Shivamogga: Drinking water supply disrupted in various parts of the city on October 11th ಶಿವಮೊಗ್ಗ : ಅಕ್ಟೋಬರ್ 11 ರಂದು ನಗರದ ವಿವಿಧೆಡೆ ಕುಡಿಯುವ ನೀರು ವ್ಯತ್ಯಯ

shimoga | ಶಿವಮೊಗ್ಗ – 2 ದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ!

ಶಿವಮೊಗ್ಗ (shivamogga), ಸೆ. 14: ಶಿವಮೊಗ್ಗ ನಗರದಲ್ಲಿ ಸೆ. 18 ಹಾಗೂ ಸೆ. 19 ರಂದು ಎರಡು ದಿನಗಳ ಕಾಲ ಕುಡಿಯುವ ನೀರು ಪೂರೈಕೆಯಲ್ಲಿ (drinking water supply) ವ್ಯತ್ಯಯವಾಗಲಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತಿಳಿಸಿದೆ.

ಈ ಕುರಿತಂತೆ ಸೆ. 14 ರ ಶನಿವಾರ ಮಂಡಳಿಯು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ನಗರದ ಕೃಷ್ಣ ರಾಜೇಂದ್ರ ಜಲ ಶುದ್ದೀಕರಣ ಘಟಕ (water purification center)ಕ್ಕೆ, ಮಹಾನಗರ ಪಾಲಿಕೆ (corporation) ವತಿಯಿಂದ ಹೊಸದಾಗಿ ಭೂಗತ ಕೇಬಲ್ ಅಳವಡಿಸಲಾಗಿದೆ.

ಕೇಬಲ್ ಚಾಲನೆಗೊಳಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೆ. 18 ರಂದು ಜಲ ಶುದ್ಧೀಕರಣ ಘಟಕಕ್ಕೆ ವಿದ್ಯುತ್ ಪೂರೈಕೆ (power supply) ಯಲ್ಲಿ ವ್ಯತ್ಯಯವಾಗಲಿದೆ.

ಈ ಹಿನ್ನೆಲೆಯಲ್ಲಿ ಸೆ. 18 ಹಾಗೂ ಸೆ. 19 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ (variation in drinking water supply) ವಾಗಲಿದೆ. ಸಾರ್ವಜನಿಕರು ಸೂಕ್ತ ಸಹಕಾರ ನೀಡಬೇಕು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (the karnataka urban water supply and drainage board) ಪತ್ರಿಕಾ ಪ್ರಕಟಣೆಯಲ್ಲಿ ಸಾರ್ವಜನಿಕರಿಗೆ ಮನವಿ ಮಾಡಿದೆ

shimoga | holehonnuru | Rape case: 31-year-old man sentenced to 14 years - Rs.2.26 lakhs fined! ಅತ್ಯಾಚಾರ ಪ್ರಕರಣ : 31 ವರ್ಷದ ವ್ಯಕ್ತಿಗೆ 14 ವರ್ಷ ಕಠಿಣ ಜೈಲು ಶಿಕ್ಷೆ - 2. 26 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್! Previous post shimoga | holehonnuru | ಅತ್ಯಾಚಾರ ಪ್ರಕರಣ : 31 ವರ್ಷದ ವ್ಯಕ್ತಿಗೆ 14 ವರ್ಷ ಶಿಕ್ಷೆ – 2. 26 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್!
Shivamogga: Power outage in various places on July 20 th! ಶಿವಮೊಗ್ಗ : ಜು. 20 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Next post shimoga | power cut news | ಶಿವಮೊಗ್ಗ : ಸೆ. 18 ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ!