
bhadravati | ಭದ್ರಾವತಿ : ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಆರಂಭ
ಭದ್ರಾವತಿ (bhadravati), ಸೆ. 15: ಭದ್ರಾವತಿ ನಗರದ ಹೊಸಮನೆಯಲ್ಲಿ ಪ್ರತಿಷ್ಠಾಪಿಸಿರುವ, ಹಿಂದೂ ಮಹಾಸಭಾ ಗಣಪತಿ (hindu mahasabha ganapathi) ವಿಸರ್ಜನಾ ಪೂರ್ವ ಮೆರವಣಿಗೆಯು, ಸೆ. 15 ರ ಭಾನುವಾರ ಬಿಗಿ ಪೊಲೀಸ್ ಪಹರೆಯಲ್ಲಿ ಆರಂಭಗೊಂಡಿತು.
ಮೆರವಣಿಗೆ (ganesha idol procession) ಯಲ್ಲಿ ಅಪಾರ ಜನಸ್ತೋಮ ಭಾಗಿಯಾಗಿದೆ. ವಿವಿಧ ಕಲಾ ತಂಡಗಳು ಮೆರವಣಿಗೆಯ ರಂಗು ಹೆಚ್ಚಿಸಿದೆ. ಮೆರವಣಿಗೆ ಸಾಗುವ ರಸ್ತೆಗಳಲ್ಲಿ ಕೇಸರಿ ಧ್ವಜ, ಬಂಟಿಂಗ್ಸ್ ಗಳು ರಾರಾಜಿಸುತ್ತಿದ್ದವು.
ಪ್ರಮುಖ ವೃತ್ತಗಳಲ್ಲಿ ಆಕರ್ಷಕ ಮಹಾದ್ವಾರಗಳನ್ನು ನಿರ್ಮಿಸಲಾಗಿತ್ತು. ಮೆರವಣಿಗೆಯಲ್ಲಿ ವಿವಿಧ ಪಕ್ಷಗಳ ಹಾಗೂ ಸಂಘಸಂಸ್ಥೆಗಳ ಪ್ರಮುಖರು ಭಾಗಿಯಾಗಿದ್ದರು.
ಮಾರ್ಗ : ಮೆರವಣಿಗೆಯು ಹೊಸಮನೆಯ ಶಿವಾಜಿ ವೃತ್ತ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ, ಕೆ.ಎಸ್.ಆರ್.ಟಿ.ಸಿ ಮುಖ್ಯ ಬಸ್ ನಿಲ್ದಾಣ, ಲೋಯರ್ ಹುತ್ತಾದವರೆಗೆ ಸಾಗಲಿದೆ.
ನಂತರ ಹಿಂದಿರುಗಿ ಬಿ. ಹೆಚ್. ರಸ್ತೆ, ತರೀಕೆರೆ ರಸ್ತೆ, ಗಾಂಧಿ ವೃತ್ತದವರೆಗೆ ಸಾಗಿ ಸಂಜೆ ನಗರಸಭೆ ಮುಂಭಾಗದ ಭದ್ರಾ ನದಿಯಲ್ಲಿ ಗಣಪತಿಮೂರ್ತಿಯ ವಿಸರ್ಜನಾ ಕಾರ್ಯ ನಡೆಯಲಿದೆ.
ಬಿಗಿ ಭದ್ರತೆ : ಗಣಪತಿ ಮೆರವಣಿಗೆಗೆ ಸಾವಿರಾರು ಪೊಲೀಸರ (police security) ನಿಯೋಜಿಸಲಾಗಿತ್ತು. 2 ಹೆಚ್ಚುವರಿ ಎಸ್ಪಿ, 17 ಡಿವೈಎಸ್ಪಿ, 45 ಇನ್ಸ್’ಪೆಕ್ಟರ್ ಗಳು, 65 ಸಬ್ ಇನ್ಸ್’ಪೆಕ್ಟರ್ ಗಳು, 190 ಸಹಾಯಕ ಸಬ್ ಇನ್ಸ್’ಪೆಕ್ಟರ್ ಗಳು, 1450 ಹೆಡ್ ಕಾನ್ಸ್’ಟೇಬಲ್ ಮತ್ತು ಕಾನ್ಸ್’ಟೇಬಲ್ ಗಳು,
450 ಗೃಹ ರಕ್ಷಕ ದಳದ ಸಿಬ್ಬಂದಿಗಳು, 1 ಕ್ಷಿಪ್ರ ಕಾರ್ಯಾಚರಣೆ ಪಡೆ ತುಕುಡಿ (rapid action force), 5 ಡಿಎಆರ್ ತುಕುಡಿ, 1 ಕ್ಯೂಆರ್’ಟಿ ತುಕುಡಿ, 8 ಕೆಎಸ್ಆರ್’ಪಿ ತುಕುಡಿಗಳನ್ನು ಭದ್ರತೆಗೆ ಬಳಸಲಾಗಿತ್ತು. ಹಾಗೆಯೇ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ (cc camera) ಅಳವಡಿಸಲಾಗಿತ್ತು. ಮೆರವಣಿಗೆಯ ವೀಡಿಯೋ ಚಿತ್ರೀಕರಣ (video recording) ನಡೆಸಲಾಯಿತು.