shimoga | obituary news | ಶಿವಮೊಗ್ಗ : 105 ವರ್ಷದ ನಂಜಮ್ಮ ವಿಧಿವಶ

shimoga | obituary news | Shimoga: 105-year-old Nanjamma passed away ಶಿವಮೊಗ್ಗ : 105 ವರ್ಷದ ನಂಜಮ್ಮ ವಿಧಿವಶ

ಶಿವಮೊಗ್ಗ (shivamogga), ಸೆ. 17: ಶಿವಮೊಗ್ಗ ನಗರದ ಹೊರವಲಯ ಗಾಡಿಕೊಪ್ಪದ ನಿವಾಸಿ 105 ವರ್ಷ ವಯೋಮಾನದ ಹಿರಿಯಜ್ಜಿ ಮಣ್ಣಪ್ಪರ ನಂಜಮ್ಮ ಅವರು, ವಯೋಸಹಜ ಕಾರಣಗಳ ಹಿನ್ನೆಲೆಯಲ್ಲಿ ಸೆ. 17 ರ ಸಂಜೆ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ.

ಮೃತರು ಪುತ್ರರು, ಪುತ್ರಿಯರು, ಮೊಮ್ಮಕ್ಕಳು, ಮರಿ ಮಕ್ಕಳು ಸೇರಿದಂತೆ ಅಪಾರ ಬಂಧು – ಬಳಗವನ್ನು ಅಗಲಿದ್ದಾರೆ. ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಸೆ. 18 ರ ಬುಧವಾರ ಮಧ್ಯಾಹ್ನ 2 ಗಂಟೆಯ ನಂತರ, ಗಾಡಿಕೊಪ್ಪ (gadikoppa) ದ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ಆರೋಗ್ಯವಾಗಿದ್ದರು : ‘ತಮ್ಮ ಅಜ್ಜಿಯು ಕೊನೆಯವರೆಗೂ ಆರೋಗ್ಯವಾಗಿಯೇ ಇದ್ದರು. ಅವರಿಗೆ ಯಾವುದೇ ಅನಾರೋಗ್ಯ ಸಮಸ್ಯೆಗಳೂ ಇರಲಿಲ್ಲ. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಅತ್ಯಂತ ಲವಲವಿಕೆಯಿಂದ ಓಡಾಡಿಕೊಂಡಿದ್ದರು’ ಎಂದು ಮೃತರ ಮೊಮ್ಮಗ ಹಾಗೂ ಶಿವಮೊಗ್ಗ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಮಧುಕುಮಾರ್ ಎಂ. ಜೆ. ಅವರು ತಿಳಿಸಿದ್ದಾರೆ.

ಸಂತಾಪ ಸೂಚನೆ : ಶತಾಯುಷಿ (centenarian) ಮಣ್ಣಪ್ಪರ ನಂಜಮ್ಮ ಅವರ ನಿಧನಕ್ಕೆ ಸ್ಥಳೀಯ ನಿವಾಸಿಗಳು ಹಾಗೂ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ. ಭಗವಂತ ಅಲಿದ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: www.udayasaakshi.@gmail.com Mobile : 9242987506

View all posts by B. Renukesha →