shimoga | obituary news | Shimoga: 105-year-old Nanjamma passed away ಶಿವಮೊಗ್ಗ : 105 ವರ್ಷದ ನಂಜಮ್ಮ ವಿಧಿವಶ

shimoga | obituary news | ಶಿವಮೊಗ್ಗ : 105 ವರ್ಷದ ನಂಜಮ್ಮ ವಿಧಿವಶ

ಶಿವಮೊಗ್ಗ (shivamogga), ಸೆ. 17: ಶಿವಮೊಗ್ಗ ನಗರದ ಹೊರವಲಯ ಗಾಡಿಕೊಪ್ಪದ ನಿವಾಸಿ 105 ವರ್ಷ ವಯೋಮಾನದ ಹಿರಿಯಜ್ಜಿ ಮಣ್ಣಪ್ಪರ ನಂಜಮ್ಮ ಅವರು, ವಯೋಸಹಜ ಕಾರಣಗಳ ಹಿನ್ನೆಲೆಯಲ್ಲಿ ಸೆ. 17 ರ ಸಂಜೆ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ.

ಮೃತರು ಪುತ್ರರು, ಪುತ್ರಿಯರು, ಮೊಮ್ಮಕ್ಕಳು, ಮರಿ ಮಕ್ಕಳು ಸೇರಿದಂತೆ ಅಪಾರ ಬಂಧು – ಬಳಗವನ್ನು ಅಗಲಿದ್ದಾರೆ. ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ಸೆ. 18 ರ ಬುಧವಾರ ಮಧ್ಯಾಹ್ನ 2 ಗಂಟೆಯ ನಂತರ, ಗಾಡಿಕೊಪ್ಪ (gadikoppa) ದ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ಆರೋಗ್ಯವಾಗಿದ್ದರು : ‘ತಮ್ಮ ಅಜ್ಜಿಯು ಕೊನೆಯವರೆಗೂ ಆರೋಗ್ಯವಾಗಿಯೇ ಇದ್ದರು. ಅವರಿಗೆ ಯಾವುದೇ ಅನಾರೋಗ್ಯ ಸಮಸ್ಯೆಗಳೂ ಇರಲಿಲ್ಲ. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಅತ್ಯಂತ ಲವಲವಿಕೆಯಿಂದ ಓಡಾಡಿಕೊಂಡಿದ್ದರು’ ಎಂದು ಮೃತರ ಮೊಮ್ಮಗ ಹಾಗೂ ಶಿವಮೊಗ್ಗ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಮಧುಕುಮಾರ್ ಎಂ. ಜೆ. ಅವರು ತಿಳಿಸಿದ್ದಾರೆ.

ಸಂತಾಪ ಸೂಚನೆ : ಶತಾಯುಷಿ (centenarian) ಮಣ್ಣಪ್ಪರ ನಂಜಮ್ಮ ಅವರ ನಿಧನಕ್ಕೆ ಸ್ಥಳೀಯ ನಿವಾಸಿಗಳು ಹಾಗೂ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ. ಭಗವಂತ ಅಲಿದ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

scholarship news | What is the truth behind the 'viral news' of the scholarship scheme for fatherless children? What are the criteria? ತಂದೆ ಇಲ್ಲದ ಮಕ್ಕಳಿಗೆ ಸ್ಕಾಲರ್ ಶಿಪ್ ಯೋಜನೆ ‘ವೈರಲ್ ಸುದ್ದಿ’ಯ ಸತ್ಯಾಂಶವೇನು? ಮಾನದಂಡಗಳೇನು? Previous post scholarship news | ತಂದೆ ಇಲ್ಲದ ಮಕ್ಕಳಿಗೆ ಸ್ಕಾಲರ್ ಶಿಪ್ ಯೋಜನೆ ‘ವೈರಲ್ ಸುದ್ದಿ’ಯ ಸತ್ಯಾಂಶವೇನು? ಮಾನದಂಡಗಳೇನು?
Kerala: A man died after getting an idli stuck in his throat - a tragedy in an idli eating competition! ಕೇರಳ : ಗಂಟಲಲ್ಲಿ ಇಡ್ಲಿ ಸಿಲುಕಿ ಮೃತಪಟ್ಟ ವ್ಯಕ್ತಿ – ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ನಡೆದ ದುರಂತ! Next post kerala | ಕೇರಳ : ಗಂಟಲಲ್ಲಿ ಇಡ್ಲಿ ಸಿಲುಕಿ ಮೃತಪಟ್ಟ ವ್ಯಕ್ತಿ – ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ನಡೆದ ದುರಂತ!