shimoga accident news | ಶಿವಮೊಗ್ಗ – ಅಪರಿಚಿತ ವಾಹನ ಡಿಕ್ಕಿ : ಸ್ಥಳದಲ್ಲಿಯೇ ಎಮ್ಮೆ ಸಾವು!
ಶಿವಮೊಗ್ಗ (shivamogga), ಅ. 3: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ, ಎಮ್ಮೆಯೊಂದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಶಿವಮೊಗ್ಗ ನಗರದ ಹೊರವಲಯ ಸೋಮಿನಕೊಪ್ಪದ ಬಳಿ ಅ. 3 ರ ಮಧ್ಯಾಹ್ನ ನಡೆದಿದೆ.
ರಾಜ್ಯ ಹೆದ್ದಾರಿಯಲ್ಲಿ (state highway) ಈ ಅಪಘಾತ ಸಂಭವಿಸಿದೆ. ವಾಹನದ ಡಿಕ್ಕಿಯ ರಭಸಕ್ಕೆ ಎಮ್ಮೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದು, ರಕ್ತಸ್ರಾವದಿಂದ ಸ್ಥಳದಲ್ಲಿಯೇ ಅಸುನೀಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸ್ಥಳೀಯ ಸೋಮಿನಕೊಪ್ಪದ (sominakoppa) ಜಾನುವಾರು ಪಾಲಕರೋರ್ವರಿಗೆ ಸದರಿ ಎಮ್ಮೆ ಸೇರಿದ್ದಾಗಿದೆ. ಅಪಘಾತ ಪಡಿಸಿದ ವಾಹನದ ಕುರಿತಂತೆ ಇನ್ನಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.
ನಿರಂತರ ಅಪಘಾತ : ಸದರಿ ರಾಜ್ಯ ಹೆದ್ಧಾರಿಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಿದೆ. ಸೋಮಿನಕೊಪ್ಪದವರೆಗೆ ಮಾತ್ರ ಚತುಷ್ಪಥ ಮಾರ್ಗವಿದ್ದು, ಅಲ್ಲಿಂದ ನಂತರ ರಸ್ತೆ ಸಂಪೂರ್ಣ ಕಿರಿದಾಗಿದೆ. ಇದರಿಂದ ಹೆದ್ದಾರಿಯಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಪಿಡಬ್ಲ್ಯೂಡಿ (pwd) ಇಲಾಖೆಯು ಸದರಿ ಹೆದ್ದಾರಿಯನ್ನು ವೈಜ್ಞಾನಿಕವಾಗಿ ಅಗಲೀಕರಣಗೊಳಿಸಿ, ಸುಗಮ ಜನ – ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
A buffalo died on the spot after being hit by an unknown vehicle near Sominakoppa on the outskirts of Shimoga city. The accident took place on the state highway. Locals have informed that the buffalo suffered a severe injury due to the impact of the vehicle and died on the spot due to bleeding.
