
shimoga railway police | ಶಿವಮೊಗ್ಗ – ರೈಲ್ವೆ ಹಳಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆ!
ಶಿವಮೊಗ್ಗ (shivamogga), ಸೆ. 15: ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ತರೀಕೆರೆ – ಮೊಸರಹಳ್ಳಿ (tarikere – masarahalli) ನಡುವಿನ ರೈಲ್ವೆ ಹಳಿಯಲ್ಲಿ, ಅಪರಿಚಿತ ಪುರುಷನ ಶವ (Unidentified male dead body) ಪತ್ತೆಯಾದ ಘಟನೆ ಸೆ. 14 ರಂದು ನಡೆದಿದೆ.
ಈ ಕುರಿತಂತೆ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆ (shimoga railway police station) ಯು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಮೃತ ವ್ಯಕ್ತಿಯ ಹೆಸರು, ವಿಳಾಸ ಸೇರಿದಂತೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ಕರ್ತವ್ಯನಿರತ ರೈಲ್ವೆ ಇಲಾಖೆ ಗ್ಯಾಂಗ್ ಮನ್ ಓರ್ವರು, ಶವ ಗಮನಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಶವವನ್ನು ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ (govt meggan hospital) ಶವಾಗಾರದಲ್ಲಿರಿಸಲಾಗಿದೆ.
ಚಹರೆ : ಮೃತರಿಗೆ ಸರಿಸುಮಾರು 50 ರಿಂದ 55 ವರ್ಷವಿದೆ. 5. 6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ತಲೆಯಲ್ಲಿ ಸುಮಾರು 2 ಇಂಚು ಕಪ್ಪು – ಬಿಳಿ ಕೂದಲುಗಳಿದ್ದು ಹಿಂದೂ ಧರ್ಮೀಯರಂತೆ ಗೋಚರಿಸುತ್ತಾರೆ.
ಕಡು ಗಿಣಿ ಹಸಿರು ಬಣ್ಣದ ರೆಡಿಮೇಡ್ ಟೀ ಶರ್ಟ್, ಗಿಣಿ ಹಸಿರು ಬಣ್ಣದ ಚೆಕ್ಸ್ ಗೆರೆಗಳಿರುವ ಪಂಚೆ, ಗಿಣಿ ಹಸಿರು ಮತ್ತು ಬಿಳಿ ಬಣ್ಣದ ಉದ್ದ ಗೆರೆಗಳಿರುವ ಟವೆಲ್, ಕಾಫಿ ಬಣ್ಣದ ಅಂಡರ್’ವೆರ್ ಧರಿಸಿರುತ್ತಾರೆ.
ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್’ಪೆಕ್ಟರ್ ರವರನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ : 08182 -222974 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.