ಪೂರೈಕೆಯಲ್ಲಿ (drinking water supply) ವ್ಯತ್ಯಯವಾಗಲಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.

ಈ ಕುರಿತಂತೆ ಸೆ. 14 ರ ಶನಿವಾರ ಮಂಡಳಿಯು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ನಗರದ ಕೃಷ್ಣ ರಾಜೇಂದ್ರ ಜಲ ಶುದ್ದೀಕರಣ ಘಟಕ (water purification center)ಕ್ಕೆ, ಮಹಾನಗರ ಪಾಲಿಕೆ (corporation) ವತಿಯಿಂದ ಹೊಸದಾಗಿ ಭೂಗತ ಕೇಬಲ್ ಅಳವಡಿಸಲಾಗಿದೆ.

ಕೇಬಲ್ ಚಾಲನೆಗೊಳಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೆ. 18 ರಂದು ಜಲ ಶುದ್ಧೀಕರಣ ಘಟಕಕ್ಕೆ ವಿದ್ಯುತ್ ಪೂರೈಕೆ (power supply) ಯಲ್ಲಿ ವ್ಯತ್ಯಯವಾಗಲಿದೆ.

ಈ ಹಿನ್ನೆಲೆಯಲ್ಲಿ ಸೆ. 18 ಹಾಗೂ ಸೆ. 19 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ (variation in drinking water supply) ವಾಗಲಿದೆ. ಸಾರ್ವಜನಿಕರು ಸೂಕ್ತ ಸಹಕಾರ ನೀಡಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (the karnataka urban water supply and drainage board) ಪತ್ರಿಕಾ ಪ್ರಕಟಣೆಯಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿದೆ

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →