sagara news | ಸಾಗರ : ಡಿವೈಡರ್ ಮೇಲೇರಿದ ಸರ್ಕಾರಿ ಬಸ್, ಪಲ್ಟಿಯಾದ ಕಾರು!

Sagara: Government bus climbs divider car overturns!ಸಾಗರ : ಡಿವೈಡರ್ ಮೇಲೇರಿದ ಸರ್ಕಾರಿ ಬಸ್ - ಪಲ್ಟಿಯಾದ ಕಾರು!

ಸಾಗರ (sagara), ಮಾರ್ಚ್ 24: ಸಾಗರ ನಗರದ ಬಿ ಹೆಚ್ ರಸ್ತೆಯಲ್ಲಿ ಡಿವೈಡರ್ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಸದರಿ ಡಿವೈಡರ್ ಕಾಮಗಾರಿಯು ಅಪಘಾತಗಳಿಗೆ ಎಡೆ ಮಾಡಿಕೊಡಲಾರಂಭಿಸಿದೆ. ಒಂದಿಲ್ಲೊಂದು ಅವಘಡಗಳಿಗೆ ಕಾರಣವಾಗುವಂತಾಗಿದೆ ಎಂದು ನಾಗರಿಕರು ದೂರಿದ್ದಾರೆ.

ಇದಕ್ಕೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಅಪಘಾತಗಳು ಸಾಕ್ಷಿಯಾಗಿವೆ. ಮಾರ್ಚ್ 24 ರ ಸಂಜೆ ಕೆಲ ಗಂಟೆಗಳ ಅಂತರದಲ್ಲಿ ಎರಡು ಅಪಘಾತಗಳು ಸಂಭವಿಸಿರುವುದು ಡಿವೈಡರ್ ಕಾಮಗಾರಿ ಅವಾಂತರಕ್ಕೆ ಸಾಕ್ಷಿಯಾಗಿದೆ.

ಯುಟಿಕೋ ಪೆಟ್ರೋಲ್ ಬಂಕ್ ಬಳಿ ಕೆಎಸ್ಆರ್’ಟಿಸಿ ಬಸ್ ವೊಂದು ಡಿವೈಡರ್ ಮೇಲೆರಿ ನಿಂತ ಘಟನೆ ನಡೆದಿದೆ. ಅದೃಷ್ಟಾವಶಾತ್ ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ. ಆದರೆ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ತಕ್ಷಣವೇ ಸ್ಥಳೀಯರ ನೆರವಿನೊಂದಿಗೆ ಸ್ಥಳದಿಂದ ಬಸ್ ತೆರವುಗೊಳಿಸಿ, ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಸದರಿ ಘಟನೆ ನಡೆದ ಕೆಲ ಸಮಯದಲ್ಲಿಯೇ ಬಿ ಹೆಚ್ ರಸ್ತೆಯಲ್ಲಿ ಕಾರೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದೆ. ಸದರಿ ಅಪಘಾತದ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

ಡಿವೈಡರ್ ನಿರ್ಮಾಣದ ವೇಳೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳ ಪಾಲನೆ ಮಾಡುತ್ತಿಲ್ಲವೆಂಬ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ತಕ್ಷಣವೇ ಆಡಳಿತ ಎಚ್ಚೆತ್ತುಕೊಂಡು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ.

Sagara: Government bus climbs divider, car overturns!

Sagara, March 24: Divider construction work is underway on BH Road in Sagara city. However, this ongoing work has started to cause accidents. Citizens complain that it has become a source of repeated mishaps.

The continuous accidents over the past few days stand as proof. On the evening of March 24, within just a few hours, two accidents occurred, highlighting the dangers of the divider construction.

Near the Utico petrol bunk, a KSRTC bus mounted the divider and came to a halt. Fortunately, no one was harmed in the incident. However, traffic was thrown into chaos. With the help of locals, the bus was removed from the spot, and traffic flow was restored.

Shortly after this incident, another accident occurred on BH Road when a car overturned. More details about this accident are yet to be received.

Public complaints suggest that proper safety precautions are not being followed during the divider construction. Citizens insist that the administration must act immediately and take necessary measures.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *