sagara crime news | Hubli man was arrested for money at Sagar bus station! ಸಾಗರ ಬಸ್ ನಿಲ್ದಾಣದಲ್ಲಿ ಹಣ ಎಗರಿಸಿದ್ದ ಹುಬ್ಬಳ್ಳಿ ವ್ಯಕ್ತಿ ಸೆರೆ : ವಾರಸುದಾರರಿಗೆ ನಗದು ಹಸ್ತಾಂತರಿಸಿದ ಪೊಲೀಸರು!

sagara crime news | ಸಾಗರ ಬಸ್ ನಿಲ್ದಾಣದಲ್ಲಿ ಹಣ ಎಗರಿಸಿದ್ದ ಹುಬ್ಬಳ್ಳಿ ವ್ಯಕ್ತಿ ಸೆರೆ!

ಸಾಗರ (sagara), ಸೆ. 25: ಸಾಗರ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ (ksrtc bus stand) ದಲ್ಲಿ ಪ್ರಯಾಣಿಕರೋರ್ವರ ಬ್ಯಾಗ್ ನಿಂದ ಹಣ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಧಾರವಾಡ ಜಿಲ್ಲೆ ಹುಬ್ಬಳ್ಳಿಯ (hubballi) ಸೆಟಲ್ಮೆಂಟ್ ಕಾಲೋನಿ ನಿವಾಸಿ ಪರಶುರಾಮ ಕ್ಯಾರಕಟ್ಟೆ (32) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ ಕಳವು ಮಾಡಿದ್ದ 1 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಮೇಲ್ವಿಚಾರಣೆಯಲ್ಲಿ ಪೇಟೆ ಠಾಣೆ ಇನ್ಸ್’ಪೆಕ್ಟರ್ ಬಿ ಸೀತಾರಾಮ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಗಳಾದ ನಾಗರಾಜ ಟಿ ಎಂ, ಯಲ್ಲಪ್ಪ ಹಿರಗಣ್ಣವರ, ಸಾಗರ್ಕರ್,

ಸಿಬ್ಬಂದಿಗಳಾದ ಸನಾವುಲ್ಲಾ, ವಿಕಾಶ್, ವಿಶ್ವನಾಥ, ಕೃಷ್ಣಮೂರ್ತಿ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಸದರಿ ಅಧಿಕಾರಿ – ಸಿಬ್ಬಂದಿಗಳ ಯಶಸ್ವಿ ಕಾರ್ಯಾಚರಣೆಗೆ ಎಸ್ಪಿ ಜಿ. ಕೆ. ಮಿಥುನ್ ಕುಮಾರ್ ಅಭಿನಂದಿಸಿದ್ದಾರೆ.

ಪ್ರಕರಣ ಹಿನ್ನೆಲೆ : 26-08-2024 ರಂದು ಮದ್ಯಾಹ್ನ ಸಾಗರ ಪಟ್ಟಣದ ಪರಮೇಶ್ವರ್ (32) ಅವರು ಸರ್ಕಾರಿ ಬಸ್ ನಿಲ್ದಾಣದಲ್ಲಿ ಊರೊಂದಕ್ಕೆ ತೆರಳಲು, ಬಸ್ ಗೆ ಕಾದು ನಿಂತಿದ್ದರು. ಈ ವೇಳೆ ಅವರ ಬ್ಯಾಗ್ ನಲ್ಲಿದ್ದ ಹಣವನ್ನು ಅಪಹರಿಸಲಾಗಿತ್ತು. ಈ ಸಂಬಂಧ ಅವರು ಪೇಟೆ ಪೊಲೀಸ್ ಠಾಣೆ (town police station) ಯಲ್ಲಿ ದೂರು ದಾಖಲಿಸಿದ್ದರು.

sagara crime news : The police have succeeded in arresting the accused, who had stolen money from a passenger’s bag at the KSRTC bus station in Sagar town.

'Not afraid of investigation : gear up for legal fight' - CM Siddaramaiah ತನಿಖೆಗೆ ಹೆದರಲ್ಲ : ಕಾನೂನಾತ್ಮಕ ಹೋರಾಟಕ್ಕೆ ಸಜ್ಜು: ಸಿಎಂ ಸಿದ್ದರಾಮಯ್ಯ Previous post muda case | ‘ತನಿಖೆಗೆ  ಹೆದರಲ್ಲ : ಕಾನೂನಾತ್ಮಕ ಹೋರಾಟಕ್ಕೆ ಸಜ್ಜು’ – ಸಿಎಂ ಸಿದ್ದರಾಮಯ್ಯ
Functioning of KPSC on UPSC Pattern : Chief Minister's Notice ಯುಪಿಎಸ್ಸಿ ಮಾದರಿಯಲ್ಲಿ ಕೆಪಿಎಸ್ಸಿ ಕಾರ್ಯನಿರ್ವಹಣೆ: ಮುಖ್ಯಮಂತ್ರಿ ಸೂಚನೆ Next post bengaluru news | ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ಕಾರ್ಯನಿರ್ವಹಣೆ : CM ಸೂಚನೆ